ಪೊಲೀಸ್‌ ಅಧಿಕಾರಿಗಳ ವರ್ಗಾವಣೆ – ಕರಾವಳಿಗೆ ಹೊಸ ಎಸ್‌ಪಿ

ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಮೂವರು ಪೊಲೀಸ್‌ ಅಧಿಕಾರಿಗಳನ್ನು ವರ್ಗಾಯಿಸಿ ಆದೇಶ ಹೊರಡಿಸಿದೆ.

ಉಡುಪಿ ಜಿಲ್ಲೆಯ ಎಸ್‌ಪಿ ಆಗಿ ಎನ್‌ ವಿಷ್ಣುವರ್ಧನ ಅವರನ್ನು ವರ್ಗಾಯಿಸಿದೆ. 2016 ನೇ ಕೇಡರ್‌ನ ಐಪಿಎಸ್‌ ಅಧಿಕಾರಿ ಆಗಿರುವ ಇವರು ಬೆಂಗಳೂರು ನಗರದಲ್ಲಿ ಡಿಸಿಪಿ (ಆಡಳಿತ ವಿಭಾಗ)ದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಉಡುಪಿ ಎಸ್‌ಪಿ ಹುದ್ದೆ ಖಾಲಿ ಇತ್ತು.

ಚಿತ್ರದುರ್ಗದ ಎಸ್‌ಪಿ ಆಗಿರುವ ಡಾ.ಅರುಣ್‌ ಕೆ ಅವರನ್ನು ಬೆಂಗಳೂರಲ್ಲಿರುವ ಕರ್ನಾಟಕ ಮೀಸಲು ಪೊಲೀಸ್‌ ಪಡೆಯ 9 ನೇ ಬೆಟಾಲಿಯನ್‌ನ ಕಮಾಡೆಂಟ್‌ ಆಗಿ ವರ್ಗಾಯಿಸಲಾಗಿದೆ. ಉಡುಪಿ ಎಸ್‌ಪಿ ಆಗಿದ್ದ ನಿಶಾ ಜೇಮ್ಸ್‌ ಅವರನ್ನು ವರ್ಗಾಯಿಸಲಾಗಿತ್ತು. ಈ ವರ್ಷದ ಫೆಬ್ರವರಿಯಲ್ಲಿ ನಿಶಾ ಕರಾವಳಿ ಜಿಲ್ಲೆಯ ಎಸ್‌ಪಿ ಆಗಿ ಅಧಿಕಾರ ಸ್ವೀಕರಿಸಿದ್ದರು.

ಬೆಂಗಳೂರಲ್ಲಿರುವ ಕರ್ನಾಟಕ ಮೀಸಲು ಪೊಲೀಸ್‌ ಪಡೆಯ 9 ನೇ ಬೆಟಾಲಿಯನ್‌ನ ಕಮಾಡೆಂಟ್‌ ಆಗಿರುವ ಎಸ್‌ ಗಿರೀಶ್‌ ಅವರನ್ನು ಚಿತ್ರದುರ್ಗ ಎಸ್‌ಪಿಯಾಗಿ ವರ್ಗಾಯಿಸಲಾಗಿದೆ.

LEAVE A REPLY

Please enter your comment!
Please enter your name here