ಪಾಕಿಸ್ತಾನದಲ್ಲಿ ಉಗ್ರರ ಶಿಬಿರಗಳು ಸಂಪೂರ್ಣ ಹೈಟೆಕ್.. ಮತ್ತೊಮ್ಮೆ ನಡೆಯುತ್ತಾ ಸರ್ಜಿಕಲ್ ಸ್ಟ್ರೈಕ್?

ಇಡೀ ಜಗತ್ತಿಗೆ ಕಂಟಕವಾಗಿರುವ ರಕ್ತಾಬೀಜಾಸುರರ ಸಂತತಿ ಹೆಚ್ಚಾಗಲು ಪಾಕಿಸ್ತಾನವೇ ಕಾರಣ ಅನ್ನೋದು ಮತ್ತೆ ಮತ್ತೆ ಸಾಬೀತಾಗುತ್ತಲೆ ಇರುತ್ತದೆ. ಇದೀಗ ಭಯೋತ್ಪಾದಕ ಶಿಬಿರಗಳ ಹೊಸ ಅಪ್‍ಡೇಟ್ ಸಿಕ್ಕಿದೆ.

ಪಾಕಿಸ್ತಾನದಲ್ಲಿ ಸಾವಿರಾರು ಯುವಕರನ್ನು ಬಲವಂತವಾಗಿ ಎಳೆದೊಯ್ಯುತ್ತಿರುವ ಭಯೋತ್ಪಾದಕರು, ಡಿರ್ಯಾಡಿಕಲೈಜೇಷನ್ ಕ್ಯಾಂಪ್‍ಗಳಲ್ಲಿ ಭಯೋತ್ಪಾದನೆ ತರಬೇತಿ ನೀಡುತ್ತಿರುವುದನ್ನು ಭಾರತದ ಗುಪ್ತಚರ ಪಡೆಗಳು ಪತ್ತೆ ಹಚ್ಚಿವೆ.

ಪಾಕಿಸ್ತಾನದ ಪಂಜಾಬ್,ಬಲೂಚಿಸ್ತಾನ, ಖೈಬರ್ ಫಖ್ತುಂಖ್ವಾ ಪ್ರಾಂತ್ಯಗಳಲ್ಲಿ 12ಕ್ಕೂ ಹೆಚ್ಚು ಉಗ್ರವಾದ ಶಿಬಿರಗಳನ್ನು ನಿರ್ಮಿಸಲಾಗಿದ್ದು, ಅಲ್ಲಿ 70ಕ್ಕೂ ಹೆಚ್ಚು ಯುವಕರಿಗೆ ಉಗ್ರವಾದದ ತರಬೇತಿ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಯುವಕರು ಉಗ್ರವಾದ ಶಿಬಿರದಿಂದ ಓಡಿಹೋಗದಿರಲು, ಅವರಿಗೆ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಿರುವುದು ಉಪಗ್ರಹ ಛಾಯಚಿತ್ರಗಳಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ. ಮಸೀದಿ, ಸ್ಪೋಟ್ರ್ಸ್ ಕಾಂಪ್ಲೆಕ್ಸ್, ಥಿಯೇಟರ್, ಐಶಾರಾಮಿ ಕೊಠಡಿಗಳನ್ನು ನಿರ್ಮಿಸಲಾಗಿದೆ.

ಗುಪ್ತಚರ ದಳದ ಪ್ರಕಾರ, ಉಗ್ರವಾದದ ತರಬೇತಿ ಪಡೆಯುತ್ತಿರುವವರಲ್ಲಿ ಶೇಕಡಾ 92ರಷ್ಟು ಮಂದಿ 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಇದರಲ್ಲಿ ಶೇಕಡಾ 12ರಷ್ಟು ಮಂದಿ ಅಪ್ರಾಪ್ತರು. ಇಷ್ಟೆಲ್ಲಾ ಸಾಕ್ಷ್ಯ ಸಿಕ್ಕಿದ ಬೆನ್ನಲ್ಲೇ ಒಂದು ಪ್ರಶ್ನೆ ಉದ್ಭವಿಸುತ್ತದೆ. ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತ ಮತ್ತೊಮ್ಮೆ ಸರ್ಜಿಕಲ್ ಸ್ಟ್ರೈಕ್ ನಡೆಸುತ್ತಾ..?

LEAVE A REPLY

Please enter your comment!
Please enter your name here