ಪೈಲೆಟ್ ಆದ್ರಾ ಕಂಗನಾ?

ಅರೇ! ಇದೇನಿದು ಕಂಗನಾ ಪೈಲೆಟ್ ವೇಶದಲ್ಲಿ ನಡೆದು ಬರುತ್ತಿರುವುದು ಅವಳ ಹಿಂದೆ ಒಂದು ಯುದ್ಧ ವಿಮಾನ ಇರುವುದು? ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕಂಗನಾ ಅವರು ಪೈಲೆಟ್ ಸಮವಸ್ತ್ರದಲ್ಲಿರುವ ಫೋಟೋವೊಂದು ಹರಿದಾಡುತ್ತಿದೆ.

ಹಾಗಾದ್ರೆ ಕಂಗನಾ ಸಿನಿಮಾ ಬಿಟ್ಟು ಪೈಲೆಟ್ ಆದ್ರಾ ಅಂತ ಯೋಚಿಸ್ತಾ ಇದೀರಾ? ಖಂಡಿತಾ ಇಲ್ಲ ನಟಿ ಕಂಗನಾ ರಣಾವತ್ ಅಭಿನಯದ ತೇಜಸ್ ಸಿನಿಮಾದ ಫಸ್ಟ್ ಲುಕ್ ಫೋಟೋ ಇದು.

ತೇಜಸ್ ದೇಶ ಭಕ್ತಿ ಪ್ರಧಾನವಾದ ಚಿತ್ರ. ನಮ್ಮ ರಕ್ಷಣಾಪಡೆಯಲ್ಲಿ ಮಹಿಳೆಯರೂ ಇದ್ದಾರೆ. ವಾಯುಪಡೆಯಲ್ಲಿನ ಮಹಿಳೆಯ ದೈರ್ಯ ಸಾಹಸವನ್ನು ತೋರಿಸುವ ಚಿತ್ರ ಇದಾಗಿದ್ದು ಇದರಲ್ಲಿ ಕಂಗನಾ ಮುಖ್ಯ ಭೂಮಿಕೆ ನಿಭಾಯಿಸಲಿದ್ದಾರೆ.

ಉರಿ ಸಿನಿಮಾ ನಂತರ ದೇಶ ಭಕ್ತಿಯ ಮತ್ತೊಂದು ಸಿನಿಮಾ ತೆರೆಕಾಣಲು ಸಿದ್ದವಾಗಿದೆ. ಅವಕಾಶ ನೀಡಿದರೆ ಹೆಣ್ಣು ಏನನ್ನಾದರೂ ಸಾಧಿಸಬಲ್ಲಳು ಎಂಬುದನ್ನು ಈ ದೇಶ ಭಕ್ತಿಯ ಸಿನಿಮಾ ತೋರಿಸಲಿದೆ ಎಂಬುದು ಚಿತ್ರತಂಡದ ಮಾತು.

ದೊಡ್ಡ ಪ್ರಮಾಣದಲ್ಲಿ ದೇಶವನ್ನು ಪ್ರೇರೇಪಿಸುವ ವಿಷಯ ಈ ಸಿನಿಮಾದ ಮಾತುಕತೆಗಳಿಂದ ಗೊತ್ತಾಗುತ್ತಿದೆ. ಸಿನಿಮಾ ತೆರೆಕಂಡ ನಂತರವಷ್ಟೇ ಬಹಳಷ್ಟು ಕುತೂಹಲಗಳಿಗೆ ತೆರೆಬೀಳಲಿದೆ.

LEAVE A REPLY

Please enter your comment!
Please enter your name here