ಪಿಪಿಇ ಕಿಟ್‌ ಖರೀದಿ ಹಗರಣ – ಬಿಜೆಪಿ ರಾಜ್ಯಾಧ್ಯಕ್ಷರ ರಾಜೀನಾಮೆ

ಪಿಪಿಇ ಕಿಟ್‌ ಖರೀದಿಯಲ್ಲಿ ಲಂಚ ಕೇಳಿದ ಹಗರಣದಲ್ಲಿ ಸಿಲುಕಿಕೊಂಡಿರುವ ಹಿಮಾಚಲ ಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದ್ದು ಅಕ್ರಮದಲ್ಲಿ ತಮ್ಮ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಡಾ ರಾಜೀವ್‌ ಬಿಂದಾಲ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ನೈತಿಕತೆಯ ಹೊಣೆ ಹೊತ್ತು ರಾಜೀನಾಮೆ ನೀಡುತ್ತಿರುವುದಾಗಿ ಡಾ ರಾಜೀವ್‌ ಬಿಂದಾಲ್‌ ಹೇಳಿದ್ದಾರೆ.

ವಾರದ ಹಿಂದೆಯಷ್ಟೇ ಹಿಮಾಚಲಪ್ರದೇಶದ ಭ್ರಷ್ಟಾಚಾರ ನಿಗ್ರಹ ದಳ ಆರೋಗ್ಯ ಸೇವೆಗಳ ಇಲಾಖೆಯ ನಿರ್ದೇಶಕ ಡಾ ಎ ಕೆ ಗುಪ್ತಾ ಎಂಬವರನ್ನು ಅರೆಸ್ಟ್‌ ಮಾಡಿತ್ತು.

ಪಿಪಿಇ ಕಿಟ್‌ ಖರೀದಿ ವ್ಯವಹಾರದಲ್ಲಿ ಗುಪ್ತಾ 5 ಲಕ್ಷ ರೂಪಾಯಿ ಲಂಚ ಪಡೆದಿರುವ ಬಗ್ಗೆ ಆಡಿಯೋ ಕ್ಲಿಪ್‌ವೊಂದು ಬಹಿರಂಗವಾಗಿತ್ತು. ಪಿಪಿಇ ಕಿಟ್‌ ಖರೀದಿಗಾಗಿ ತಯಾಕರಿಂದ ಲಂಚಕ್ಕಾಗಿ ಗುಪ್ತ ಬೇಡಿಕೆ ಇಟ್ಟಿದ್ದರು. ಈ ಹಗರಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಂದಾಲ್‌ ಭಾಗಿ ಆಗಿದ್ದಾರೆ ಎಂದು ಕಾಂಗ್ರೆಸ್‌ ಆರೋಪಿಸಿತ್ತು.

LEAVE A REPLY

Please enter your comment!
Please enter your name here