ನೀನ್ಯಾವನೋ ಕೇಳೋಕೆ..! – ಮಂಡ್ಯ ಉಸ್ತುವಾರಿ ಸಚಿವ-ಜೆಡಿಎಸ್‌ ಶಾಸಕರ ಜಟಾಪಟಿ..! ಈ ಹಣೆಬರಹಕ್ಕೆ ಸಭೆ ಬೇರೆ ಮಾಡ್ಬೇಕಾ..?

ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಮತ್ತು ಜೆಡಿಎಸ್‌ ಶಾಸಕ ನಡುವಿನ ಕಚ್ಚಾಟ ತೀವ್ರಗೊಂಡಿದ್ದು, ಇವತ್ತು ಮಂಡ್ಯದಲ್ಲಿ ನಡೆದ ಕೊರೋನಾ ನಿಯಂತ್ರಣ ಕುರಿತ ಸಭೆಯಲ್ಲಿ ಏಕವಚನದಲ್ಲೇ ಬೈಯ್ದಾಡಿಕೊಂಡಿದ್ದಾರೆ.

ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಬಂಧ ಸರಿಯಾದ ಮಾಹಿತಿ ನೀಡದ ಅಧಿಕಾರಿಗಳನ್ನು ಜೆಡಿಎಸ್‌ ಶಾಸಕರು ತೀವ್ರ ತರಾಟೆಗೆ ತೆಗೆದುಕೊಂಡರು.

ಈ ವೇಳೆ ಅಧಿಕಾರಿಗಳನ್ನು ಸಮರ್ಥಿಸಿಕೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಮುಂದಾದರು. ಆಗ ಸಚಿವರು ಮತ್ತು ಜೆಡಿಎಸ್‌ ಶಾಸಕರ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿತು.

ಈ ಬೈಗುಳದ ಪರಿ ಎಷ್ಟಿತ್ತೆಂದರೆ ‘ನೀನ್ಯಾವನು ಕೇಳೋಕೆ ಹೋಗಲೇ…ʼ ಎಂಬೆಲ್ಲ ಮಾತುಗಳನ್ನ ಆಡಿದ್ರು. ಮುಚ್ಕೊಂಡು ಹೋಗಲೇ.. ನೀನ್ಯಾವನು ನನ್ನ ಕೇಳೋಕೆ…? ನೀವು ಹೇಳಿದ್ನೆಲ್ಲ ಕೇಳ್ಕೊಂಡ್ ಹೋಗೋಕೆ ನಾವು ಬಂದಿಲ್ಲ ಎಂದು ಸಚಿವರು ಮತ್ತು ಶಾಸಕರು ಬಡಿದಾಡಿಕೊಂಡಿದ್ದು ಸಭೆಯ ಬಹುದೊಡ್ಡ ಸಾಧನೆ ಆಗಿತ್ತು.

ಇನ್ನು ಸಚಿವ ನಾರಾಯಣಗೌಡ ಮತ್ತು ಜೆಡಿಎಸ್‌ ಶಾಸಕ ಸುರೇಶ್‌ ಗೌಡ ಜಟಾಪಟಿಯ ವೀಡಿಯೋ ಚಿತ್ರೀಕರಣದ ಮಾಡುತ್ತಿದ್ದ ಮಾಧ್ಯಮದವರಿಗೆ ಅಡ್ಡಿಪಡಿಸಲಾಯಿತು.

LEAVE A REPLY

Please enter your comment!
Please enter your name here