ಪೆನ್ಸಿಲ್ ಶೇಡಿಂಗ್ ನಲ್ಲಿ ಕಾಣಿಸಿಕೊಂಡ ಕೊರೋನ ವಾರಿಯರ್ಸ್…

ಕೋವಿಡ್ 19 ಸಂದರ್ಭದಲ್ಲಿ ಹವ್ಯಾಸಿ ಚಿತ್ರ ಕಲಾವಿದ ಅಭಿಷೇಕ್ ಪೆನ್ಸಿಲ್ ಸ್ಕೆಚ್ ಮೂಲಕ ಕೊರೋನಾ ವಾರಿಯರ್ಸ್ ಭಾವಚಿತ್ರವನ್ನು ಬಿಡಿಸುವ ಮೂಲಕ ತಮ್ಮ ಗೌರವವನ್ನು ಸಲ್ಲಿಸಿದ್ದಾರೆ. ದಕ್ಷಿಣ ಕನ್ನಡದ‌ ಈ ಕಲಾವಿದ ಚಾರ್ಕೋಲ್ ಪೆನ್ಸಿಲ್ ಶೇಡಿಂಗ್ ಮೂಲಕ ಕೊರೋನಾ ವಾರಿಯರ್ಸ್‌ ಗೆ ತಮ್ಮ ಕಲೆಯಿಂದ ವಿಶಿಷ್ಟ ನಮನ ಸಲ್ಲಿಸಿದ್ದಾರೆ.

ಪುತ್ತೂರು ಆರ್ವಿ ಇಂಟರ್‌ ಗ್ರಾಫಿಕ್‌ನ ಡಿಸೈನರ್‌ ಆಗಿರುವ ಅಭಿಷೇಕ್  ಈ ಸುಂದರ ಕೃತಿಯನ್ನು ರಚಿಸಿದ್ದಾರೆ. ಮಂಗಳೂರಿನ ನಿವಾಸಿಯಾದ ರವಿಕುಮಾರ್ ಮತ್ತು ಪ್ರೇಮಲತಾ ದಂಪತಿಯ ಪುತ್ರನಾದ ಇವರು ರತನ್ ಟಾಟಾ ಸೇರಿದಂತೆ ಹಲವರ ಚಿತ್ರಗಳು ಇವರ ಕುಂಚದಲ್ಲಿ ಅರಳಿದೆ.

ಇವರು ಬಿಡಿಸಿದ ಈ ಚಿತ್ರವು ಇತ್ತೀಚೆಗೆ ಚೈನಾದ ವೈದ್ಯನೊಬ್ಬ ತನ್ನ ಪತ್ನಿಗೆ ಅಂತಿಮ ವಿದಾಯ ಹೇಳುತ್ತಿರುವ ಫೋಟೋ ಆಗಿದ್ದು, ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

-ಹವ್ಯಾಸಿ ಚಿತ್ರ ಕಲಾವಿದ ಅಭಿಷೇಕ್

LEAVE A REPLY

Please enter your comment!
Please enter your name here