ನೆಹರು ಪ್ರಧಾನಿ ಆಗುವ ಆಸೆಗೆ ದೇಶ ವಿಭಜನೆ – ಪ್ರಧಾನಿ ಮೋದಿ ವಾಗ್ದಾಳಿ

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಹೋರಾಟ ನಡೆಸ್ತಿರುವ ಕಾಂಗ್ರೆಸ್‌ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಭಾರತದ ಪ್ರಧಾನಮಂತ್ರಿ ಆಗ್ಬೇಕೆಂಬ ಯಾರದ್ದೋ ಆಸೆಗೆ ಭೂಪಟದಲ್ಲಿ ಗೆರೆಯೊಂದನ್ನು ಎಳೆದು ಭಾರತವನ್ನು ಎರಡು ಭಾಗಗಳಾಗಿ ವಿಭಜಿಸಲಾಯಿತು. ವಿಭಜನೆಯ ಬಳಿಕ ಹಿಂದೂಗಳು, ಸಿಖ್ಖರು ಮಗತ್ತು ಇತರೆ ಅಲ್ಪಸಂಖ್ಯಾತರಿಗೆ ದೌರ್ಜನ್ಯಕೊಟ್ಟ ರೀತಿ ಊಹಿಸಲೂ ಅಸಾಧ್ಯ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.

ನೆಹರು ಅಂತ ದೊಡ್ಡ ಜಾತ್ಯಾತೀತವಾದಿ, ಮಹಾನ್‌ ದೂರದರ್ಶಿ ಆಗಿರುವ ಮತ್ತು ನಿಮಗೆ ಎಲ್ಲವೂ ಆಗಿರುವ ನೆಹರು, ಎಲ್ಲ ನಾಗರಿಕರು ಎಂದು ಯಾಕೆ ಬಳಸಲಿಲ್ಲ..? ಇದಕ್ಕೆ ಏನಾದರೂ ಕಾರಣ ಇರಬಹುದು.

ಅಲ್ಪಸಂಖ್ಯಾತರು ಎಂದು ನೆಹರು ಯಾಕೆ ಬಳಸಿದರು. ಅದಕ್ಕೂ ಅವರು ಉತ್ತರ ಕೊಟ್ಟಿದ್ದಾರೆ. ಅವಶ್ಯಕತೆ ಬಿದ್ದಾಗ ನೀವು ಅವರನ್ನೂ ಬಿಟ್ಟು ಬಿಡುತ್ತೀರಿ ಎಂದು ನನಗೆ ಗೊತ್ತಿದೆ. ನೆಹರು ಅಂದಿನ ಅಸ್ಸಾಂ ಮುಖ್ಯಮಂತ್ರಿಗೆ ಪತ್ರವನ್ನು ಬರೆದಿದ್ದರು. ನೀವು ಸಂತ್ರಸ್ತರು ಮತ್ತು ಮುಸ್ಲಿಂ ವಲಸಿಗರ ನಡುವೆ ಭಿನ್ನೀಕರಿಸಬೇಕು ಎಂದು ಅಸ್ಸಾಂ ಸಿಎಂಗೆ ಬರೆದಿದ್ದರು. ೧೯೫೦ರಲ್ಲಿ ಸಂಸತ್ತಿನಲ್ಲಿ ಭಾಷಣ ಮಾಡಿದ್ದ ನೆಹರು ʻಒಂದು ವೇಳೆ ಭಾರತಕ್ಕೆ ಬಂದು ನೆಲೆಸಿರುವ ಜನರಿಗೆ ನಾಗರಿಕತ್ವ ಬೇಕು ಎಂದಾದಲ್ಲಿ, ಒಂದು ವೇಳೆ ಅದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲದೇ ಹೋದಲ್ಲಿ ಆ ಕಾನೂನುನ್ನು ಬದಲಾಯಿಸಬೇಕುʼ ಎಂದಿದ್ದರು.  ೧೯೫೩ರಲ್ಲಿ ಲೋಕಸಭೆಯಲ್ಲಿ ಭಾಷಣ ಮಾಡಿದ್ದ ನೆಹರು, ಪೂರ್ವ ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ಪಾಕಿಸ್ತಾನ ಒತ್ತಡ ಹಾಕುತ್ತಿದೆ. ಈ ಬಗ್ಗೆ ದಾಖಲೆಗಳಿವೆʼ ಎಂದಿದ್ದರು. ಹಾಗಾದ್ರೆ ನೆಹರು ಕೋಮುವಾದಿನಾ..? ಅವರು ಹಿಂದೂ ಮುಸ್ಲಿಮರ ನಡುವೆ ಬೇಧಭಾವ ಮಾಡಿದ್ರಾ..? ನೆಹರೂ ಹಿಂದೂ ರಾಷ್ಟ್ರ ಬಯಸಿದ್ರಾ..? ಎಂದು ಪ್ರಧಾನಿ ಮೋದಿ ಕಾಂಗ್ರೆಸ್‌ಗೆ ಪ್ರಶ್ನೆ ಕೇಳಿದ್ದಾರೆ.

LEAVE A REPLY

Please enter your comment!
Please enter your name here