ಪೌರ ಕಾರ್ಮಿಕರ ದಿಢೀರ್ ಸ್ಟ್ರೈಕ್ – ಒಂದೇ ದಿನಕ್ಕೆ ಗಬ್ಬೆದ್ದು ನಾರಿದ ರಾಜಧಾನಿ

ಬೆಂಗಳೂರು ಮಂದಿಗೆ ಇಂದು ಬೆಳಗ್ಗೆಯೇ ಶಾಕ್ ಕಾದಿತ್ತು. ಮನೆ ಬಳಿಗೆ ಪೌರ ಕಾರ್ಮಿಕರು ಬಂದು ಕಸ ತೆಗೆದುಕೊಂಡು ಹೋಗಲಿಲ್ಲ. ವಾಕಿಂಗ್ ಹೋದವರಿಗೂ ಶಾಕ್ ಕಾದಿತ್ತು. ಬೀದಿಗಳು ನಿಸುಕಿನ ಜಾವವೇ ಸ್ವಚ್ಛ ಆಗಿರ್ಲಿಲ್ಲ.

ಇದಕ್ಕೆ ಕಾರಣ ನಗರದ ಪೌರ ಕಾರ್ಮಿಕರ ದಿಢೀರ್ ಪ್ರತಿಭಟನೆ. 21 ಸಾವಿರ ಪೌರ ಕಾರ್ಮಿಕರ ಸೇವೆಯನ್ನು ಖಾಯಂ ಮಾಡಬೇಕು. ಕಸ ಸಂಗ್ರಹ ಮಾಡುವ ಲಾರಿ ಚಾಲಕರ ಸೇವೆಯನ್ನು  ಖಾಯಂಗೊಳಿಸಬೇಕು ಎಂದು ಒತ್ತಾಯಿಸಿ ಸಾಂಕೇತಿಕ ಧರಣಿ ನಡೆಸಿದ್ದಾರೆ. ನಗರದ 198 ವಾರ್ಡ್ ಗಳಲ್ಲಿ ಬೀದಿಗೆ ಇಳಿದು ಪ್ರತಿಭಟನೇ ನಡೆಸಿದ್ದಾರೆ.

ಸಿಎಂ ಬಸವರಾಜ  ಬೊಮ್ಮಾಯಿ ಮನೆಯಿಂದ ಹಿಡಿದು ಮಂತ್ರಿಗಳ ಮನೆಗ್ಲೂ ಇರುವ ರಸ್ತೆಗಳಲ್ಲೂ ಕಸದ ರಾಶಿ ಕಂಡುಬರುತ್ತಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಮ್ಮ ಬೇಡಿಕೆಗೆ ಸ್ಪಂದಿಸದಿದ್ರೆ ಅನಿರ್ಧಿಷ್ಟ ಹೋರಾಟ  ನಡೆಸುವ ಎಚ್ಚರಿಕೆಯನ್ನು ಪೌರ ಕಾರ್ಮಿಕರ ಸಂಘಟನೆ ನೀಡಿದೆ.

LEAVE A REPLY

Please enter your comment!
Please enter your name here