ಪ್ರಧಾನಿ ಮೋದಿ ಭಾಷಣ… ಲೈವ್ ಅಪ್‍ಡೇಟ್ಸ್ .. 20 ಲಕ್ಷ ಕೊಟಿ ರೂಪಾಯಿ ಪ್ಯಾಕೇಜ್ ಘೋಷಣೆ

ದೇಶವನ್ನು ಉದ್ದೇಶಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣ

ದೇಶದ ಎಲ್ಲರಿಗೂ ನಮಸ್ಕಾರ
> ಕೋರೋನಾ ವಿರುದ್ಧದ ಮುಖಾಮುಖಿಯಾಗಿ ನಾಲ್ಕು ತಿಂಗಳು ಕಳೆದಿವೆ

ಭಾರತದಲ್ಲಿ ಅನೇಕ ಕುಟುಂಬಗಳು ಕೊರೋನಾದಿಂದ ಸಂಕಷ್ಟಕ್ಕೆ ತುತ್ತಾಗಿವೆ. ಹಲವರು ಸಾವನ್ನಪ್ಪಿದ್ದಾರೆ
> ಒಂದು ವೈರಸ್ ಇಡೀ ಜಗತ್ತನ್ನು ಕಂಗೆಡಿಸಿಬಿಟ್ಟಿದೆ.. ಇಡೀ ವಿಶ್ವ ಸಂಕಟದಲ್ಲಿದೆ

ನಾವೀಗ ಕೊರೋನಾದಿಂದ ಪಾರಾಗಬೇಕು.. ಅಷ್ಟೇ ಅಲ್ಲ, ಮುಂದುವರೆಯಬೇಕು

> ಕಳೆದ ಒಂದು ದಶಕದಿಂದ 21ನೇ ಶತಮಾನ ನಮ್ಮದು ಎಂದು ಹೇಳಿಕೊಂಡೇ ಬಂದಿದ್ದೇವೆ

ಸಂಸ್ಕೃತ ಶ್ಲೋಕ ಪಠಿಸಿದ ಮೋದಿ.. ಆತ್ಮ ನಿರ್ಭರ ಭಾರತ

> ಕೋರೋನಾ ಬಂದಾಗ ಒಂದೇ ಒಂದು ಪಿಪಿ ಕಿಟ್ ಇರಲಿಲ್ಲ. ಎನ್-95 ಮಾಸ್ಕ್ ಇತ್ತು. ಆದರೆ, ಇಂದು ದಿನಕ್ಕೆ 2 ಲಕ್ಷ ಪಿಪಿಇ ಕಿಟ್ ತಯಾರು ಮಾಡಲಾಗುತ್ತಿದೆ. ದೇಶದ ಅವಸರಕ್ಕೆ ತಕ್ಕಂತೆ ನಾವು ಉತ್ಪಾದನೆ ಮಾಡಿದ್ದೇವೆ

ಇಂದು ದೇಶದ ಸಂಸ್ಕೃತಿ, ಸಂಸ್ಕಾರದ ಬಗ್ಗೆ ಜಗತ್ತು ಮಾತನಾಡುತ್ತಿದೆ.
> ದೇಶದ ಪ್ರಗತಿ, ವಿಶ್ವದ ಪ್ರಗತಿಗೆ ಸಮನಾಗಿರಬೇಕು.

> ಕೊರೋನಾ ವೇಳೆ ಭಾರತದ ಔಷಧ ಜಗತ್ತಿಗೆ ಬೇಕಾಯಿತು.. ಇದು ದೇಶವೇ ಗರ್ವ ಪಡುವ ವಿಚಾರ.. ಮಾನವ ಕಲ್ಯಾಣಕ್ಕೆ ನಮ್ಮ ದೇಶದ ಕೊಡುಗೆ ಇದೆ

ಶತಮಾನದಲ್ಲಿ ಆರಂಭದಲ್ಲಿ ವೈ2ಕೆ ಸಮಸ್ಯೆ ಎದುರಾಗಿತ್ತು. ಅದನ್ನು ನಿವಾರಿಸಿದ್ದು ನಮ್ಮ ದೇಶದ ಪ್ರತಿಭಾವಂತರೇ

ಕಛ್ ಭೂಕಂಪವನ್ನು ನಾನು ಕಣ್ಣಾರೆ ಕಂಡಿದ್ದೇ.. ಅಂತಹ ದೃಶ್ಯವನ್ನು ನೋಡಲು ಸಾಧ್ಯವಾಗಿರಲಿಲ್ಲ. ಆದರೆ, ಅದನ್ನು ಈಗ ಕಛ್ ಮೆಟ್ಟಿ ನಿಂತಿದೆ. ಯಾವುದು ಅಸಂಭವ ಅಲ್ಲ.

ಆರ್ಥಿಕ ಚೇತರಿಕೆಯ ಮಂತ್ರ ಪಠಿಸಿದ ನರೇಂದ್ರ ಮೋದಿ.. ದೇಶದಲ್ಲಿ ಬೇಡಿಕೆ, ಪೂರೈಕೆಯ ಚೈನ್ ಅನ್ನು ಮತ್ತಷ್ಟು ಬಲಿಷ್ಠಗೊಳಿಸಬೇಕು

ಕೊರೋನಾ ಸಂಕಟದ ಸಂದರ್ಭದಲ್ಲಿ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ

20 ಲಕ್ಷ ಕೊಟಿ ರೂಪಾಯಿ ಪ್ಯಾಕೇಜ್ ಘೋಷಣೆ
> ದೇಶದ ವಿಭಿನ್ನ ವರ್ಗಕ್ಕೆ 20 ಲಕ್ಷ ಕೋಟಿ ರೂ. ನೆರವು

ದೇಶದ ಶ್ರಮಿಕರು, ರೈತರು, ಬಡವರು, ಮಧ್ಯಮ ವರ್ಗ, ಉದ್ಯಮಿಗಳಿಗೆ ಈ ಪ್ಯಾಕೇಜ್‍ನಿಂದ ಅನುಕೂಲ ಆಗಲಿದೆ

> ನಾಳೆ ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಿದ್ದಾರೆ

 

LEAVE A REPLY

Please enter your comment!
Please enter your name here