ನೋಟಿನ ಮೇಲೆ ಲಕ್ಷ್ಮಿ ದೇವತೆ ಚಿತ್ರ ಮುದ್ರಿಸಲಾಗುತ್ತಾ..?

ಭಾರತೀಯ ಕರೆನ್ಸಿ ನೋಟುಗಳ ಮೇಲೆ ಲಕ್ಷ್ಮಿ ದೇವತೆಯ ಚಿತ್ರ ಮುದ್ರಿಸಿದರೆ ಒಳ್ಳೆಯದಾಗುತ್ತದೆ ಎಂದು ಬಿಜೆಪಿಯ ಹಿರಿಯ ಮುಖಂಡ, ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯನ್ ಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ಇಂಡೋನೇಷ್ಯಾದ ಕರೆನ್ಸಿ ಮೇಲೆ ಗಣೇಶನ ಚಿತ್ರವನ್ನು ಮುದ್ರಿಸಿರುವ ವಿಷಯ ಪ್ರಸ್ತಾಪಿಸಿದ ಸುಬ್ರಹ್ಮಣ್ಯನ್ ಸ್ವಾಮಿ, ನಮ್ಮ ದೇಶದ ನೋಟುಗಳ ಮೇಲೆ ಲಕ್ಷ್ಮೀದೇವಿ ಚಿತ್ರ ಮುದ್ರಿಸಿದರೆ ಚೆನ್ನಾಗಿರುತ್ತದೆ ಎಂದು ತಿಳಿಸಿದ್ದಾರೆ.

ನೋಟುಗಳ ಮೇಲೆ ಲಕ್ಷ್ಮಿ ಚಿತ್ರ ಮುದ್ರಣ ಮಾಡೋದಕ್ಕೆ ತಮ್ಮ ಬೆಂಬಲ ಇದೆ. ಈ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಗಮನಹರಿಸಬೇಕು. ಗಣೇಶ ವಿಘ್ನಗಳನ್ನು ನಿವಾರಿಸುತ್ತಾನೆ. ಅದೇ ರೀತಿ ಭಾರತೀಯ ಕರೆನ್ಸಿ ನೋಟುಗಳ ಮೇಲೆ ಲಕ್ಷ್ಮಿ ಚಿತ್ರ ಮುದ್ರಿಸಿದರೇ ನಮ್ಮ ದೇಶದ ಆರ್ಥಿಕ ಸ್ಥಿತಿ ಸುಧಾರಿಸಬಹುದು ಎಂದು ಸುಬ್ರಹ್ಮಣ್ಯನ್ ಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ಇದನ್ನು ಬೇರೊಂದು ರೀತಿ ಅರ್ಥೈಸಿಕೊಳ್ಳಬಾರದು ಎಂದು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here