ನಿರ್ಭಯ ಪ್ರಕರಣ.. ದೋಷಿ ಪವನ್ ಕ್ಯೂರೇಟೀವ್ ಪಿಟೀಷನ್ ವಜಾ

ನಿರ್ಭಯ ಹತ್ಯಾಚಾರ ಪ್ರಕರಣದಲ್ಲಿ ಗಲ್ಲು ವಿಳಂಬ ಮಾಡಲು ಪ್ರಯತ್ನಿಸುತ್ತಿರುವ ದೋಷಿ ಪವನ್ ಗುಪ್ತಾ ಸಲ್ಲಿಸಿದ್ದ ಕ್ಯೂರೇಟೀವ್ ಪಿಟೀಷನ್ ಅನ್ನು ಸುಪ್ರೀಕೋರ್ಟ್ ವಜಾ ಮಾಡಿದೆ.

ಅಪರಾಧಿ ಪವನ್ ಗುಪ್ತಾ ಅರ್ಜಿಯನ್ನು ಚೇಂಬರ್‍ನಲ್ಲೇ ಕೈಗೆತ್ತಿಕೊಂಡ ನ್ಯಾ.ಎನ್ ವಿ ರಮಣ ನೇತೃತ್ವದ ಪಂಚಸದಸ್ಯ ಪೀಠ, ವಜಾ ಮಾಡಿ ಆದೇಶ ನೀಡಿತು.

ಕ್ಯೂರೇಟೀವ್ ಪಿಟೀಷನ್ ವಜಾ ಹಿನ್ನೆಲೆಯಲ್ಲಿ ಅಪರಾಧಿ ಪವನ್ ಗುಪ್ತಾಗೆ ಕಾನೂನಾತ್ಮಕವಾಗಿ ಇನ್ನು ಒಂದೇ ಒಂದು ಅವಕಾಶ ಬಾಕಿ ಉಳಿದಿದೆ. ಈಗ ಪವನ್ ಗುಪ್ತಾ ಕ್ಷಮಾದಾನ ಕೋರಿ ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಸಬೇಕಿದೆ.

ಈಗಾಗಲೇ ಮೂವರು ಅಪರಾಧಿಗಳ ಕ್ಷಮಾದಾನ ಅರ್ಜಿ ತಿರಸ್ಕರಿಸಿರುವ ರಾಷ್ಟ್ರಪತಿಗಳು, ಪವನ್ ಗುಪ್ತಾ ಅರ್ಜಿಯನ್ನು ತಿರಸ್ಕರಿಸುವ ಸಾಧ್ಯತೆಗಳು ಅಧಿಕವಾಗಿವೆ.

ಆದರೆ, ಈ ಪ್ರಕ್ರಿಯೆ ಮುಗಿಯಲು ಕನಿಷ್ಠ ಎರಡು ವಾರಗಳಾದರೂ ಬೇಕು. ಹೀಗಾಗಿ ಮಾರ್ಚ್ 3ಕ್ಕೆ ನಿಗದಿಯಾಗಿರುವ ಗಲ್ಲು ಶಿಕ್ಷೆ ಮತ್ತೆ ಮುಂದಕ್ಕೆ ಹೋಗುವ ಸಾಧ್ಯತೆಗಳಿವೆ.

LEAVE A REPLY

Please enter your comment!
Please enter your name here