ಪದ್ಮಶ್ರೀ ಸಾಲುಮರದ ತಿಮ್ಮಕ್ಕ, ತುಳಸಿಗೌಡರಿಂದ ಸ್ಪೂರ್ತಿ ಪಡೆದಿದ್ದೇನೆ- ನಟಿ ಆಶಾ ಭಟ್

ಹಿರಿಯ ಪರಿಸರವಾದಿಗಳು ಪದ್ಮಶ್ರೀ ಪುರಸ್ಕೃತರಾದ ಸಾಲುಮರದ ತಿಮ್ಮಕ್ಕ ಹಾಗೂ ತುಳಸಿಗೌಡ ಅವರನ್ನು ಇಂದು ಭೇಟಿಯಾಗಿ ಸ್ಪೂರ್ತಿ ಪಡೆದಿದ್ದೇನೆ ಎಂದು ಖ್ಯಾತ ನಟಿ ಆಶಾ ಭಟ್ ಹೇಳಿದ್ದಾರೆ.

ನಟಿ ಆಶಾ ಭಟ್ ಅವರು ಹಿರಿಯ ಪರಿಸರವಾದಿಗಳಾದ ಸಾಲುಮರದ ತಿಮ್ಮಕ್ಕ ಹಾಗೂ ತುಳಸಿಗೌಡ ಅವರನ್ನು ಭೇಟಿಯಾಗಿದ್ದಾರೆ. ಈ ಬಗ್ಗೆ ತಮ್ಮ ಇನ್​​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಅವರು, ನಾನು ಇಂದು ಹಿರಿಯ ಪರಿಸರವಾದಿಗಳನ್ನು ಭೇಟಿಯಾಗಿ ಅವರಿಂದ ಆಶೀರ್ವಾದ ಪಡೆದೆ. ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಹಾಗೂ ಪದ್ಮಶ್ರೀ ತುಳಸಿಗೌಡ ಅವರನ್ನು ಭೇಟಿಯಾಗಿದ್ದು ರೋಮಾಂಚಕ ಕ್ಷಣವಾಗಿತ್ತು.

ತಿಮ್ಮಕ್ಕ , ಮರಗಳ ತಾಯಿ , ಹಸಿರು ಪ್ರಪಂಚದಲ್ಲಿ ಬದುಕಿದ ಮತ್ತು ಜೀವಂತ ಹಸಿರು ಕ್ರಾಂತಿಯ ಸೂಪರ್ ಹೀರೋ . ತುಳಸಿ ಗೌಡ, ಯಾವುದೇ ಜಾತಿಯ ತಾಯಿ ಮರವನ್ನು ಗುರುತಿಸುವ ಸಾಮರ್ಥ್ಯಕ್ಕಾಗಿ “ಎನ್‌ಸೈಕ್ಲೋಪೀಡಿಯಾ ಆಫ್ ಫಾರೆಸ್ಟ್” ಎಂದೂ ಪ್ರಸಿದ್ದಿಯಾದವರು. ಇವರ ಜ್ಞಾನದ ಬೆಳಕಿನಲ್ಲಿ ಇರುವುದು ಸ್ವತಃ ನನಗೆ ಒಂದು ಆಶೀರ್ವಾದವಾಗಿತ್ತು. ಮಹಿಳೆಯಾಗಿ ನಾನು ಅವರಿಂದ ಸ್ಫೂರ್ತಿ ಪಡೆದಿದ್ದೇನೆ ಎಂದು ನಟಿ ಆಶಾ ಭಟ್ ಬರೆದುಕೊಂಡಿದ್ದಾರೆ.

ಶಿವಮೊಗ್ಗದ ಮೂಲದವರಾದ ಮೂಲದವರಾದ ನಟಿ ಆಶಾ ಭಟ್ ಅವರು ಮಾಡೆಲ್, ಇಂಜೀನಿಯರ್ ಹಾಗೂ ನಟಿಯಾಗಿ ಗುರುತಿಸಿಕೊಂಡಿದ್ದಾರೆ. 2019 ರಲ್ಲಿ ಬಾಲಿವುಡ್​ನ ಜಂಗ್ಲೀ ಚಿತ್ರದ ಮೂಲಕ ನಟನೆಗೆ ಎಂಟ್ರಿ ಪಡೆದ ಇವರು, ಸ್ಯಾಂಡಲ್​ವುಡ್​ನಲ್ಲಿ ನಟ ದರ್ಶನ್​ ಜೊತೆ ರಾಬರ್ಟ್​​ ಚಿತ್ರದಲ್ಲಿ ಬಣ್ಣ ಹಚ್ಚುವ ಮೂಲಕ ಕನ್ನಡಿಗರಿಗೆ ಚಿರಪರಿಚಿತರಾಗಿದ್ದಾರೆ.

LEAVE A REPLY

Please enter your comment!
Please enter your name here