ಪ್ರಧಾನಿ ಮೋದಿ ಭದ್ರತೆಗೆ ವರ್ಷಕ್ಕೆ ಎಷ್ಟು ಕೋಟಿ ಖರ್ಚಾಗುತ್ತೆ ಗೊತ್ತಾ..? ಇಲ್ಲಿದೆ ಮಾಹಿತಿ

ಪ್ರಧಾನಿ ನರೇಂದ್ರ ಮೋದಿ ಭದ್ರತೆಗೆ ವರ್ಷಕ್ಕೆ ಎಷ್ಟು ಖರ್ಚಾಗ್ತಿದೆ ಗೊತ್ತಾ..? ಬರೋಬ್ಬರೀ 540-600 ಕೋಟಿ ರೂಪಾಯಿ. ಹೌದು ಇವತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿರುವ ಬಜೆಟ್‌ನಲ್ಲಿ ಪ್ರಧಾನಿ ಭದ್ರತೆ ನೋಡಿಕೊಳ್ಳುವ ವಿಶೇಷ ಭದ್ರತಾ ಪಡೆ (ಎಸ್‌ಪಿಜಿ) ಹಂಚಿಕೆ ಮಾಡಲಾಗಿರುವ ಅನುದಾನ.

ಕಳೆದ ವರ್ಷ 420 ಕೋಟಿ ರೂಪಾಯಿ ವ್ಯಯ ಆಗಿತ್ತು. ಬರೋಬ್ಬರೀ ಮೂರು ಸಾವಿರ ಮಂದಿ ಯೋಧರಿರುವ ಎಸ್‌ಪಿಜಿ ಪಡೆ ಪ್ರಧಾನಿ ಭದ್ರತೆಯನ್ನು ನೋಡಿಕೊಳ್ಳುತ್ತಿದೆ.

ಮಾಜಿ ಪ್ರಧಾನಿಗಳು, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕ ಗಾಂಧಿಗೆ ನೀಡಲಾಗಿದ್ದ ಎಸ್‌ಪಿಜಿ ಭದ್ರತೆಯನ್ನು ಕಳೆದ ವರ್ಷದ ಹಿಂಪಡೆದು ಅವರ ಭದ್ರತೆಯ ಜವಾಬ್ದಾರಿಯನ್ನು ಕೇಂದ್ರೀಯ ಮೀಸಲು ಪೊಲೀಸ್‌ ಪಡೆ ಸಿಆರ್‌ಪಿಎಫ್‌ಗೆ ವಹಿಸಲಾಗಿತ್ತು. ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ಹೆಚ್‌ ಡಿ ದೇವೇಗೌಡರ ಎಸ್‌ಪಿಜಿ ಭದ್ರತೆಯನ್ನೂ ಹಿಂಪಡೆಯಲಾಗಿತ್ತು.

1985ರಲ್ಲಿ ಇಂದಿರಾ ಗಾಂಧಿ ಹತ್ಯೆಯ ಬಳಿಕ ಪ್ರಧಾನಮಂತ್ರಿ ರಕ್ಷಣೆಗಾಗಿ ಎಸ್‌ಪಿಜಿರನ್ನು ರಚಿಸಲಾಗಿತ್ತು. ೧೯೯೧ರಲ್ಲಿ ರಾಜೀವ್‌ ಗಾಂಧಿ ಹತ್ಯೆಯ ಬಳಿಕ ನೆಹರು ಕುಟುಂಬದ ಪತ್ನಿ ಸೋನಿಯಾ, ಪುತ್ರ ರಾಹುಲ್‌ ಮತ್ತು ಪ್ರಿಯಾಂಕಗೂ ಎಸ್‌ಪಿಜಿ ಭದ್ರತೆ ನೀಡಲಾಗಿತ್ತು.

LEAVE A REPLY

Please enter your comment!
Please enter your name here