ಪಂಪ್ ವೆಲ್ ಫ್ಲೈ ಓವರ್‌ ಉದ್ಘಾಟನೆಯಾಗಿ ಒಂದು ವರ್ಷ…!

ಹೊಸ ವರ್ಷಕ್ಕೆ ಬಾಕಿಯುಳಿದಿರುವುದು ಇನ್ನು ಒಂದು ದಿನವ಼ಷ್ಟೇ, ಜನವರಿ 1 ರಂದು ಹೊಸ ವರ್ಷದ ದಿನದಂದು ಮಂಗಳೂರಿನ ಪಂಪ್ ವೆಲ್‌ ಫ್ಲೈ ಓವರ್‌ ಉದ್ಘಾಟಿಸುವುದಾಗಿ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿರುವ ನಳಿನ್‌ ಕುಮಾರ್ ಕಟೀಲ್‌ ಇತ್ತೀಚೆಗಷ್ಟೇ ಘೋಷಿಸಿದ್ದರು.

ಆದರೆ ವರ್ಷದ ಹಿಂದೆಯೇ ಪಂಪ್ ವೆಲ್‌ ಫ್ಲೈ ಓವರ್‌ ಉದ್ಘಾಟನೆಯಾಗಿದೆ. ಈ ಉದ್ಘಾಟನಾ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ,ನಳಿನ್‌ ಕುಮಾರ್ ಕಟೀಲ್‌ ಕೂಡ ಜೊತೆಗೆ ಬಂದಿದ್ದರು.

ಆದರೆ ಇದು ಅಸಲಿ ಉದ್ಘಾಟನೆಯಲ್ಲ, ತೊಕ್ಕೊಟ್ಟು ಬಳಿಯಿರುವ ದಶಮಾನಗಳ ವಿಳಂಬದ ಫ್ಲೈ ಓವರ್‌ ನ ಉದ್ಘಾಟನೆಯ ಅಣಕು ಕಾರ್ಯಕ್ರಮವಾಗಿತ್ತು.

ಮೇಲ್ಸೇತುವೆ ಕಾಮಗಾರಿ ವಿಳಂಬ ಖಂಡಿಸಿ ಡಿವೈಎಫ್‌ಐ ಸಂಘಟನೆ ಅಣಕು ಉದ್ಘಾಟನಾ ಕಾರ್ಯಕ್ರಮ ಮಾಡಿ ವಿಳಂಬ ಕಾಮಗಾರಿಯ ವಿರುದ್ಧ ಪ್ರತಿಭಟಿಸಿದರು. ಕಳೆದ ವರ್ಷ ಡಿಸೆಂಬರ್‌ 30 ರಂದು ನಡೆಸಿದ್ದ ಅಣಕು ಪ್ರದರ್ಶನದ ಫೋಟೋಗಳು ಮತ್ತೆ ವೈರಲ್‌ ಆಗಿದೆ.

ಕಳೆದ ವರ್ಷ ಅಣಕು ಪ್ರದರ್ಶನ ನಡೆಸಿ ಇಂದಿಗೆ 1 ವರ್ಷವಾದರೂ ಫ್ಲೈ ಓವರ್‌ ಗೆ ಅಸಲಿ ಉದ್ಘಾಟನೆಯ ಭಾಗ್ಯ ಸಿಕ್ಕಿಲ್ಲ. ಸಂಸದ ಕಟೀಲ್‌ ಕೊಟ್ಟ ಮಾತಿನಂತೆ ಜನವರಿ 1 ರಂದು ಉದ್ಘಾಟನೆಯಾಗುವುದು ಅನುಮಾನ.

LEAVE A REPLY

Please enter your comment!
Please enter your name here