ನೃತ್ಯೋಮ ಅಕಾಡೆಮಿಯ ವಾರ್ಷಿಕ ಸಂಭ್ರಮದಲ್ಲಿ ನೀವೂ ಪಾಲ್ಗೊಳ್ಳಿ…..

ಬೆಂಗಳೂರು : ಸಹಕಾರ ನಗರದಲ್ಲಿರುವ ನೃತ್ಯೋಮ ಅಕಾಡೆಮಿ ಆಫ್‌ ಪರ್ ಫಾಮಿಂಗ್‌ ಆರ್ಟ್ಸ್‌ ನಾಟ್ಯಸಂಸ್ಥೆ ಇದೇ ಡಿಸೆಂಬರ್‌ ೨೨ನೇ ಭಾನುವಾರ ಸಂಜೆ ಯಲಹಂಕದ ಶೇಶಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾರ್ಷಿಕೋತ್ಸವ ಸಂಭ್ರಮ ಹಮ್ಮಿಕೊಂಡಿದೆ.

 ಸಂಸ್ಥೆಯ ನಿರ್ದೇಶಕಿ ಎಂ.ಕೆ ರಾಧಿಕಾ ಸ್ವಾಮಿ ಅವರ ನೇತೃತ್ವದಲ್ಲಿ ಕಳೆದ ೧೧ ವರ್ಷಗಳಿಂದ ಯಶಸ್ವಿಯಾಗಿ ನೃತ್ಯ ಶಿಕ್ಷಣ ನೀಡುತ್ತಿರುವ ವಿದುಷಿ, ನಾಟ್ಯ ಮಯೂರಿ, ಆರ್ಯಭಟ ಪ್ರಶಸ್ತಿ ವಿಜೇತೆ ಎಂ.ಕೆ ರಾಧಿಕಾ ಸ್ವಾಮಿ ದೇಶಾದ್ಯಂತ ಸಾವಿರಾರು ಪ್ರದರ್ಶನಗಳನ್ನು ನೀಡಿ ಹೆಸರುಗಳಿಸಿದ್ದಾರೆ. 

ನೃತ್ಯೋಮ ಅಕಾಡೆಮಿ ವಾರ್ಷಿಕ ಮಹೋತ್ಸವದ ಸಂಧರ್ಭದಲ್ಲಿ ವೈವಿಧ್ಯಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಮುಖ್ಯ ಅತಿಥಿಯಾಗಿ ಖ್ಯಾತ ಚಲನಚಿತ್ರ ನಿರ್ದೇಶಕ ಓಂ ಸಾಯಿ ಪ್ರಕಾಶ್‌ ಭಾಗವಹಿಸಲಿದ್ದಾರೆ. ಸರ್ವರಿಗೂ ಮುಕ್ತ ಸ್ವಾಗತ. 

LEAVE A REPLY

Please enter your comment!
Please enter your name here