ನೋಟುಗಳನ್ನು ತೊಳೆದು ಇಸ್ತ್ರಿ ಮಾಡಿದ್ರು..!

ತೆಲಂಗಾಣದ ಪ್ರಸಿದ್ಧ ಮೆಡಾರಂ ಜಾತ್ರೆಯಲ್ಲಿ ಹುಂಡಿಗೆ ಕಾಣಿಕೆಯ ಮಳೆ ಸುರಿದಿತ್ತು. ಇದರ ಜೊತೆ ಜೊತೆಗೆ ಆಕಾಲಿಕ ಮಳೆ ಭರ್ಜರಿಯಾಗಿ ಆಗಿತ್ತು. ಪರಿಣಾಮ ಹುಂಡಿಗಳಿಗೂ ನೀರು ನುಗ್ಗಿತ್ತು. ಅಕ್ಕಿ ಬೇಳೆ ಇತರೆ ಕಾಣಿಕೆಗಳ ಜೊತೆ ನೋಟುಗಳು ಬೂಜು ಹಿಡಿದಿದ್ದವು.

ಕಳೆದ ಒಂದು ವಾರದಿಂದ ಹುಂಡಿ ಲೆಕ್ಕ ಹಾಕುತ್ತಿರುವ ದೇಗುಲದ ಸಿಬ್ಬಂದಿ ಲಕ್ಷಾಂತರ ಮೌಲ್ಯ ನೋಟುಗಳನ್ನು ಮೊದಲು ಸರ್ಫ್‍ನಲ್ಲಿ ತೊಳೆದು, ಸ್ವಲ್ಪಹೊತ್ತು ಒಣಗಿಸಿಟ್ಟು ನಂತರ ನೋಟಗಳನ್ನು ಇಸ್ತ್ರಿ ಮಾಡುತ್ತಿದ್ದಾರೆ.

ಇದುವರೆಗೂ 436 ಹುಂಡಿಗಳ ಎಣಿಕೆ ಕಾರ್ಯ ನಡೆದಿದ್ದು, 10.29 ಕೋಟಿ ಹಣ ಸಂಗ್ರಹವಾಗಿದೆ.

LEAVE A REPLY

Please enter your comment!
Please enter your name here