ಪ್ರಧಾನಿ ಮೋದಿ ಬಳಿಕ ದೇಶದ ಪ್ರಧಾನಿ ಯಾರು..? – ಕಾದಂಬರಿಕಾರ ಎಸ್‌ಎಲ್‌ ಬೈರಪ್ಪ ಪ್ರಶ್ನೆ

ಪೌರತ್ವ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ವಿದ್ಯಾರ್ಥಿಗಳ ಹೋರಾಟಕ್ಕೆ ಖ್ಯಾತ ಕಾದಂಬರಿಕಾರ ಎಸ್‌ ಎಲ್‌ ಬೈರಪ್ಪ ವಿರೋಧ ವ್ಯಕ್ತಪಡಿಸಿದ್ದಾರೆ. ಮೈಸೂರಲ್ಲಿ ಮಾತಾಡಿದ ಅವರು, ಈ ದೇಶದಲ್ಲಿ ಬ್ರಿಟಿಷರು ಯಾವ ತಂತ್ರವನ್ನು ಮಾಡಿದ್ದರೋ ಅದೇ ತಂತ್ರವನ್ನು ಜವಾಹರ್‌ಲಾಲ್‌ ನೆಹರು ಮಾಡಿದ್ದರು. ಹಿಂದೂಗಳನ್ನು ಜಾತಿಗಳಿಂದ ಒಡೆದರು. ಮುಸ್ಲಿಮರನ್ನು ವೋಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ಬಳಸಿಕೊಂಡರು. ಇದೇ ಕಾಂಗ್ರೆಸ್‌ ಪಕ್ಷದ ಐಡಿಯಾಲಜಿ ಎಂದು ಬೈರಪ್ಪ ಆಕ್ರೋಶ ಹೊರಹಾಕಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಒಬ್ಬ ಸನ್ಯಾಸಿ. ಮೋದಿಯನ್ನು ಟೀಕೆ ಮಾಡುವುದು ಕಾಂಗ್ರೆಸ್‌ ಕೆಲ್ಸವಾಗಿದೆ. ಮೋದಿಯನ್ನು ಅಧಿಕಾರದಿಂದ ಇಳಿಸುವುದೇ ಗುರಿ ಆಗಿದೆ. ಇವರ ನಂತರ ದೇಶದ ಪ್ರಧಾನಿ ಯಾರು ಎಂದು ಬೈರಪ್ಪ ಪ್ರಶ್ನಿಸಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಪ್ರತ್ಯೇಕ ಸ್ಥಾನಮಾನವನ್ನು ತೆಗೆದು ಪ್ರಧಾನಿ ಮೋದಿ ಧೈರ್ಯದ ಕೆಲಸ ಮಾಡಿದ್ದಾರೆ. ಜೆಎನ್‌ಯು ವಿದ್ಯಾರ್ಥಿಗಳನ್ನು ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ. ತಮ್ಮ ಶೈಕ್ಷಣಿನ ವ್ಯವಸ್ಥೆ ಬಗ್ಗೆಯಷ್ಟೇ ವಿದ್ಯಾರ್ಥಿಗಳು ಕೇಳಬೇಕು. ನಾನೂ ಉಪನ್ಯಾಸಕನಾಗಿ ಇದ್ದವನು. ದೇಶದಲ್ಲಿ ಶಿಕ್ಷಣದ ಮಟ್ಟ ಕುಸಿದಿದೆ. ವಿದ್ಯಾರ್ಥಿಗಳನ್ನು ಅಡ್ಡದಾರಿಗೆ ಎಳೆಯಲಾಗುತ್ತಿದೆ ಎಂದು ಬೈರಪ್ಪ ಸಿಟ್ಟು ಹೊರಹಾಕಿದರು.

ನಾನು ಸುದ್ದಿ ಆಗಲು ಇಷ್ಟಪಡುವುದಿಲ್ಲ. ನಾನೊಬ್ಬ ಲೇಖಕನಾಗಿ ಸುದ್ದಿ ಆದರೆ ನನ್ನ ಬರವಣಿಗೆ ಹಾಳಾಗುತ್ತದೆ ಎಂದು ಬೈರಪ್ಪ ಹೇಳಿದ್ದಾರೆ.

LEAVE A REPLY

Please enter your comment!
Please enter your name here