ಪೇಜಾವರ ಶ್ರೀ ಬೃಂದಾವನ ಐಕ್ಯದತ್ತ..

ಪೇಜಾವರ ಶ್ರೀಗಳ ಪಾರ್ಥೀವ ಶರೀರವನ್ನು ಉಡುಪಿ ಅಜ್ಜರಕಾಡು ಮೈದಾನದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು , ಶ್ರೀಗಳ ಇಚ್ಚೆಯಂತೆ  ಬೆಂಗಳೂರಿನ ವಿದ್ಯಾಪೀಠದಲ್ಲಿ ಬೃಂದಾವನ ನಿರ್ಮಿಸಲಾಗುವುದು.

                                       ಉಡುಪಿಯಲ್ಲಿ ಭಕ್ತರಿಂದ ಗೌರವ ಸಮರ್ಪಣೆ

ಇಂದು ಮಧ್ಯಾಹ್ನ ಸುಮಾರು 1-30ರ ಸುಮಾರಿಗೆ ಪಾರ್ಥಿವ‌ಶರೀರವನ್ನ ಬೆಂಗಳೂರಿಗೆ ಹೆಲಿಕಾಪ್ಟರ್ ಮುಖಾಂತರ ತರಲಾಗುತ್ತದೆ. ಮದ್ಯಾಹ್ನ 3ಗಂಟೆಯಿಂದ 5-30ರ ವರೆಗೆ ನ್ಯಾಷನಲ್‌ಕಾಲೇಜ್ ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತದೆ.

ಮಠದ ಬಳಿ ಶಿಷ್ಯವರ್ಗದವರಿಗೆ ಬಿಟ್ಟು ಭಕ್ತಾದಿಗಳಿಗೆ‌ ದರ್ಶನಕ್ಕೆ ಅವಕಾಶ ಇಲ್ಲ. ಸಾರ್ವಜನಿಕರಿಗೆ ಶ್ರೀಗಳ ಪಾರ್ಥಿವ‌ಶರೀರದ ದರ್ಶನಕ್ಕಾಗಿ ನ್ಯಾಷನಲ್‌‌ ಕಾಲೇಜು‌ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ, ಸಂಜೆಯ ಬಳಿಕ ಅಂತಿಮ ವಿಧಿವಿಧಾನಗಳನ್ನು ಮಾಡಲಾಗುತ್ತದೆ.

LEAVE A REPLY

Please enter your comment!
Please enter your name here