ಪ್ರತಿಕ್ಷಣ ಸಾಮಾನ್ಯ ಜ್ಞಾನ: ಸರಣಿ-2- Pratikshana Daily GK

ಪ್ರತಿಕ್ಷಣ ಸಾಮಾನ್ಯ ಜ್ಞಾನ ಸರಣಿ -2:

೧) ವಿಶ್ವ ಪರಿಸರ ದಿನ
ಆಚರಿಸುವ ದಿನ – ಜೂನ್ 5

ನಿರ್ಣಯ: 1972ರಲ್ಲಿ ಸ್ಟಾಕ್ ಹೋಮ್‌ನಲ್ಲಿ ನಡೆದ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ವಿಶ್ವ ಪರಿಸರ ದಿನ ಆಚರಿಸಲು ನಿರ್ಧರಿಸಲಾಯಿತು.
ಮೊದಲ ಬಾರಿ ಆಚರಣೆ: 1974ರ ಜೂನ್ 5ರಂದು. ಧ್ಯೇಯವಾಕ್ಯ:- `ಒಂದೇ ಒಂದು ಭೂಮಿ’

2020ರ ಧ್ಯೇಯವಾಕ್ಯ:-`ಪ್ರಕೃತಿಯ ಸಮಯ’
2021ರ ಧ್ಯೇಯವಾಕ್ಯ:- `ಪರಿಸರ ವ್ಯವಸ್ಥೆಯ ಪುನರ್ ಸ್ಥಾಪನೆ’

೨)ಗೂಗಲ್

ಅಮೆರಿಕಾದ ತಂತ್ರಜ್ಞಾನ ಕಂಪನಿ. ಅಂತರ್ಜಾಲ ಆಧಾರಿತ ಸೇವೆ ನೀಡುತ್ತದೆ. ಗೂಗಲ್ ಸರ್ಚ್ ಇಂಜಿನ್ ಈ ಸಂಸ್ಥೆಯ ಪ್ರಸಿದ್ಧ ಸೇವೆಯಾಗಿದೆ.
ಸ್ಥಾಪನೆ:- ಸೆಪ್ಟಂಬರ್ 4, 1998
ಸ್ಥಾಪಕರು:-ಲ್ಯಾರಿ ಪೇಜ್ ಮತ್ತು ಸೆರ್ಗಿ ಬಿನ್
ಪ್ರಸ್ತುತ ಸಿಇಒ:- ಸುಂದರ್ ಪಿಚೈ (ಭಾರತೀಯ ಮೂಲ)
ಕೇಂದ್ರ ಕಚೇರಿ:- ಅಮೆರಿಕಾದ ಕ್ಯಾಲಿಪೋರ್ನಿಯಾ

ಗೂಗಲ್‌ನ ಪ್ರಮುಖ ಉಪ ಸೇವೆಗಳು:-
ಜಿ-ಮೇಲ್
ಯೂಟ್ಯೂಬ್
ಗೂಗಲ್ ಡ್ರೈವ್
ಗೂಗಲ್ ಡಾಕ್ಸ್
ಗೂಗಲ್ ಮ್ಯಾಪ್
ಗೂಗಲ್ ಕ್ಯಾಲೆಂಡರ್
ಗೂಗಲ್ ಮೀಟ್
ಗೂಗಲ್ ಹ್ಯಾಂಗೌAಟ್ಸ್
ಗೂಗಲ್ ಡ್ಯುಯೋ
ಗೂಗಲ್ ಟ್ರಾನ್ಸ್ಲೇಷನ್
ಗೂಗಲ್ ಫೋಟೋಸ್
ಗೂಗಲ್ ಕ್ರೋಮ್

ಗೂಗಲ್ ಸರ್ಚ್ ಇಂಜಿನ್‌ನಲ್ಲಿ ಕನ್ನಡವನ್ನು ಭಾರತದ ಅತ್ಯಂತ ಕೊಳಕು ಭಾಷೆ ಎಂದು ತೋರಿಸುವ ಮೂಲಕ ಕನ್ನಡಿಗರಿಗೆ ಅವಮಾನ ಮಾಡಿತ್ತು. ಬಳಿಕ ಕನ್ನಡಿಗರ ಕ್ಷಮೆ ಕೇಳಿ ಸರ್ಚ್ ಇಂಜಿನ್‌ನಿAದ ಅಪಮಾನಕಾರಿಯ ಪದವನ್ನು ತೆಗೆದುಹಾಕಿತ್ತು.

