ಪ್ರಚೋದನಕಾರಿ ಟ್ವೀಟ್‌ : ಲಾಕ್‌ ಆದ ಅನಂತಕುಮಾರ್‌ ಟ್ವಿಟರ್‌ ಖಾತೆ

ಕೇಂದ್ರದ ಮಾಜಿ ಸಚಿವ ಹಾಗೂ ಉತ್ತರ ಕನ್ನಡ ಕ್ಷೇತ್ರದ ಸಂಸದ ಅನಂತ್‌ ಕುಮಾರ್‌ ಹೆಗಡೆಯವರ ಟ್ವಿಟರ್‌ ಖಾತೆಯನ್ನು ನಿಯಮ ಉಲ್ಲಂಘಿಸಿದ ಹಿನ್ನಲೆಯಲ್ಲಿ ಟ್ವಿಟರ್‌ ನಿಂದ ಅನಂತ್‌ ಕುಮಾರ್‌ ಹೆಗಡೆಯವರಿಗೆ ನಿರ್ದಿಷ್ಟ ಟ್ವೀಟ್‌ ತೆಗೆಯುವಂತೆ ನೋಟೀಸ್‌ ನೀಡಲಾಗಿದೆ.

ಎಪ್ರಿಲ್ 8ರಿಂದ ದೆಹಲಿಯ ನಿಜಾಮುದ್ದೀನ್‌ನಲ್ಲಿ ನಡೆದ ತಬ್ಲೀಘಿ ಜಮಾತ್‌ ಸಭೆಯ ವಿರುದ್ಧ  ಸರಣಿ ಬರಹ ಆರಂಭಿಸಿದ್ದ ಹೆಗಡೆ ಅವರು ಕೊರೋನಾ ವೈರಸ್ ಎಂಬ ಜಿಹಾದ್ ಅನ್ನು ತಬ್ಲಿಘಿಗಳು ಹರಡುತ್ತಿದ್ದಾರೆ ಎಂಬಿತ್ಯಾದಿ ಅರ್ಥದಲ್ಲಿ ಪ್ರಕಟಿಸಿದ್ದರು.

ಈ ಬಗ್ಗೆ ಅನಂತಕುಮಾರ್ ಹೆಗಡೆ ಅವರಿಗೆ ನೋಟಿಸ್ ಕಳುಹಿಸಿರುವ ಟ್ವಿಟ್ಟರ್, ‘ನಿಮ್ಮ ಖಾತೆ ನಮ್ಮ ಕೆಲವು ನಿಯಮಗಳನ್ನು ಉಲ್ಲಂಘಿಸಿದೆ’ ಖಾತೆಯ ನಿರ್ಬಂಧ ತೆರವುಗೊಳಿಸಲು ನಿಯಮ ಉಲ್ಲಂಘಿಸಿದ ಟ್ವೀಟ್‌ ಡಿಲೀಟ್‌ ಮಾಡುವಂತೆ ಸೂಚನೆ ನೀಡಿದೆ.

ಟ್ವಿಟರ್‌ ಕಂಪನಿಯ ಈ ನಿರ್ಧಾರಕ್ಕೆ ಫೇಸ್‌ಬುಕ್‌ನಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಹೆಗಡೆ ತಬ್ಲೀಘಿ ಜಮಾತ್‌ ವಿರುದ್ಧದ ಟ್ವೀಟ್‌ ನೆಪವಾಗಿಸಿಕೊಂಡು ಅಕೌಂಟ್‌ ಲಾಕ್‌ ಮಾಡಲಾಗಿದೆ. ಟ್ವಿಟರ್‌ನ ರಾಷ್ಟ್ರ ವಿರೋಧಿ ನಡೆಯನ್ನು ನಾನು ಖಂಡಿಸುತ್ತೇನೆ ಹಾಗೂ ಯಾವುದೇ ಕಾರಣಕ್ಕೂ ಟ್ವೀಟ್‌ ತೆಗೆದು ಹಾಕುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

ಈ ನಡುವೆ ಪ್ರಧಾನಿಗೆ ಪತ್ರ ಬರೆದಿರುವ ಹೆಗಡೆ ಕೇಂದ್ರ ಸರ್ಕಾರವೇ ಸ್ವದೇಶೀ ಟ್ವಿಟರ್‌ ರೀತಿಯ ತಾಣವನ್ನು ರೂಪಿಸಬೇಕು ಎಂದು ಅಗ್ರಹಿಸಿದ್ದಾರೆ.

 

LEAVE A REPLY

Please enter your comment!
Please enter your name here