ಪೇಟಿಎಂ ಬಳಕೆದಾರರಿಗೆ ಹೊಸ ವರ್ಷದ ಶಾಕ್..!

ಪೇಟಿಎಂ ಬಳಸುತ್ತಿದ್ದೀರಾ ಹಾಗಾದ್ರೆ ತಪ್ಪದೇ ಈ ಸುದ್ದಿಯನ್ನು ಓದಿ. ಹೌದು ಇನ್ಮುಂದೆ ಪೇಟಿಎಂ ಬಳಕೆದಾರರು ಶೇಕಡಾ ಎರಡರಷ್ಟು ಶುಲ್ಕವನ್ನು ಪಾವತಿಸುವುದು ಕಡ್ಡಾಯವಾಗಿದೆ. ಹೊಸ ನಿಯಮವನ್ನು ಜನವರಿ ಒಂದರಿಂದಲೇ ಪೇಟಿಎಂ ಜಾರಿಗೊಳಿಸಿದೆ.

ಕ್ರೆಡಿಟ್ ಕಾರ್ಡ್ನಿಂದ ಪೇಟಿಎಂ ವ್ಯಾಲೆಟ್ ಗೆ ಹಣ ವರ್ಗಾವಣೆ ಮಾಡಿ ವಾಲೆಟ್ನಲ್ಲಿ ಹಣದ ಮೊತ್ತ ರೂಪಾಯಿ.10,000 ಗಡಿ ದಾಟಿದರೆ ಆಗ ಶೇಕಡ ಎರಡರಷ್ಟು ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಕ್ರೆಡಿಟ್ ಕಾರ್ಡ್ ಬಳಕೆದಾರರು ತಮ್ಮ ಕ್ರೆಡಿಟ್ ಕಾರ್ಡ್ನಿಂದ ಪೇಟಿಎಂ ಹಣ ವರ್ಗಾವಣೆ ಮಾಡಿ ಅಲ್ಲಿಂದ ತಮ್ಮ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡುತ್ತಿದ್ದರು. ಈ ಮೂಲಕ ಕ್ರೆಡಿಟ್ ಕಾರ್ಡ್ ನಲ್ಲಿ ಲಭ್ಯವಿರುವ 40 ದಿನಗಳ ಬಡ್ಡಿರಹಿತ ಸೌಲಭ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಪೇಟಿಎಂ ಕ್ರೆಡಿಟ್ ಕಾರ್ಡ್ನಿಂದ ಮಾಡಲಾಗುವ ಹಣ ವರ್ಗಾವಣೆಯ ಮೇಲೆ ಶೇಕಡ ಎರಡರಷ್ಟು ಶುಲ್ಕ ವಿಧಿಸಿದೆ.

LEAVE A REPLY

Please enter your comment!
Please enter your name here