ಪಂಕ್ಚರ್‌ ತೇಜಸ್ವಿ ಸೂರ್ಯಗೆ ಬಂಡೆ ಡಿಕೆಶಿ ಪಂಚ್‌..!

ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ ಮಾಡುವವರು ಪಂಕ್ಚರ್‌ ಹಾಕುವವರು ಮತ್ತು ಎದೆ ಸೀಳಿದರೆ ಎರಡಕ್ಷರ ಇಲ್ಲದವರು ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ನೀಡಿರುವ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಕನಕಪುರದಲ್ಲಿ ಪೌರತ್ವ ಕಾಯ್ದೆ ವಿರುದ್ಧದ ಪ್ರತಿಭಟನೆ ವೇಳೆ ಮಾತಾಡಿದ ಡಿಕೆ ಶಿವಕುಮಾರ್‌, ದೇಶದಲ್ಲಿ ಕಸ ಗುಡಿಸುವವರು ಇಲ್ಲ ಎಂದರೆ, ಬಟ್ಟೆ ಹೊಗೆಯುವವರು ಇಲ್ಲ ಎಂದರೆ, ಪಂಕ್ಚರ್‌ ಹಾಕುವವರು ಇಲ್ಲ ಎಂದರೆ ಪ್ರತಿಯೊಬ್ಬರು ಕೆಲಸ ಮಾಡದೇ ಇದ್ದರೆ ಬದುಕಲು ಸಾಧ್ಯನಾ..? ಎಂದು ಪ್ರಶ್ನಿಸಿದ್ದಾರೆ.

ಯಾರೋ ಭಾಷಣ ಮಾಡಿ ಹೋಗ್ತಾರೆ, ವಾರು ಕಸ ಗುಡಿಸಲಿಕ್ಕೆ ಸಾಧ್ಯನಾ..? ಬಡವರಿಗೆ ನೀನು ವಿದ್ಯೆ ಕಲಿಸಲಿಲ್ಲ. ಅದಕೋಸ್ಕರ ಬಡವ ಪಂಕ್ಚರ್‌ ಹಾಕುತ್ತಿದ್ದಾನೆ, ಕಸ ಗುಡಿಸ್ತಿದ್ದಾನೆ, ಕ್ಲೀನಿಂಗ್‌ ಮಾಡುತ್ತಿದ್ದಾನೆ. ಸ್ವಾಭಿಮಾನದಿಂದ ಬದುಕುತ್ತಿದ್ದಾನೆ. ಕಳ್ಳತನ ಮಾಡಿಲ್ಲ, ದೇಶದ್ರೋಹ ಮಾಡಿಲ್ಲ. ದೇಶದಲ್ಲಿ ಸ್ವಚ್ಛಭಾರತ ಎಂದು ಹೇಳ್ತಿದ್ಯಲ್ಲ, ನಿನ್ನ ಕೈಯಲ್ಲಿ ಮಾಡುವುದಕ್ಕೆ ಆಗಲಿಲ್ಲ, ಆದರೆ ಬಡವ ಮಾಡಿ ತೋರಿಸಿದ್ದಾನೆ ಎಂದು ಡಿಕೆಶಿ ಗುಡುಗಿದ್ದಾರೆ.

ಮೋದಿ ಸಾಹೇಬರೇ ನಿಮ್ಮ ಸ್ಥಾನದ ಬಗ್ಗೆ ಗೌರವಿದೆ, ಪ್ರಧಾನಿಗಳಾಗಿದ್ದೀರಿ. ಆದರೆ ಜನರ ಸ್ವಾಭಿಮಾನವನ್ನು ಕೆಣಕಲು ಹೋಗಬೇಡಿ ಎಂದು ಡಿಕೆಶಿ ಎಚ್ಚರಿಸಿದ್ದಾರೆ.

LEAVE A REPLY

Please enter your comment!
Please enter your name here