ಪಾಕಿಸ್ತಾನಕ್ಕೆ ಸೀರೆ ತೆಗೆದುಕೊಂಡು ಹೋಗಿ ಸಂಬಂಧ ಬೆಳೆಸಲು ಹೋಗಿದ್ದು ಯಾರು..? – ಪ್ರಧಾನಿ ಮೋದಿಗೆ ಕುಮಾರಸ್ವಾಮಿ ಪ್ರಶ್ನೆ

ಪಾಕಿಸ್ತಾನ ಅಧ್ಯಕ್ಷರ ಮನೆಗೆ ಸೀರೆ ತೆಗೆದುಕೊಂಡು ಸಂಬಂಧ ಬೆಳೆಸಲು ಹೋಗಿದ್ದು ಯಾರು ಎಂದು ಪ್ರಧಾನಿ ನರೇಂದ್ರ ಮೋದಿ ಹೆಸರನ್ನು ಉಲ್ಲೇಖಿಸಿ ಮಾಜಿ ಸಿಎಂ ಕುಮಾರಸ್ವಾಮಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಂಗಳೂರಲ್ಲಿ ಬಾಂಬ್‌ ಪ್ರಕರಣದ ಬಗ್ಗೆ ತಾವು ನೀಡಿದ ಹೇಳಿಕೆಯನ್ನು ಖಂಡಿಸಿದ ಬಿಜೆಪಿಗೆ ತಿರುಗೇಟು ಕೊಟ್ಟ ಅವರು, ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನವನ್ನು ಏಕಾಂಗಿ ಮಾಡುವ ಬಗ್ಗೆ ಮಾತಾಡುತ್ತೀರಿ. ನಾನೇನು ಪಾಕಿಸ್ತಾನ ಅಧ್ಯಕ್ಷರ ಕುಟುಂಬದವರಿಗೆ ಸೀರೆ ಕೊಡಲು ಹೋಗಿಲ್ಲ. ಪ್ರಧಾನಿಯವರೇ ತಾನೇ ಪಾಕಿಸ್ತಾನ ಅಧ್ಯಕ್ಷರ ಕುಟುಂಬಕ್ಕೆ ಸೀರೆ ಕೊಟ್ಟಿದ್ದು ಎಂದು ಬಿಜೆಪಿಗೆ ಕುಟುಕಿದ್ದಾರೆ.

ಜಾಗತಿಕ ಮಟ್ಟದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿಯವರಿಗೆ ಉತ್ತರ ಕೇಳಿದವರು ಯಾರು..? ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನವನ್ನು ಒಬ್ಬಂಟಿ ಮಾಡ್ಬೇಕು ಎಂದು ನಿರ್ದೇಶನ ಕೊಟ್ಟವರು ಯಾರು..? ಅದರ ಅವಶ್ಯಕತೆ ನಮಗೆ ಏನಿದೆ..? ಇಲ್ಲಿ ನಮ್ಮ ಜನರೇ ಹೊಟ್ಟೆಗೆ ಹಿಟ್ಟಿಲ್ಲದೇ ನೆರೆ ಹಾವಳಿಯಿಂದ ಬೀದಿಯಲ್ಲಿ ಮಲಗುತ್ತಿದ್ದಾರೆ. ಮೊದಲು ಅದನ್ನು ಸರಿಪಡಿಸಿಕೊಳ್ಳಿ. ಪಾಕಿಸ್ತಾನವನ್ನು ಆಮೇಲೆ ಒಬ್ಬಂಟಿ ಮಾಡೋಣ, ನಾವು ಕೈ ಜೋಡಿಸುತ್ತೇವೆ. ಈ ದೇಶ, ಈ ರಾಜ್ಯ ಉಳಿಸಿಕೊಳ್ಳುವುದಕ್ಕೆ ಏನು ಬೇಕು ಅದನ್ನು ನೋಡಿಕೊಳ್ಳೋಣ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ನಾವು ಬಿಜೆಪಿಯವರಿಂದ ದೇಶದ್ರೋಹಿ, ಪಾಕಿಸ್ತಾನ ಪರ ಎಂದು ಸರ್ಟಿಫಿಕೇಟ್‌ ತೆಗೆದುಕೊಳ್ಳಬೇಕಾ..? ನೆಹರು ಬದುಕಿದ್ದಾಗ ನರೇಂದ್ರ ಮೋದಿಯೇ ಹುಟ್ಟೇ ಇರಲಿಲ್ಲ. ಅವರ ತಪ್ಪನ್ನು ನೀವು ಸರಿ ಮಾಡ್ತಿರಾ ಎಂದು ಪ್ರಧಾನಿ ಮೋದಿಗೆ ಪ್ರಶ್ನಿಸಿದರು.

LEAVE A REPLY

Please enter your comment!
Please enter your name here