ಪ್ರಧಾನಿ ಮೋದಿ ಆಡಳಿತದಲ್ಲಿ ದೇಶದ ಅಭಿವೃದ್ಧಿಯ ಏರಿಳಿತ..!

5 ದಶ ಲಕ್ಷ ಕೋಟಿ ಆರ್ಥಿಕತೆಯ ಮಾತಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಭಾರತದ ಅಭಿವೃದ್ಧಿ ಅಂದಾಜು ಲೆಕ್ಕಾಚಾರವನ್ನೇ ಇಳಿಸಿದೆ. ಇವತ್ತು ಮಂಡನೆ ಆದ ಆರ್ಥಿಕ ಸಮೀಕ್ಷೆಯ ಪ್ರಕಾರ 2020-21ರ ಅವಧಿಯಲ್ಲಿ ನಮ್ಮ ದೇಶದ ಆರ್ಥಿಕ ಅಭಿವೃದ್ಧಿ ದರ ಶೇಕಡಾ 6 ರಿಂದ 6.5ರ ನಡುವೆ ಇರಲಿದೆ.

ಇನ್ನು ಸಾಂಖ್ಯಿಕ ಇಲಾಖೆ ಬಿಡುಗಡೆ ಮಾಡಿದ ಪರಿಷ್ಕೃತ ಅಂಕಿಅಂಶದ ಪ್ರಕಾರ 2018-19ರಲ್ಲಿ ದೇಶದ ಜಿಡಿಪಿ ದರ ಶೇಕಡಾ 6.1ಮಾತ್ರ.

2019-2020ರ ಆರ್ಥಿಕ ವರ್ಷ ಅಂದರೆ ಇದೇ ಮಾರ್ಚ್‌ ಅಂತ್ಯದ ವೇಳೆ ಜಿಡಿಪಿ ಶೇಕಡಾ 5ರಷ್ಟು ಇರಲಿದೆ ಎಂದು ಅಂದಾಜಿಸಲಾಗಿದೆ. ಇದು ದಶಕದಲ್ಲೇ ಅತ್ಯಂತ ಕಡಿಮೆ ಜಿಡಿಪಿ ಮೌಲ್ಯವಾಗಿದೆ.

2017-18ರಲ್ಲಿ ಶೇಕಡಾ 7.2ರಷ್ಟು ಇರಲಿದೆ ಎಂದು ಅಂದಾಜಿಸಲಾಗಿದ್ದ ಜಿಡಿಪಿ 7ರಷ್ಟಿತ್ತು.

LEAVE A REPLY

Please enter your comment!
Please enter your name here