ಪ್ರಧಾನಿ ಮೋದಿ ಸರ್ಕಾರದ ತಟ್ಟೆ ಊಟದ ಅರ್ಥಶಾಸ್ತ್ರ..! – ವರ್ಷಕ್ಕೆ 11 ಸಾವಿರ ರೂ. ಗಳಿಕೆ..!

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಇವತ್ತು ಮಂಡಿಸಿದ ಆರ್ಥಿಕ ಸಮೀಕ್ಷೆಯಲ್ಲಿ ಊಟದ ಅರ್ಥಶಾಸ್ತ್ರವನ್ನು ಹೇಳಿದೆ. ಆ ಅರ್ಥಶಾಸ್ತ್ರದ ಪ್ರಕಾರ ಪ್ರತಿ ಮನೆಯಲ್ಲೂ 11 ಸಾವಿರ ರೂಪಾಯಿಯಷ್ಟು ಗಳಿಕೆ ಆಗಿದೆ.

ಊಟದ ಆರ್ಥಶಾಸ್ತ್ರದ ಪ್ರಕಾರ 2006-2007ಕ್ಕೆ ಹೋಲಿಸಿದ್ರೆ 2019-2020ರಲ್ಲಿ ಸಸ್ಯಹಾರದ ಬೆಲೆ ಶೇಕಡಾ 29ರಷ್ಟು ಮತ್ತು ಮಾಂಸಹಾರದ ಬೆಲೆಯಲ್ಲಿ ಶೇಕಡಾ 18ರಷ್ಟು ಇಳಿಕೆ ಆಗಿದೆ. ಇದನ್ನೇ ರೂಪಾಯಿ ಲೆಕ್ಕಾಚಾರದಲ್ಲಿ ಹಾಕಿದರೆ ಐದು ಜನರಿರುವ ಎರಡು ಹೊತ್ತು ಊಟ ಮಾಡುವ ಸಸ್ಯಹಾರಿ ಕುಟುಂಬಕ್ಕೆ ವರ್ಷಕ್ಕೆ 10,887 ರೂಪಾಯಿ ಮತ್ತು ಮಾಂಸಾಹಾರ ಸೇವಿಸುವ ಕುಟುಂಬಕ್ಕೆ 11,787 ರೂ. ಗಳಿಕೆ ಆಗಿದೆಯಂತೆ.

ಈರುಳ್ಳಿ ಬೆಲೆ, ತರಕಾರಿ, ದವಸ-ಧಾನ್ಯಗಳು ಮತ್ತು ಅಡುಗೆ ಅನಿಲ ಬೆಲೆ ಏರಿಕೆಯ ನಡುವೆಯೂ ಮೋದಿ ಸರ್ಕಾರ ಕಡಿಮೆ ಬೆಲೆಗೆ ಜನರಿಗೆ ಊಟ ಸಿಗುತ್ತಿದೆ ಎಂದು ಅಂದಾಜಿಸಿದೆ. ಆದ್ರೆ ಸಮೀಕ್ಷೆ ಪ್ರಕಾರ ತರಕಾರಿ ಮತ್ತು ಬೇಳೆಯ ಬೆಲೆ ಇಳಿಕೆ ಆಗಿದ್ದರಿಂದ ಊಟದ ಬೆಲೆಯೂ ಇಳಿದಿದೆ ಎಂದು ಸಮೀಕ್ಷೆ ಅಂದಾಜಿಸಿದೆ.

LEAVE A REPLY

Please enter your comment!
Please enter your name here