ಪೊಲೀಸ್ ಮುಖ್ಯ ಪೇದೆಯ ಅಳಲನ್ನು ಕೇಳಿಸಿಕೊಳ್ಳುತ್ತಾ ಸರ್ಕಾರ?

ಇದೊಂದು ವಿಚಿತ್ರ ಪ್ರಕರಣ. ಪೊಲೀಸರೊಬ್ಬರು ಪೊಲೀಸ್ ಇಲಾಖೆ ವಿರುದ್ಧವೇ ಗಂಭೀರ ಆರೋಪ ಮಾಡಿದ ಪ್ರಕರಣ. ಬೆಂಗಳೂರಿನ ಯಲಹಂಕ ಠಾಣೆಯ ಮುಖ್ಯ ಪೇದೆ ಪಾಟೀಲ ಬಸವರಾಜ ಪಾಟೀಲ ಎಂಬುವವರು ಸೋಷಿಯಲ್ ಮೀಡಿಯಾ ಮೂಲಕ ನ್ಯಾಯಕ್ಕಾಗಿ ಅಂಗಲಾಚಿದ್ದಾರೆ.

https://m.facebook.com/story.php?story_fbid=724404191761224&id=100025749492471

ನಮ್ಮ ತಂದೆಯನ್ನು ಪೊಲೀಸರೇ ಹಣಕ್ಕಾಗಿ ಕೊಲೆ ಮಾಡಿದ್ದಾರೆ.. ಒಬ್ಬ ಪೊಲೀಸ್ ಅಗಿ ನನಗೆ ನನ್ನ ತಂದೆಯನ್ನು ಕಾಪಾಡಿಕೊಳ್ಳಲು ಆಗಲಿಲ್ಲ. ಇನ್ನು ಜನ ಸಾಮಾನ್ಯರ ಪಾಡೇನು ಎಂದು ಪ್ರಶ್ನೆ ಮಾಡಿದ್ದಾರೆ.

https://m.facebook.com/story.php?story_fbid=2843141132568133&id=100006168210433

ನನಗೆ 4 ವರ್ಷದಿಂದ ನ್ಯಾಯ ಸಿಕ್ಕಿಲ್ಲ. ಈ ಬಗ್ಗೆ ಸಿಬಿಐ ತನಿಖೆ ಆಗಬೇಕು ಎಂದು ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಬಂಟನೂರ ಗ್ರಾಮಕ್ಕೆ ಸೇರಿರುವ ಮುಖ್ಯಪೇದೆ ಪಾಟೀಲ ಬಸವರಾಜ ಪಾಟೀಲ, ಫೇಸ್ ಬುಕ್ ಮೂಲಕ ಸರ್ಕಾರವನ್ನು ಆಗ್ರಹಿಸಿದ್ದಾರೆ.

https://m.facebook.com/story.php?story_fbid=1082231742215832&id=100012870492403

ಜಮೀನು ವಿವಾದ ಸಂಬಂಧ ನಮ್ಮ ದಾಯಾದಿಗಳಿಂದ ಹಣ ಪಡೆದ ಪೊಲೀಸರು ನಮ್ಮ ಕುಟುಂಬಕ್ಕೆ ಇನ್ನಿಲ್ಲದ ಕಿರುಕುಳ ನೀಡಿದ್ದಾರೆ. 2006ರಿಂದ ನಿರಂತರವಾಗಿ ದೌರ್ಜನ್ಯ ನಡೆಸ್ತಿದ್ದಾರೆ. 2016ರಲ್ಲಿ ನಮ್ಮ ತಂದೆ ಕೊಲೆ ಆಗಿದ್ದಾರೆ. ತಾಯಿ, ಸಹೋದರ ಮೇಲೆ ಹಲ್ಲೆ ನಡೆದಿತ್ತು.

https://m.facebook.com/story.php?story_fbid=724570978411212&id=100025749492471

ನಮ್ಮ ತಂದೆ ಸಾಯುವ ಮುನ್ನ ದೌರ್ಜನ್ಯ ಎಸಗಿದ ಸಿಂದಗಿ ಠಾಣೆಯ 8 ಪೊಲೀಸರ ಹೆಸರುಗಳನ್ನು ಡೆತ್ ನೋಟ್ ನಲ್ಲಿ ಬರೆದಿಟ್ಟು ಸಾವನ್ನಪ್ಪಿದ್ದಾರೆ. ದಾಖಲೆ ಸಾಕ್ಷಿಗಳು ಇದ್ದರೂ ವಿಜಯಪುರ ಎಸ್ಪಿ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಅರೋಪ ಮಾಡಿದ್ದಾರೆ.

ಸದ್ಯ ಯಲಹಂಕ ಮುಖ್ಯ ಪೇದೆ ಪಾಟೀಲ ಬಸವರಾಜ ಪಾಟೀಲ ಆರೋಪ ಮಾಡಿರುವ ವಿಡಿಯೋ ಫುಲ್ ವೈರಲ್ ಆಗಿದೆ. ಪೊಲೀಸ್ ಇಲಾಖೆ ನ್ಯಾಯ ಕೊಡುತ್ತಾ..? ಗೊತ್ತಿಲ್ಲ.

LEAVE A REPLY

Please enter your comment!
Please enter your name here