ಪ್ಯಾಂಟಲ್ಲಿ 100 ಟೀ ಶರ್ಟು.. ಅಬ್ಬಬ್ಬಾ ಇವನೆಂಥಾ ಕಳ್ಳ ಗೊತ್ತಾ..?

ತಮಿಳುನಾಡಿನ ತಿರುಪ್ಪುರ್.. ಗಾರ್ಮೆಂಟ್ಸ್ ಇಂಡಸ್ಟ್ರಿಗೆ ಹೆಸರುವಾಸಿ.. ಇಲ್ಲಿನ ಗಾರ್ಮೆಂಟ್ಸ್ ಒಂದರಲ್ಲಿ ನೌಕರನಾಗಿದ್ದ ಒಬ್ಬ ಪ್ಯಾಂಟಲ್ಲಿ.. ಒಂದಲ್ಲ.. ಎರಡಲ್ಲ ಬರೋಬ್ಬರಿ 100 ಟೀಶರ್ಟ್ ಸಾಗಿಸಲು ಹೋಗಿ ಸಿಕ್ಕಿಬಿದ್ದಿದ್ದಾನೆ.

ಗಾರ್ಮೆಂಟ್ಸ್‍ಗೆ ಬೆಳಗ್ಗೆ ಬಂದಾಗ ಸಣ್ಣಗೆ ಇದ್ದ ನೌಕರ ಸಂಜೆ ಹೋಗುವಾಗ ಇದ್ದಕ್ಕಿದ್ದಂತೆ ದಪ್ಪ ಆಗಿದ್ದ.. ಇದನ್ನು ಗಮನಿಸಿದ ಭದ್ರತಾ ಸಿಬ್ಬಂದಿ, ತಡೆದು ಪರಿಶೀಲಿಸಿದ್ರು ನೋಡಿ. ಆಗ ಬಯಲಾಯ್ತು ಅಸಲಿ ಬಂಡವಾಳ.. ತನು ಧರಿಸಿದ ಟೀಶರ್ಟ್ ಮೇಲೆ 10 ಹೊಸ ಟೀಶರ್ಟ್ ಧರಿಸಿದ್ದ.. ಪ್ಯಾಂಟಲ್ಲಿ 100 ಟೀಶರ್ಟ್‍ಗಳನ್ನು ಬಚ್ಚಿಟ್ಟುಕೊಂಡು ಕದ್ದು ಸಾಗಿಸಲು ಮುಂದಾಗಿದ್ದ.

ನಾನು ಕದ್ದಿದ್ದೇನೆ. ಇವುಗಳನ್ನು ಊರಿನಲ್ಲಿ ಮಾರಾಟ ಮಾಡಲು ಹೀಗೆ ಮಾಡಿದೆ ಎಂದು ಗಾರ್ಮೆಂಟ್ಸ್ ನೌಕರ ತಪ್ಪೊಪ್ಪಿಕೊಂಡಿದ್ದಾನೆ.

ಇದೀಗ ಪ್ಯಾಂಟಲ್ಲಿ 100 ಟೀ ಶರ್ಟ್ ತೆಗೆಯುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

LEAVE A REPLY

Please enter your comment!
Please enter your name here