ಪ್ರಧಾನಿ ಮೋದಿ, ಶಾ ಅವರ ತಂದೆಯ ದಾಖಲೆ ತರುತ್ತಾರಾ..? – ಜಮೀರ್‌ ಸವಾಲು

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಮೊದಲು ತಮ್ಮ ತಂದೆ, ತಾತನ ದಾಖಲೆ ಇದ್ಯಾ..? ದಾಖಲೆ ತಂದು ತೋರಿಸ್ತೀರಾ..? ನೀವು ದಾಖಲೆ ತನ್ನಿ, ಆಮೇಲೆ ನಾವು ನಮ್ಮ ದಾಖಲೆ ತರುತ್ತೇವೆ. ಇದು ಚಾಮರಾಜಪೇಟೆ ಕಾಂಗ್ರೆಸ್‌ ಶಾಸಕ ಮತ್ತು ಮಾಜಿ ಸಚಿವ ಜಮೀರ್‌ ಅಹ್ಮದ್‌ಖಾನ್‌ ಹಾಕಿದ ಸವಾಲು.

ಬೆಂಗಳೂರಿನ ಗೋರಿಪಾಳ್ಯದಲ್ಲಿರುವ ಈದ್ಗಾ ಮೈದಾನದಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ನಡೆದ ಬೃಹತ್‌ ಸಮಾವೇಶದಲ್ಲಿ ಮಾತಾಡಿದ ಜಮೀರ್‌ ಸಚಿವನಾಗಿದ್ದರೂ ದಾಖಲೆಯನ್ನು ಸಿದ್ಧಪಡಿಸಿಕೊಳ್ಳುವುದಕ್ಕೆ ನನಗೆ ನಾಲ್ಕು ತಿಂಗಳು ಬೇಕಾಯ್ತು. ನಮಗೆ ಪ್ರಧಾನಿ ಬಗ್ಗೆ ಗೌರವವಿದೆ, ಆದರೆ ಭಯ ಅಲ್ಲ. ಯಾರಿಗೂ ಹೆದರ ಬೇಕಾದ ಅಗತ್ಯವಿಲ್ಲ.

ವಿದ್ಯಾರ್ಥಿಗಳೇ ಕೇಂದ್ರ ಸರ್ಕಾರದ ವಿರುದ್ಧ ಸಿಡಿದು ನಿಂತಿದ್ದಾರೆ. ಬಿಹಾರ, ಒರಿಸ್ಸಾದಲ್ಲೇ ಕಾಯ್ದೆ ಜಾರಿಗೆ ತರಲ್ಲ ಎಂದಿದ್ದಾರೆ. ಪ್ರಧಾನಿಯವರು ಪಾಕಿಸ್ತಾನದ ಬಗ್ಗೆ ಯೋಚನೆ ಮಾಡುವ ಬದಲು ಭಾರತದಲ್ಲಿರುವವರ ಬಗ್ಗೆ ಯೋಚನೆ ಮಾಡಲಿ. ಪೌರತ್ವ ಕಾಯ್ದೆ ವಿರುದ್ಧದ ಹೋರಾಟದಲ್ಲಿ ಕೇವಲ ಮುಸ್ಲಿಮರು ಮಾತ್ರವಲ್ಲ, ದಲಿತರೂ ಪಾಲ್ಗೊಂಡಿದ್ದಾರೆ. ಮುಸಲ್ಮಾನರ ತ್ಯಾಗ ಬಲಿದಾನಗಳಿಂದ ಸ್ವಾತಂತ್ರ್ಯ ಸಿಕ್ಕಿದೆ ಎಂದು ಜಮೀರ್‌ ಹೇಳಿದ್ದಾರೆ.

LEAVE A REPLY

Please enter your comment!
Please enter your name here