ಪೊಲೀಸರಿಗೆ ಕೊರೋನಾ.. ಕುಣಿಗಲ್ ಪೊಲೀಸ್ ಠಾಣೆ ಸೀಲ್ ಡೌನ್

ಪೊಲೀಸ್ ಮುಖ್ಯ ಪೇದೆಯೊಬ್ಬರಿಗೆ ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆ ಕುಣಿಗಲ್ ಪಟ್ಟಣದ ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಿದ ಘಟನೆ ನಡೆದಿದೆ. ಕುಣಿಗಲ್ ಪಟ್ಟಣದಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ.

ಸದ್ಯ ಪೊಲೀಸ್ ಠಾಣೆಯನ್ನು ಪಕ್ಕದಲ್ಲೇ ಇರುವ ಕಂದಾಯ ಭವನಕ್ಕೆ ಸ್ಥಳಾಂತರ‌ ಮಾಡಲಾಗಿದೆ. ಸೋಂಕಿತ ಮುಖ್ಯ ಪೇದೆ ಕೊರೋನಾ‌ ಪ್ರಕರಣಗಳ ಮೇಲ್ವಿಚಾರಣೆ ಮಾಡುತ್ತಿದ್ದರು ಎನ್ನಲಾಗಿದೆ. ಇದೀಗ ಇವರಿಗೆ ಸೋಂಕು ತಗುಲಿದೆ. ತುಮಕೂರು ಜಿಲ್ಲಾಸ್ಪತ್ರೆಯ ಕೊರೋನಾ ವಾರ್ಡ್ ಗೆ ದಾಖಲಿಸಲಾಗಿದೆ.

ಮುಖ್ಯಪೇದೆ ಸಂಪರ್ಕದಲ್ಲಿರುವ ಕುಟುಂಬಸ್ಥರು, ಪೊಲೀಸ್ ಸಿಬ್ಬಂದಿ ಮತ್ತು ಸ್ಥಳೀಯರಿಗೆ ಸೋಂಕು ಭೀತಿ ಆವರಿಸಿದೆ. ಅಂದ ಹಾಗೆ, ತುಮಕೂರು ಜಿಲ್ಲೆಯಲ್ಲಿ ಪೊಲೀಸರೊಬ್ಬರಿಗೆ ಸೋಂಕು ತಗುಲಿರುವುದು ಇದೇ ಮೊದಲು.

LEAVE A REPLY

Please enter your comment!
Please enter your name here