ನೋಟು ಪತ್ತೆ ಹಚ್ಚಲು ಹೊಸ ಆಪ್‌ ಬಿಟ್ಟ ಆರ್‌ಬಿಐ..!

ನೋಟು ಪತ್ತೆ ಹಚ್ಚಲು ಅಂಧರಿಗೆ ನೆರವಾಗುವ ಹೊಸ ಆಪ್‌ವೊಂದನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಬಿಡುಗಡೆಗೊಳಿಸಿದ್ದು, ಆಪ್‌ಗೆ ಮನಿ ಎಂದು ಹೆಸರಿಟ್ಟಿದೆ.

ಅಂಧರು ತಮ್ಮ ಮೊಬೈಲ್‌ಗಳಲ್ಲಿ ಮನಿ ಆಪ್‌ನ್ನು ಇನ್ಸ್ಟಾಲ್‌ ಮಾಡಿಕೊಂಡರೆ ಕರೆನ್ಸಿಯ ಮುಖಬೆಲೆ ಏನು ( ನೂರು, ಐನೂರು, ಎರಡು ಸಾವಿರ ರೂ. ಇತ್ಯಾದಿ) ಎಂಬುದನ್ನು ಸುಲಭದಲ್ಲಿ ತಿಳಿದುಕೊಳ್ಳಬಹುದಾಗಿದೆ. ಮೊಬೈಲ್‌ ನೆಟ್‌ವರ್ಕ್‌ ಇಲ್ಲದೆಯೂ ಈ ಆಪ್‌ ಕೆಲ್ಸ ಮಾಡುತ್ತೆ ಎನ್ನುವುದು ವಿಶೇಷ.

MANI (ಎಂಎಎನ್‌ಐ) ಇದರ ವಿಸ್ಕೃತ ರೂಪ – ಮೊಬೈಲ್‌ ಏಡೆಡ್‌ ನೋಟು ಐಡೆಂಟಿಫೈಯರ್‌) ಅಂದರೆ ಮೊಬೈಲ್‌ ನೆರವಿನಿಂದ ನೋಟು ಪತ್ತೆಹಚ್ಚುವ ಸಾಧನ.

ಆದರೆ ನೋಟು ನಕಲಿಯೋ ಅಥವಾ ಅಸಲಿ ಎನ್ನುವುದು ಮಾತ್ರ ಈ ಆಪ್‌ನಿಂದ ಗೊತ್ತಾಗಲ್ಲ ಎಂದು ಆರ್‌ಬಿಐ ಹೇಳಿದೆ.

LEAVE A REPLY

Please enter your comment!
Please enter your name here