೩) ಅಮೆಜಾನ್

ಅಮೆಜಾನ್ ಅಂತರಾಷ್ಟ್ರೀಯ ಮಟ್ಟದ ಇ-ಕಾಮರ್ಸ್ ಕಂಪನಿ
ಸ್ಥಾಪನೆ:- ಜುಲೈ 5, 1994
ಸ್ಥಾಪಕರು ಮತ್ತು ಪ್ರಸ್ತುತ ಸಿಇಒ:- ಜೆಫ್ ಬೆಜೋಸ್

ಕೇಂದ್ರ ಕಚೇರಿ:- ಅಮೆರಿಕಾದ ವಾಷಿಂಗ್ಟನ್

ಅಮೆಜಾನ್‌ನ ಸೇವೆಗಳು:

ಅಮೆಜಾನ್.ಕಾಮ್

ಅಮೆಜಾನ್ ಅಲೆಕ್ಸಾ

ಅಮೆಜಾನ್ ಮ್ಯೂಸಿಕ್

ಅಮೆಜಾನ್ ಪ್ರೈಮ್ ವೀಡಿಯೋ

ಅಮೆಜಾನ್ಇ-ಕಾಮರ್ಸ್ ಸಂಸ್ಥೆಯು ಕೆನಡಾ ದೇಶದಲ್ಲಿ ಕರ್ನಾಟಕದ ದ್ವಜದ ಬಣ್ಣ, ಕರ್ನಾಟಕದ ಲಾಂಛನಗಳನ್ನು ಮಹಿಳೆಯರ ಒಳ ಉಡುಪುಗಳಲ್ಲಿ ಮುದ್ರಿಸುವ ಮೂಲಕ ಅವಮಾನ ಮಾಡಿದೆ.

೪) ಟ್ವಿಟರ್

ಮೈಕ್ರೋ ಬ್ಲಾಗಿಂಗ್ ಅಂತರ್ಜಾಲ ತಾಣ
ಸ್ಥಾಪನೆ:-  ಮಾರ್ಚ್ 21, 2006

ಸ್ಥಾಪಕರು:-

ಜಾಕ್ ಡೊರ್ಸಿ

ನೋವಾ ಗ್ಲಾಸ್

ಬಿಜ್ ಸ್ಟೋನ್

ಇವಾನ್ ವಿಲಿಯಮ್ಸ್

ಸಿಇಒ:-ಜಾಕ್ ಡೊರ್ಸಿ

ಕೇಂದ್ರ ಕಚೇರಿ:- ಅಮೆರಿಕಾದ ಸ್ಯಾನ್ ಪ್ರಾನ್ಸಿಸ್ಕೋ

ಭಾರತದಲ್ಲಿ ಟ್ವಿಟ್ಟರ್ ಸಂಸ್ಥೆಯು ಭಾರತೀಯ ನೂತನ ಡಿಜಿಟಲ್ ಕಾನೂನುಗಳನ್ನು ಜಾರಿಗೊಳಿಸುವಲ್ಲಿ ಭಾರತ ಸರ್ಕಾರದೊಂದಿಗೆ ಜಟಾಪಟಿ ನಡೆಯುತ್ತಿದೆ. ಟ್ವಿಟರ್ ಭಾರತದ ಉಪರಾಷ್ಟ್ರಪತಿ ಎಂ.ವೆAಕಯ್ಯ ನಾಯ್ಡು ಅವರ ವೈಯಕ್ತಿಕ ಖಾತೆಗೆ ನೀಡಿದ್ದ ಬ್ಯೂ ಬ್ಯಾಡ್ಜ್ ತೆಗೆದಿತ್ತು.

೫) ಭಾರತದಲ್ಲಿ ಕೊರೋನಾಗೆ ಮೊದಲ ಸಿಂಹ ಬಲಿ

ತಮಿಳುನಾಡಿನ ವಂದಲೂರು ಪಟ್ಟಣದಲ್ಲಿರುವ ಆರಿಗನಾರ್ ಅಣ್ಣಾ ಮೃಗಾಲಯದಲ್ಲಿ ಕೊರೋನಾ ಸೋಂಕಿನಿAದ ಭಾರತ ದೇಶದಲ್ಲಿ ಮೊದಲ ಸಿಂಹ ಇಂದು ಜೂನ್ 5 ರಂದು ಸಾವನ್ನಪ್ಪಿದೆ.

ನೀಲಾ ಎಂಬ ಹೆಸರಿನ ಸಿಂಹಕ್ಕೆ ಇತ್ತೀಚೆಗಷ್ಟೇ ಕೊರೋನಾ ಸೋಂಕು ದೃಢಪಟ್ಟಿತ್ತು. ನೀಲಾ ಸಿಂಹ ಕೊರೋನಾ ಸೋಂಕಿಗೆ ಬಲಿಯಾದ ದೇಶದ ಮೊದಲ ಮಾನವೇತರ ಪ್ರಾಣಿಯಾಗಿದೆ.

ಅರಿಗನಾರ್ ಅಣ್ಣಾ ಮೃಗಾಲಯಕ್ಕೆ ವಂದಲೂರು ಝೂ ಎಂಬ ಹೆಸರೂ ಇದೆ. ಇದು ಭಾರತದಲ್ಲಿ ರಚನೆ ಆದ ಮೊದಲ ಸಾರ್ವಜನಿಕ ಮೃಗಾಲಯ. ಸ್ಥಾಪನೆ ಆದ ವರ್ಷ 1885. 602 ಹೆಕ್ಟೇರ್ ವಿಸ್ತೀರ್ಣ ಇರುವ ಈ ಮೃಗಾಲಯವನ್ನು ಎಡ್ವರ್ಡ್ ಗ್ರೀನ್ ಬಾಲ್ಫೋರ್ ಸ್ಥಾಪಿಸಿದ್ದರು.

