ಪೌರತ್ವ ತಿದ್ದುಪಡಿ ಕಾಯ್ದೆಯ ಅಭಿಯಾನಕ್ಕೆ ಈಗಾಗಲೇ 53 ಲಕ್ಷಕ್ಕೂ ಹೆಚ್ಚು ಬೆಂಬಲಿತ ಕರೆಗಳು ಬಂದಿವೆ : ಅಮಿತ್‌ ಶಾ

ಈಗಾಗಲೇ ಬಿಜೆಪಿ ಸರ್ಕಾರವು ಪೌರತ್ವ ತಿದ್ದುಪಡಿ ಕಾಯ್ದೆಯ ಕುರಿತು ಜಾಗೃತಿ ಅಭಿಯಾನ ಶುರುಮಾಡಿದ್ದು “ಮಿಸ್ ಕಾಲ್”‌ ಅಭಿಯಾನಕ್ಕೆ ಬೃಹತ್‌ ಪ್ರಮಾಣದಲ್ಲಿ ಬೆಂಬಲ ವ್ಯಕ್ತಪಡಿಸಿರುವುದಾಗಿ ಬಿಜೆಪಿ ಅಧ್ಯಕ್ಷ ಮತ್ತು ಗೃಹ ಸಚಿವ ಅಮಿತ್‌ ಶಾ ಹೇಳಿಕೆ ನೀಡಿದ್ದಾರೆ. ಈ ಅಭಿಯಾನ ಶುರುವಾದ ಕೇವಲ 3 ದಿನಗಳಲ್ಲೇ ಸುಮಾರು 53 ಲಕ್ಷದಷ್ಟು ಪ್ರಮಾಣೀಕೃತ ಕರೆಗಳು ನೋಂದಾವಣೆಯಾಗಿವೆ.

ಇಲ್ಲಿಯವರೆಗೆ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿ ಒಟ್ಟು 68 ಲಕ್ಷ ಕರೆಗಳು ದಾಖಲಾಗಿದ್ದು, ಅದರಲ್ಲಿ ಕೆಲವೊಂದು ಕರೆಗಳು ಪುನರಾವರ್ತಿತ ಕರೆಗಳು ಮತ್ತು ಇನ್ನೂ ಕೆಲವು ಅಪ್ರಮಾಣೀಕೃತ  ಕರೆಗಳಾಗಿವೆ.

“ದೆಹಲಿಯ ಸೈಕಲ್‌ ವಾಕ್‌” ಯೋಜನೆಯ ಅಡಿಪಾಯ ಹಾಕುವ ಸಮಾರಂಭದಲ್ಲಿ ಮಾತನಾಡುತ್ತಾ ಅಮಿತ್‌ ಶಾ ರವರು ಸಭೆಯಲ್ಲಿ  ಕುಳಿತ ಪ್ರತಿಯೊಬ್ಬರೂ 8866288662 ನಂಬರ್‌ಗೆ ಮಿಸ್‌ ಕಾಲ್‌ ಕೊಡುವ ಮೂಲಕ ಪೌರತ್ವ ತಿದ್ದುಪಡಿ ಕಾಯ್ದೆಗೆ ಬೆಂಬಲ ನೀಡುವಂತೆ ಮಿಸ್ ಕಾಲ್”‌ ಅಭಿಯಾನಕ್ಕೆ ಪುಷ್ಟಿ ನೀಡುವಂತೆ ಸಮಾರಂಭದಲ್ಲಿ ನೆರೆದ ಜನರಲ್ಲಿ ಕೇಳಿಕೊಂಡರು.

ಆ ನಂಬರ್‌ ಗೆ ಡಯಲ್‌ ಮಾಡುವ ಮೂಲಕ  ಸಾಂಕೇತಿಕವಾಗಿ ನೀವೆಲ್ಲರೂ ನರೇಂದ್ರ ಮೋದಿಯವರಿಗೆ ನಿಮ್ಮ ಬೆಂಬಲ ಸಂದೇಶವನ್ನು ನೇರವಾಗಿ ಕಳುಹಿಸಿದಂತೆ ಎಂದು ಅವರು ಸಭೆಯನ್ನುದ್ದೇಶಿಸಿ ಹೇಳಿದರು.

ನಿಮ್ಮ ಕುಟುಂಬದವರಿಗೆ, ನಿಮ್ಮ ಸ್ನೇಹಿತರಿಗೂ ‌ಈ ನಂಬರ್‌ಗೆ ಡಯಲ್‌ ಮಾಡಲು ಹೇಳಿ ಮತ್ತು ಮಿಸ್ ಕಾಲ್‌ ಕೊಡುವ ಮೂಲಕ ನರೇಂದ್ರ ಮೋದಿಯವರಿಗೆ ನಿಮ್ಮೆಲ್ಲರ ಬೆಂಬಲವನ್ನು ವ್ಯಕ್ತಪಡಿಸಿ ಎಂದರು.

ಈ ಮಿಸ್‌ ಕಾಲ್‌  ಓಟ್‌ ಬ್ಯಾಂಕ್‌ ರಾಜಕೀಯ ಮಾಡುವವರ ಕಣ್ಣು ತೆರೆಸಲಿದೆ ಎಂದು ಅವರು ಹೇಳಿದರು.

LEAVE A REPLY

Please enter your comment!
Please enter your name here