ಪ್ರತಿಕ್ಷಣವೂ ಸ್ಪಂದಿಸೋಣ – ಅನಾರೋಗ್ಯದಿಂದ ಬಳಲುತ್ತಿರುವ ಈ ವೃದ್ಧ ದಂಪತಿಗೆ ಬೇಕಿದೆ ನೆರವು

ಮೂತ್ರನಾಳದ ಕಾಯಿಲೆಯಿಂದ ಬಳಲುತ್ತಿರುವ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮದ ಅಣ್ಣಯ್ಯ ಗಾಣಿಗ ಎನ್ನುವವರಿಗೆ ಆರ್ಥಿಕ ನೆರವಿನ ಅಗತ್ಯವಿದೆ.

ಇವರು ವಯೋವೃದ್ಧರಾಗಿದ್ದು ದಂಪತಿಗೆ ಮಕ್ಕಳಿಲ್ಲ. ಮೂತ್ರನಾಳದ ಸಮಸ್ಯೆಯಿಂದಾಗಿ ದುಡಿಮೆಗೂ ತೊಂದರೆ ಆಗಿದೆ. ಇವರ ಪತ್ನಿಗೂ ಪಾರ್ಶ್ವವಾಯು ಆಗಿದೆ. ಆಕೆಗೂ ಚಿಕಿತ್ಸೆಯ ಅಗತ್ಯವಿದೆ.

ತಮ್ಮ ಕಷ್ಟಕ್ಕೆ ನೆರವಾಗುವಂತೆ ಅಣ್ಣಯ್ಯ ಗಾಣಿಗ ಅವರು ಸಹೃದಯ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಅವರ ಬ್ಯಾಂಕ್‌ ಖಾತೆಯ ವಿವರಗಳು ಈ ಪತ್ರದಲ್ಲಿ ನಮೂದಾಗಿದೆ. ದಾನಿಗಳು ಅವರ ಖಾತೆಗೆ ನಗದು ಜಮೆ ಮಾಡಬಹುದು.

LEAVE A REPLY

Please enter your comment!
Please enter your name here