ಪಾಕ್​ನೊಂದಿಗೆ ಸೌಹಾರ್ದಯುತ ಸಂಬಂಧ ಹೊಂದಲು ಭಾರತ ಬಯಸುತ್ತದೆ – ಪಾಕ್​ ಪ್ರಧಾನಿ ಇಮ್ರಾನ್​ಖಾನ್​ಗೆ ಪ್ರಧಾನಿ ಮೋದಿ ಪತ್ರ

ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​ಗೆ ಪತ್ರ ಬರೆದಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನದ ಜನರೊಂದಿಗೆ ನಾವು ಸೌಹಾರ್ದಯುತ ಸಂಬಂಧ ಹೊಂದಲು ಬಯಸುತ್ತೇವೆ ಎಂದು ಹೇಳಿದ್ದಾರೆ.

ಪಾಕಿಸ್ತಾನದ ರಾಷ್ಟ್ರೀಯ ದಿನದಂದು ನಾನು ಪಾಕಿಸ್ತಾನದ ಜನತೆಗೆ ಶುಭಾಶಯ ತಿಳಿಸುತ್ತಿದ್ದೇನೆ ಎಂದು ಪತ್ರದಲ್ಲಿ ಬರೆದಿರುವ ಪ್ರಧಾನಿ ಮೋದಿ,

ನೆರೆ ರಾಷ್ಟ್ರವಾಗಿ ಭಾರತ ಪಾಕಿಸ್ತಾನದ ಜನತೆಯ ಜೊತೆಗೆ ಸೌಹಾರ್ದಯುತ ಸಂಬಂಧ ಹೊಂದಲು ಬಯಸುತ್ತದೆ. ಇದಕ್ಕಾಗಿ ನಂಬಿಕೆ, ದ್ವೇಷ ಮತ್ತು ಭಯೋತ್ಪಾದನೆ ತಡೆಗಟ್ಟುವುದು ಅಗತ್ಯ ಎಂದು ಪತ್ರದಲ್ಲಿ ಪ್ರಧಾನಿ ಮೋದಿ ತಿಳಿಸಿದ್ದಾರೆ.

ಇಂತಹ ಸಂಕಷ್ಟದ ಸಮಯದಲ್ಲಿ ನಿಮಗೆ ಮತ್ತು ಪಾಕಿಸ್ತಾನದ ಜನತೆ ಸವಾಲಗಳನ್ನು ಎದುರಿಸುವಂತಾಗಲಿ ಎಂದು ಇಮ್ರಾನ್​ ಖಾನ್​ಗೆ ಬರೆದ ಪತ್ರದಲ್ಲಿ ಪ್ರಧಾನಿ ಮೋದಿ ತಿಳಿಸಿದ್ದಾರೆ.

ಮಾರ್ಚ್​ 23ರಂದು ಪಾಕಿಸ್ತಾನ ರಾಷ್ಟ್ರೀಯ ದಿನ ಎಂದು ಆಚರಿಸಲಾಗುತ್ತದೆ.

ಶನಿವಾರ ಕೊರೋನಾ ಸೋಂಕು ದೃಢಪಟ್ಟಿದ್ದ ಇಮ್ರಾನ್​ ಖಾನ್​ ಶೀಘ್ರ ಚೇತರಿಕೆಗಾಗಿ ಪ್ರಧಾನಿ ಮೋದಿ ಪ್ರಾರ್ಥಿಸಿ ಟ್ವೀಟಿಸಿದ್ದರು.

LEAVE A REPLY

Please enter your comment!
Please enter your name here