ಪೌರತ್ವ ಕಾಯ್ದೆ ವಿರೋಧಿ ಹೋರಾಟದಿಂದ ಪ್ರಜಾಪ್ರಭುತ್ವ ಬಲಿಷ್ಠ – ಪ್ರಣಬ್‌ ಮುಖರ್ಜಿ

ನಾಗರಿಕತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್‌ಆರ್‌ಸಿ ವಿರುದ್ಧ ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆ ಶಾಂತಿಯುತವಾಗಿದ್ದು, ಪ್ರಜಾಪ್ರಭುತ್ವ ಬೇರುಗಳು ಇನ್ನಷ್ಟು ಸದೃಢವಾಗಿದೆ ಎಂದು ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಹೇಳಿದ್ದಾರೆ.

ನವದೆಹಲಿಯಲ್ಲಿ ಚುನಾವಣಾ ಆಯೋಗ ಆಯೋಜಿಸಿದ್ದ ದೇಶದ ಮೊದಲ ಮುಖ್ಯ ಚುನಾವಣಾ ಆಯುಕ್ತ ಸುಕುಮಾರ್‌ ಸೇನ್‌ ಸ್ಮರಣಾರ್ಥ ಕಾಯಕ್ರಮದಲ್ಲಿ ಮಾತಾಡಿದ ಪ್ರಣಬ್‌,

ಭಾರದತ ಪ್ರಜಾಪ್ರಭುತ್ವವನ್ನು ಮತ್ತೆ ಮತ್ತೆ ಪರೀಕ್ಷೆ ಒಡ್ಡಲಾಗಿದೆ. ಕಳೆದ ಕೆಲ ತಿಂಗಳುಗಳಿಂದ ಬೀದಿ ಬೀದಿಗಳಲ್ಲಿ ಬೃಹತ್‌ ಪ್ರತಿಭಟನೆಗಳು ನಡೆಯುತ್ತಿವೆ. ಅದರಲ್ಲೂ ಯುವಕರು ತಮ್ಮ ಧ್ವನಿ ಎತ್ತುತ್ತಿದ್ದು ಅವರ ಅಭಿಪ್ರಾಯ ಮಹತ್ವದಾಗಿದೆ. ಪ್ರತಿಭಟನಾಕಾರರು ದೇಶದ ಸಂವಿಧಾನದ ಮೇಲಿಟ್ಟಿರುವ ನಂಬಿಕೆಯನ್ನು ನೋಡಲು ಖುಷಿ ಆಗುತ್ತಿದೆ. ಶಾಂತಿಯುತವಾಗಿ ನಡೆಯುತ್ತಿರುವ ಪ್ರತಿಭಟನೆಯಿಂದ ಪ್ರಜಾಪ್ರಭುತ್ವದ ಬೇರುಗಳು ಬಲಿಷ್ಠವಾಗಿವೆ.

ಸಹಮತಿ ಪ್ರಜಾಪ್ರಭುತ್ವದ ಜೀವಾಳ. ಆಲಿಸುವಿಕೆ, ಚರ್ಚೆ, ಸಂವಾದ, ವಾದ, ಪ್ರತಿರೋಧಗಳಿಂದಲೇ ಪ್ರಜಾಪ್ರಭುತ್ವ ಉಳಿಯುತ್ತದೆ ಎಂದು ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here