ಪ್ರಧಾನಿ ಮೋದಿ ಡಿಗ್ರಿ ಸರ್ಟಿಫಿಕೇಟ್‌ ವಿವಾದ – ಒಂದೇ ವರ್ಷದಲ್ಲಿ ಐದನೇ ಬಾರಿ ವಿಚಾರಣೆ ಮುಂದೂಡಿಕೆ

ಪ್ರಧಾನಿ ನರೇಂದ್ರ ಮೋದಿ ಡಿಗ್ರಿ ವಿವಾದ ವಿಚಾರಣೆ ಇವತ್ತು ಮತ್ತೆ ಮುಂದೂಡಿಕೆ ಆಗಿದ್ದು, ಒಂದು ವರ್ಷದಲ್ಲಿ ಐದನೇ ಬಾರಿ ಮುಂದೂಡಿಕೆ ಆಗಿದೆ.

ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅಲಭ್ಯರಾಗಿದ್ದ ಹಿನ್ನೆಲೆಯಲ್ಲಿ ವಿಚಾರಣೆ ಮುಂದೂಡುವಂತೆ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಮನಿಂದರ್‌ ಆಚಾರ್ಯ ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ಜಯಂತ್‌ ನಾಥ್‌ ಏಕಸದಸ್ಯ ಪೀಠದ ಎದುರು ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ನ್ಯಾಯಮೂರ್ತಿ ನಾಥ್‌ ವಿಚಾರಣೆಯನ್ನು ಏಪ್ರಿಲ್‌ ೧೫ಕ್ಕೆ ಮುಂದೂಡಿದರು.

ಆದ್ರೆ ವಿಚಾರಣೆಯನ್ನು ಮುಂದೂಡುತ್ತಿರುವುದಕ್ಕೆ ಪ್ರತಿವಾದಿ ಪರ ವಕೀಲರು ಆಕ್ಷೇಪಿಸಿ ಹೇಗಾದರೂ ಸರಿ ವಿಚಾರಣೆ ನಡೆಸಿ ಎಂದು ಮನವಿ ಮಾಡಿದರು.

ಕಳೆದ ಒಂದು ವರ್ಷದ ಅವಧಿಯಲ್ಲಿ ವಿಚಾರಣೆ ಐದನೇ ಬಾರಿ ಮುಂದೂಡಿಕೆ ಆಗಿದೆ.

೧೯೭೮ರಲ್ಲಿ ಪ್ರಧಾನಿ ನರೇಂದ್ರ ಮೋದಿ ದಿಲ್ಲಿ ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ ಎನ್ನಲಾಗಿರುವ ದಾಖಲೆಗಳ ಪರಿಶೀಲನೆಗೆ ಅವಕಾಶ ನೀಡುವಂತೆ ಕೇಂದ್ರ ಮಾಹಿತಿ ಆಯೋಗ ನೀಡಿದ್ದ ಆದೇಶವನ್ನು ಪ್ರಶ್ನಿಸಿ ದೆಹಲಿ ವಿವಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ.

LEAVE A REPLY

Please enter your comment!
Please enter your name here