೬) ಭಾರತದ ಅಮುಲ್‌ನ ವ್ಯವಸ್ಥಾಪಕರಾದ ಡಾ.ಆರ್.ಎಸ್.ಸೋದಿ ಅವರು ಅಂತರಾಷ್ಟ್ರೀಯ ಡೈರಿ ಫೆಡರೇಶನ್ ಮಂಡಳಿಗೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಅಂತರಾಷ್ಟ್ರೀಯ ಡೈರಿ ಫೆಡರೇಶನ್ ಸ್ಥಾಪನೆ:- ಸೆಪ್ಟಂಬರ್ 1903

ಕೇಂದ್ರ ಕಚೇರಿ:- ಬೆಲ್ಜಿಯಂನ ಬ್ರುಸೆಲ್ಸ್

ಅಮುಲ್ ಸ್ಥಾಪನೆ ಆಗಿದ್ದು 1946ರಲ್ಲಿ. ಇದರ ಆರಂಭದ ಹೆಸರು ಕೈರಾ ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘ. ಮುಖ್ಯ ಕಚೇರಿ ಗುಜರಾತ್‌ನ ಆನಂದ್‌ನಲ್ಲಿದೆ. ಇದನ್ನು ಆನಂದ್ ಎಂದು ಮರು ನಾಮಕರಣ ಮಾಡಲಾಯಿತು.

೭) ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ- 2021

At Night All Blood Is Black ಎಂಬ ಕೃತಿಗೆ  ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಸಂದಿದೆ.

ಮೂಲ ಲೇಖಕರು:- ಪ್ರೆಂಚ್ ಕಾದಂಬರಿಕಾರ ಡೇವಿಡ್ ಡಾಯಪ್

ಅನುವಾದಕರು:- ಅನ್ನಾ ಮೋಸ್ಟೋವಾಕಿಸ್

ಸ್ಥಾಪನೆ:-ಇಂಗ್ಲೆಡಿನ ಮ್ಯಾನ್ ಗ್ರೂಪ್‌ನಿಂದ 2005ಲ್ಲಿ

ಈ ಪ್ರಶಸ್ತಿಯನ್ನು ಇಂಗ್ಲೀಷ್ ಭಾಷೆಗೆ ಅನುವಾದಗೊಂಡ ಅತ್ತ್ಯುತ್ತಮ ಪುಸ್ತಕಕ್ಕೆ ನೀಡಲಾಗುತ್ತದೆ.

೮) Tree Ambulance:

ರಾಜಸ್ಥಾನದ ಪಿಂಕ್ ಸಿಟಿ ಖ್ಯಾತಿಯ ಜೈಪುರ ನಗರದಲ್ಲಿ ಗಿಡ ಮರಗಳನ್ನು ರಕ್ಷಿಸುವುದು ಮತ್ತು ಆರೈಕೆ ಮಾಡುವುದಕ್ಕಾಗಿ Tree Ambulance ಎಂಬ ಪರಿಸರಾಸಕ್ತರ ತಂಡ ಕಾರ್ಯನಿರ್ವಹಿಸುತ್ತದೆ.

ರಾಜಸ್ಥಾನದ ಸಿಎಂ- ಅಶೋಕ್ ಗೆಹ್ಲೋಟ್

೯) ಮಾರಿಷಸ್ ದೇಶದ ಮಾಜಿ ಅಧ್ಯಕ್ಷ ಮತ್ತು ಪ್ರಧಾನ ಮಂತ್ರಿ ಅನೆರೂದ್ ಜುಗನೌಥ್ ನಿಧನ

ಮಾರಿಷಸ್ ರಾಜಧಾನಿ:- ಪೋರ್ಟ್ಲೂಯಿಸ್

ಕರೆನ್ಸಿ:- ಮಾರಿಷಿಯನ್ ರೂಪಿ

೧೦) ಜಪಾನ್ ಪ್ರಧಾನಮಂತ್ರಿ ಏಷ್ಯಾದ ಪ್ರೌಢಶಾಲಾ ವಿಧ್ಯಾರ್ಥಿಗಳಿಗಾಗಿ ರೂಪಿಸಿದ ASIA KAKEHASHI Project ಎಂಬ ಒಂದು ವರ್ಷದ ಶಿಷ್ಯವೇತನ ಸಹಿತ ಉಚಿತ ಶಿಕ್ಷಣಕ್ಕೆ ಕರ್ನಾಟಕದ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಗೌರಿ ಸಂಕೇತ್ ಬಗಲಿ ಎಂಬ ವಿದ್ಯಾರ್ಥಿ ಆಯ್ಕೆಯಾಗಿದ್ದಾನೆ.

LEAVE A REPLY

Please enter your comment!
Please enter your name here