ಪ್ರಧಾನಿ ಮೋದಿ ಸರ್ಕಾರಕ್ಕೆ ಬಜೆಟ್‌ ಶಾಕ್‌ – 2 ಲಕ್ಷ ಕೋಟಿ ರೂ. ಆದಾಯ ಖೋತಾ

ಫೆಬ್ರವರಿ 1ರಂದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ 7ನೇ ಬಜೆಟ್‌ ಮಂಡನೆ ಆಗಲಿದ್ದು, ಸದ್ಯ ಮೋದಿ ಸರ್ಕಾರಕ್ಕೆ 2 ಲಕ್ಷ ಕೋಟಿ ರೂಪಾಯಿಗಳ ಆದಾಯದ ಕೊರತೆ ಉಂಟಾಗಿದೆ.

ಆದಾಯ ತೆರಿಗೆ ಅಂದರೆ ನೇರ ತೆರಿಗೆ ಸಂಗ್ರಹ 1.5 ಲಕ್ಷ ಕೋಟಿ ರೂಪಾಯಿಯಿಂದ 1.8 ಲಕ್ಷ ಕೋಟಿ ರೂಪಾಯಿಯಷ್ಟು ಇಳಿಕೆ ಆಗಿದೆ. ಪರೋಕ್ಷ ತೆರಿಗೆ ಸಂಗ್ರಹ 30 ಸಾವಿರ ಕೋಟಿ ರೂಪಾಯಿಯಿಂದ 60 ಸಾವಿರ ಕೋಟಿ ರೂಪಾಯಿಯಷ್ಟು ಖೋತಾ ಆಗಿದೆ.

ಆದಾಯ ಖೋತಾ ಫೆಬ್ರವರಿ ತಿಂಗಳ ಮೊದಲ ದಿನ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸುವ ಬಜೆಟ್‌ ಘೋಷಣೆಗಳ ಮೇಲೆ ಪರಿಣಾಮ ಬೀರುವ ಬೀಳಲಿದೆ ಎಂದು ಅಂದಾಜಿಸಲಾಗಿದೆ.

ದೇಶದ ಆರ್ಥಿಕ ಸ್ಥಿತಿ ಕುಸಿದಿರುವ ಹಿನ್ನೆಲೆಯಲ್ಲಿ ತೆರಿಗೆ ಸಂಗ್ರಹದಲ್ಲಿ ಇಳಿಕೆ ಆಗಿದೆ ಎನ್ನುವುದು ತಜ್ಞರ ಅಭಿಪ್ರಾಯ

LEAVE A REPLY

Please enter your comment!
Please enter your name here