ಪ್ಯಾರಾಸಿಟಮಲ್‌ ಮಾತ್ರೆ ಬಳಸಿ ಕೊರೋನಾ ಜ್ವರ ಮುಚ್ಚಿಡಲಾಗುತ್ತಿದೆ – ಬಿಜೆಪಿ ಸಂಸದ ತೇಜಸ್ವಿಸೂರ್ಯ ಪತ್ರ

ಪ್ಯಾರಾಸಿಟಮಲ್‌ ಮಾತ್ರೆ ಬಳಕೆಯಿಂದಾಗಿ ಕೊರೋನಾ ಜ್ವರ ಪತ್ತೆ ಪರೀಕ್ಷೆಗೆ ಹಿನ್ನಡೆ ಆಗಿದ್ದು ಆ ಮಾತ್ರೆಗಳನ್ನು ನಿಷೇಧಿಸುವಂತೆ ಕೋರಿ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿಸೂರ್ಯ ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ರಾಸಾಯನಿಕ ಹಾಗೂ ರಸಗೊಬ್ಬರ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.

ಆದರೆ ತೇಜಸ್ವಿಸೂರ್ಯ ಪತ್ರವನ್ನು ಪರಿಗಣಿಸದೇ ಸಾಂಕ್ರಾಮಿಕ ರೋಗ ತಜ್ಞರು ಮತ್ತು ತಜ್ಞ ವೈದ್ಯರ ಸಲಹೆಯನ್ನು ಕೇಳಿ ಎಂದು ಕೇಂದ್ರ ಆರೋಗ್ಯ ಸಚಿವರಿಗೆ ವೈದ್ಯರು ಹೇಳಿದ್ದಾರೆ.

ಜ್ವರದ ಲಕ್ಷಣಗಳನ್ನು ಪ್ಯಾರಾಸಿಟಮಲ್‌, ಸೆಟ್ರೆಜಿನ್‌ ಮತ್ತು ಲೆಕೋಟ್ರೈನ್‌ ಮಾತ್ರೆಗಳ ಬಳಸುತ್ತಿದ್ದಾರೆ ಎನ್ನುವುದರ ಬಗ್ಗೆ ಆರೋಗ್ಯ ತಜ್ಞರು, ಜಿಲ್ಲಾ ಆರೋಗ್ಯಾಧಿಕಾರಿಗಳಿಂದ ಮತ್ತು ಔಷಧಿ ತಜ್ಞರಿಂದ ನನಗೆ ತಿಳಿದುಬಂದಿದೆ. ಜ್ವರ ಕೊರೋನಾದ ಸಾಮಾನ್ಯ ಲಕ್ಷಣವಾಗಿದ್ದು ಜ್ವರದಿಂದ ಬಳಲುವರರು ಈ ಮಾತ್ರೆಗಳನ್ನು ತೆಗೆದುಕೊಂಡ ಬಳಿಕ ವೈದ್ಯರ ಬಳಿಗೆ ಹೋಗುವುದಿಲ್ಲ.

ವ್ಯಕ್ತಿಗೆ ಕೊರೋನಾ ಲಕ್ಷಣ ಕಾಣಿಸಿಕೊಳ್ಳಲು ಕೆಲವು ದಿನಗಳೇ ಬೇಕಾಗಿರುವುದರಿಂದ ಇಂತಹ ಮಾತ್ರೆಗಳನ್ನು ತೆಗೆದುಕೊಳ್ಳುವ ವ್ಯಕ್ತಿಗಳು ಉಳಿದವರನ್ನು ಅಪಾಯಕ್ಕೆ ದೂಡುತ್ತಾರೆ. ಔಷಧಿ ಅಂಗಡಿಗಳಲ್ಲಿ ಈ ಮಾತ್ರೆಗಳನ್ನು ಮಾರಲಾಗುತ್ತಿದೆ. ಹೀಗಾಗಿ ಈ ಮಾತ್ರೆಗಳನ್ನು ಯಾರು ತೆಗೆದುಕೊಂಡಿದ್ದಾರೋ ಅವರನ್ನು ಪತ್ತೆ ಹಚ್ಚಬೇಕು ಮತ್ತು ಈ ಮಾತ್ರೆಗಳ ಮಾರಾಟವನ್ನು ನಿಷೇಧಿಸಬೇಕು ಎಂದು ಕೋರುವುದಾಗಿ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದಗೌಡಗೆ ಪತ್ರ ಬರೆದಿದ್ದಾರೆ.

 

ಆದರೆ ಸಂಸದ ತೇಜಸ್ವಿಸೂರ್ಯ ಮನವಿಯನ್ನು ತಿರಸ್ಕರಿಸುವಂತೆ ಹಲವಾರು ತಜ್ಞ ವೈದ್ಯರು ಟ್ವಿಟ್ಟರ್‌ ಮೂಲಕವೇ ಆರೋಗ್ಯ ಸಚಿವ ಹರ್ಷವರ್ಧನ್‌ಗೆ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here