ಪ್ರಧಾನಿ ಮೋದಿ ಕೊಟ್ಟ ತೆರಿಗೆ ವಿನಾಯಿತಿ ಶಾಕ್‌ – ಇವುಗಳಿಗೆ ತೆರಿಗೆ ವಿನಾಯಿತಿ ಇಲ್ಲ..!

ಹೊಸ ಆದಾಯ ತೆರಿಗೆ ಪದ್ಧತಿ ಘೋಷಿಸಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಆದಾಯ ತೆರಿಗೆ ವಿನಾಯಿತಿ ಪಡೆಯಲು ಅರ್ಹವಾದ ೭೦ ಅಂಶಗಳನ್ನು ತೆರಿಗೆ ವಿನಾಯಿತಿ ವ್ಯಾಪ್ತಿಯಿಂದಲೇ ತೆಗೆದುಹಾಕಿದೆ. ಅವುಗಳ ವಿವರ ಇಲ್ಲಿದೆ.

೧) ಜೀವವಿಮೆ ಘೋಷಿಸಿಕೊಳ್ಳುವುದರ ಮೂಲಕ ಪಡೆಯಬಹುದಾದ ತೆರಿಗೆ ವಿನಾಯಿತಿ

೨) ನಾಲ್ಕು ವರ್ಷದಲ್ಲಿ ೨ ಬಾರಿ ವೇತನದಾರರು ಪಡೆಯಬಹುದಾಗಿದ್ದ ಪ್ರಯಾಣಭತ್ಯೆ ವಿನಾಯಿತಿ

೩) ವೇತನದಾರರಿಗೆ ಸಿಗುತ್ತಿದ್ದ ೫೦ ಸಾವಿರ ರೂ. ಮೊತ್ತದ ಸ್ಟ್ಯಾಂಡರ್ಡ್‌ ಡಿಡಕ್ಷನ್‌

೪) ವೃತ್ತಿ ತೆರಿಗೆ ಅಥವಾ ಔದ್ಯೋಗಿತ ಭತ್ಯೆ ಮತ್ತು ಮನರಂಜನೆ ಭತ್ಯೆಗೆ ಮೂಲಕ ಪಡೆಯುತ್ತಿದ್ದ ವಿನಾಯಿತಿ

೫) ಮನೆ ಖರೀದಿ ಸಾಲದ ಬಡ್ಡಿ ಮೇಲೆ ಪಡೆಯುತ್ತಿದ್ದ ತೆರಿಗೆ ವಿನಾಯಿತಿ

೬) ವಿಕಲಚೇತನರಿಗೆ ಸಿಗುತ್ತಿದ್ದ ತೆರಿಗೆ ವಿನಾಯಿತಿ – ಶೇಕಡಾ ೪೦ರಷ್ಟು ವಿಕಲಾಂಗತೆ ಇದ್ದರೆ ೭೫ ಸಾವಿರ ರೂ.ನಷ್ಟು, ಶೇಕಡಾ ೮೦ರಷ್ಟು ೧,೨೫,೦೦೦ ರೂ.ವರೆಗೆ ತೆರಿಗೆ ವಿನಾಯಿತಿ ಸಿಗುತ್ತಿತ್ತು

೭) ಶೈಕ್ಷಣಿಕ ಸಾಲದ ಬಡ್ಡಿ ಮೇಲೆ ಪಾವತಿ ಸಿಗುತ್ತಿದ್ದ ತೆರಿಗೆ ವಿನಾಯಿತಿ

೮) ಸುಕ್ಯನ್ಯಾ ಸಮೃದ್ಧಿ ಯೋಜನೆಯಡಿ ಸಿಗುತ್ತಿದ್ದ ತೆರಿಗೆ ವಿನಾಯಿತಿ

೯) ಹಿರಿಯ ನಾಗರಿಕ ಉಳಿತಾಯ ಠೇವಣಿ ಮೇಲೆ ಸಿಗುತ್ತಿದ್ದ ವಿನಾಯಿತಿ

೧೦) ಪಬ್ಲಿಕ್‌ ಪ್ರಾವಿಡೆಂಟ್‌ ಫಂಡ್‌ ಹೂಡಿಕೆ ಸಿಗುತ್ತಿದ್ದ ವಿನಾಯಿತಿ

೧೧) ಈಕ್ವಿಟಿ ಲಿಂಕ್ನ್ಡ್‌ ಹೂಡಿಕೆಗಳು

LEAVE A REPLY

Please enter your comment!
Please enter your name here