ನ್ಯೂ ಇಯರ್‌ ಪಾರ್ಟಿ ಮೂಡ್ ನಲ್ಲಿರುವವರಿಗೆ ಕಿವಿಮಾತು…

2019 ಮುಗಿಯಲು ಇನ್ನೇನು ಕೆಲವೇ ದಿನಗಳು ಉಳಿದಿವೆ. ಎಲ್ಲರೂ ಹೊಸ ವರ್ಷದ ಬರುವಿಕೆಯ ಕಾತುರದಲ್ಲಿದ್ದಾರೆ. ಎಲ್ಲಾ ಕಡೆ ಸಂಭ್ರಮ, ಸಂತೋಷ, ಮನೋರಂಜನೆ…

ಯುವಕ ಯುವತಿಯರು ವರ್ಷಾಂತ್ಯ ಬಂತೆಂದರೆ ಸಾಕು ನ್ಯೂ ಇಯರ್‌ ವೆಲ್‌ ಕಮ್‌ ಪಾರ್ಟಿ ಗೆ ರೆಡಿಯಾಗ್ತಾರೆ. ಅದರಲ್ಲೇನು ವಿಶೇಷ ಅಂತೀರಾ?

ಈ ಪಾರ್ಟಿಗಳಲ್ಲಿ ಸುಲಿಗೆ ಮಾಡುವ, ದರೋಡೆ ಮಾಡುವ, ದೌರ್ಜನ್ಯ ಎಸಗಲೆಂದೇ ಕಾಯುತ್ತಿರುವ ಗ್ಯಾಂಗ್‌ಗಳೇ ಇದ್ದಾವೆ! ಹೌದು ಈ ರೀತಿಯ ಪಾರ್ಟಿಗಳೇ ಇವರ ಟಾರ್ಗೆಟ್‌ ಆಗಿರುತ್ತದೆ.

ಈ ರೀತಿಯ ವರ್ಷಾಂತ್ಯದ ಪಾರ್ಟಿಗಳಲ್ಲಿ ಭಾಗವಹಿಸುವ ಯುವಕ-ಯುವತಿಯರೇ ಇವರ ಟಾರ್ಗೆಟ್!‌  ಒಂಟಿಯಾಗಿ ಸಿಗುವ ಯುವಕರು, ಯುವತಿಯರನ್ನು ದೋಚುವುದು, ಲೈಂಗಿಕ ದೌರ್ಜನ್ಯವೆಸಗುವುದು ಇವರ ಮುಖ್ಯ ಉದ್ದೇಶ.

ಈ ರೀತಿಯ ಪ್ರಕರಣಗಳು ಪ್ರತೀ ವರ್ಷವೂ ವರದಿಯಾಗುತ್ತಲೇ ಇದೆ. ಹಾಗಾಗಿ ಈ ಅಂಶಗಳನ್ನು ಮರೆಯಬೇಡಿ..!

1. ನೀವು ನಂಬುವ, ಆತ್ಮೀಯರ ಜೊತೆಗೆ ಮಾತ್ರ ಪಾರ್ಟಿಗೆ ಹೋಗಿ

2. ಪ್ರಯಾಣದ ವೇಳೆ ಒಂಟಿಯಾಗಿದ್ದರೆ ಸುರಕ್ಷತೆ ವಹಿಸಿ

3. ಇತರರು ನೀಡುವ ಪಾನೀಯ ಕುಡಿಯುವಾಗ ಎಚ್ಚರವಿರಲಿ

4. ಪಾನೀಯವನ್ನು ಅರ್ಧ ಸೇವಿಸಿ ಎಲ್ಲಿಗೋ ಹೋಗಿ ಪುನಃ ಬಂದು ಅದೇ ಪಾನೀಯ ಸೇವಿಸಬೇಡಿ

5. ಆಲ್ಕೋಹಾಲ್ ಸೇವಿಸುವ ಅಭ್ಯಾಸವಿದ್ದರೆ ನಿಮ್ಮ ಜೊತೆಗೆ ಮದ್ಯ ಸೇವಿಸದೇ ಇರುವ ಗೆಳೆಯರು ಇರಲಿ

6. ಯುವತಿಯರು ತಮ್ಮ ಬ್ಯಾಗ್‌ ಅಥವಾ ಪರ್ಸ್ನಲ್ಲಿ ಪೆಪ್ಪರ್‌ ಸ್ಪ್ರೇ ಅಥವಾ ಇತರ ಯಾವುದೇ ಆತ್ಮರಕ್ಷಣೆಗೆ ಬೇಕಾದ ವಸ್ತುಗಳನ್ನು ಒಯ್ಯಲು ಮರೆಯದಿರಿ

7. ಅಗತ್ಯವಿದ್ದಾಗ ಮಹಿಳೆಯರ ಸುರಕ್ಷತೆಗಾಗಿ ಇರುವ ಆಪ್‌ ಹಾಗೂ ತಂತ್ರಜ್ಞಾನವನ್ನು ಬಳಸಿಕೊಳ್ಳೋದು ಮರೆಯಬೇಡಿ

LEAVE A REPLY

Please enter your comment!
Please enter your name here