ಪಿಜಿಗಳಿಗೆ ಹೊಸ ರೂಲ್ಸ್

ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದಂತೆ ಬಹುತೇಕ ಪಿಜಿಗಳು ಮುಚ್ಚಿದ್ದವು ಈಗ ಲಾಕ್‌ ಡೌನ್‌ ಸಡಿಲಿಸಿ ಸಾರ್ವಜನಿಕರಿಗೆ ಸಾರಿಗೆ ಆರಂಭಿಸಿರುವುದರಿಂದ ಬಹಳಷ್ಟು ಜನ ನಗರಕ್ಕೆ ಬರಲಾರಂಭಿಸಿದ್ದಾರೆ.

ನಗರಗಳಲ್ಲಿ ಇಷ್ಟು ದಿನ ಮುಚ್ಚಿದ ಪಿಜಿಗಳು ಮತ್ತೆ ತೆರೆದಿವೆ. ಈ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆಯು ಪಿಜಿ ಕಟ್ಟಡಗಳು ಅನುಸರಿಸಬೇಕಾದ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿದೆ.

ಇನ್ನು ಮುಂದೆ ಪಿಜಿ ಗೆ ಬರುವ ಪ್ರತಿಯೊಬ್ಬರ ಆಧಾರ್ ಕಾರ್ಡ್ ವೋಟರ್ ಐಡಿ ಅಥವಾ ಯಾವುದೇ ಐಡೆಂಟಿಟಿ ಕಾರ್ಡ್ ನ್ನು ಪಡೆದುಕೊಂಡಿರಬೇಕು

ಇದರಂತೆ ಪಿಜಿಗಳಲ್ಲಿ ಪ್ರತಿ ಕೊಠಡಿಗೂ ಹೊಂದಿಕೊಂಡು ಬಾತ್ ರೂಮ್ ಹಾಗೂ ಟಾಯ್ಲೆಟ್ ರೂಮ್ ಇರಬೇಕು ಹಾಸಿಗೆಗಳ ನಡುವೆ ಕನಿಷ್ಠ ಎರಡು ಮೀಟರ್‌ ಗಳ ಅಂತರ ಇರಬೇಕು.‌

ಪ್ರತಿನಿತ್ಯ ಪಿಜಿ ಕಟ್ಟಡದ ಹೊರಗೆ ಹಾಗೂ ಒಳಗೆ ಸೋಂಕು ನಿವಾರಕ ದ್ರಾವಣವನ್ನು ಸಿಂಪಡಿಸಬೇಕು, ಪ್ರತಿಯೊಬ್ಬರಿಗೂ ಬಟ್ಟೆ ತೊಳೆಯಲು ಪ್ರತ್ಯೇಕ ವ್ಯವಸ್ಥೆ ಮಾಡಬೇಕು.

ಪಿಜಿಯಲ್ಲಿ ವಾಸಿಸುವ ಯಾವುದೇ ವ್ಯಕ್ತಿಗೂ ಸೋಂಕು ಕಾಣಿಸಿಕೊಂಡಲ್ಲಿ ಕೂಡಲೇ ಜಿಲ್ಲಾಧಿಕಾರಿಗಳಿಗೆ ಮಾಹಿತಿ ಕೊಡಬೇಕು ಸೋಂಕಿತ ವ್ಯಕ್ತಿ ಇದ್ದರೆ ಸೋಂಕು ನಿವಾರಕ ದ್ರಾವಣ ಸಿಂಪಡಿಸಿ, 24 ಗಂಟೆ ಬಳಿಕ ಪುನರಾರಂಭಗೊಳಿಸಲು ಅವಕಾಶ ನೀಡಲಾಗುತ್ತದೆ.

ಪಿಜಿಯೊಳಗೆ ಥರ್ಮಲ್ ಸ್ಕ್ಯಾನಿಂಗ್ ಕಡ್ಡಾಯ ಸೇರಿದಂತೆ ಅನೇಕ ರೂಲ್ಸ್ ಗಳನ್ನು ಇಲಾಖೆಯು ಸೂಚಿಸಿದೆ.

 

LEAVE A REPLY

Please enter your comment!
Please enter your name here