ಪ್ರಚೋದನಕಾರಿ ಭಾಷಣ; ಗಾಲಿ ಸೋಮಶೇಖರ ರೆಡ್ಡಿ ಬೇಲ್‌ ಅರ್ಜಿ ವಜಾ

ಪ್ರಚೋದನಕಾರಿ ಭಾಷಣ ಮಾಡಿದ ಹಿನ್ನಲೆಯಲ್ಲಿ ಬಂಧನದ ಭೀತಿಯಿಂದ ಶಾಸಕ ಗಾಲಿ ಸೋಮಶೇಖರ ರೆಡ್ಡಿ  ಬೇಲ್ ಗೆ ಅರ್ಜಿ ಸಲ್ಲಿಸಿದ್ದು, ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆಗಿದೆ. 

ಬಳ್ಳಾರಿಯ ಎರಡನೇ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು ಇಂದು ಅರ್ಜಿ ವಿಚಾರಣೆ ನಡೆಸಿದ ನಾಯಾಲಯ ರೆಡ್ಡಿ ಅವರ ಅರ್ಜಿಯನ್ನು ವಜಾ ಮಾಡಿದೆ.

ಕಳೆದ ಒಂದು ವಾರದ ಹಿಂದೆ ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ನಡೆದ ಸಮಾವೇಶದಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿ ರೆಡ್ಡಿ  ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ವಿವಾದ ಹುಟ್ಟು ಹಾಕಿದ್ದರು.

ಬಳ್ಳಾರಿಯ ಕಾಂಗ್ರೆಸ್ ನಾಯಕ ಪಿ. ವಿವೇಕ್ ನೀಡಿದ ದೂರಿನ ಅನ್ವಯ ಬಳ್ಳಾರಿಯ ಗಾಂಧಿನಗರ ಠಾಣೆ ಪೊಲೀಸರು ಎಫ್‌ಐಆರ್ ದಾಖಲು ಮಾಡಿದ್ದರು. ಹೀಗಾಗಿ ರೆಡ್ಡಿಗೆ ಬಂಧನ ಭೀತಿ ಎದುರಾಗಿತ್ತು ಹೀಗಾಗಿ ಬಂಧನದಿಂದ ತಪ್ಪಿಸಿಕೊಳ್ಳಲು ಬೇಲ್ ಅರ್ಜಿ ಸಲ್ಲಿಸಿದ್ದರು.

ಆದರೆ ಸುಧೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ ರೆಡ್ಡಿ ಅವರ ನಿರೀಕ್ಷಣಾ ಅರ್ಜಿಯನ್ನು ವಜಾ ಮಾಡಿದೆ.

LEAVE A REPLY

Please enter your comment!
Please enter your name here