ಪೌರತ್ವ ಕಾಯ್ದೆ ವಿರುದ್ಧ ವಿಶ್ವದ ಖ್ಯಾತ ಉದ್ಯಮಿಗಳ ಧ್ವನಿ…!

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ವಿಶ್ವದ ಖ್ಯಾತನಾಮ ಟೆಲಿಕಾಂ ಕಂಪನಿಗಳ ಮುಖ್ಯಸ್ಥರು ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಬಹಿರಂಗ ಪತ್ರ ಬರೆದಿದ್ದಾರೆ.

ಜಿಯೋ ಮುಖ್ಯಸ್ಥ ಮುಕೇಶ್ ಅಂಬಾನಿ, ಗೂಗಲ್ ಮಾತೃಸಂಸ್ಥೆ ಆಲ್ಫಾಬೆಟ್ ಮುಖ್ಯಸ್ಥ ಸುಂದರ್ ಪಿಚೈ, ಮೈಕ್ರೋಸಾಫ್ಟ್ ಮುಖ್ಯಸ್ಥ ಸತ್ಯ ನಡೆಲ್ಲ, ಫೇಸ್ಬುಕ್ ಮುಖ್ಯಸ್ಥ ಮಾರ್ಕ್ ಜುಕರ್ಬರ್ಗ್, ಟ್ವಿಟರ್ ಮುಖ್ಯಸ್ಥ ಜಾಕ್ ಮೋರ್ಸಿ, ಉಬೆರ್ ಮುಖ್ಯಸ್ಥ ಡಾರಾ ಖೋಸ್ರೋಶಾಹಿ, ಭಾರತಿ ಏರ್ಟೆಲ್ ಮುಖ್ಯಸ್ಥ ಗೋಪಾಲ್ ವಿತ್ತಲ್, ಫ್ಲಿಪ್ಕಾರ್ಟ್ ಮುಖ್ಯಸ್ಥ ಕಲ್ಯಾಣ್ ಕೃಷ್ಣಮೂರ್ತಿ, ಆಟೋ ಮುಖ್ಯಸ್ಥ ಶಂತನು ನರೇನ್ ಕೇಂದ್ರ ಸರ್ಕಾರದ ಉಗ್ರ ಬಲಪಂಥೀಯ ನಡೆಯನ್ನು ಕಟುವಾಗಿ ಟೀಕಿಸಿದ್ದಾರೆ.

ಎನ್ಆರ್ಸಿ ಜೊತೆಗೆ ಸೇರಿಕೊಂಡಿರುವ ಪೌರತ್ವ ತಿದ್ದುಪಡಿ ಕಾಯ್ದೆ ಮುಸ್ಲಿಂ ವಿರೋಧಿಯಾಗಿದೆ. ಇದರಿಂದ ಮುಸ್ಲಿಮರಿಗೆ ನೆಲೆ ಇಲ್ಲದಂತಾಗುತ್ತದೆ ಎಂದು ಉದ್ಯಮಿಗಳು ಹೇಳಿದ್ದಾರೆ. ಭಾರತದ ಪ್ರಜಾಪ್ರಭುತ್ವದ ಜೊತೆಗೆ ನಾವಿದ್ದೇವೆ ಎನ್ನುವ ಸಂದೇಶದೊಂದಿಗೆ ಉಗ್ರ ಬಲಪಂಥೀಯ ವಿರುದ್ಧ ಟೆಕ್ ಎಂಬ ಪೋಸ್ಟನ್ನು medium.com ಪ್ರಕಟಿಸಿದೆ.

LEAVE A REPLY

Please enter your comment!
Please enter your name here