ನಿರ್ಭಯ ಪಾತಕಿಗಳಿಗೆ ಗಲ್ಲು ಫಿಕ್ಸ್‌ – ಸುಪ್ರೀಂಕೋರ್ಟ್‌ನಲ್ಲಿ ನಡೆದಿದ್ದೇನು..?

ದೇಶವನ್ನೇ ಅಸ್ಮಿಯತೆಗೆ ಆಘಾತ ನೀಡಿದ್ದ ನಿರ್ಭಯ ಅತ್ಯಾಕಾಂಡದ ಪಾತಕಿಗಳಿಗೆ ಗಲ್ಲು ಶಿಕ್ಷೆ ಖಾಯಂ ಆಗಿದ್ದು, ಮರಣದಂಡನೆ ರದ್ದು ಕೋರಿ ಅಪರಾಧಿ ಅಕ್ಷಯ್‌ ಸಿಂಗ್‌ ಠಾಕೂರ್‌ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂಕೋರ್ಟ್‌ನ ತ್ರಿಸದಸ್ಯ ಪೀಠ ವಜಾಗೊಳಿಸಿದೆ.

ಆದರೆ ಕ್ಷಮಾದಾನ ಕೋರಿ ನಿಗದಿತ ಅವಧಿಯೊಳಗೆ ರಾಷ್ಟ್ರಪತಿಗೆ ಮನವಿ ಸಲ್ಲಿಸುವ ಹಕ್ಕು ಅಪರಾಧಿ ಹೊಂದಿದ್ದು ಆ ಸಂಬಂಧ ನಾವೇನೂ ಆದೇಶ ನೀಡಲ್ಲ ಎಂದು ನ್ಯಾಯಮೂರ್ತಿ ಆರ್‌ ಭಾನುಮತಿ ಅಭಿಪ್ರಾಯಪಟ್ಟಿದ್ದಾರೆ. ಕ್ಷಮಾದಾನಕ್ಕೆ ಅರ್ಜಿ ಸಲ್ಲಿಸಲು ಮೂರು ವಾರಗಳ ಅವಕಾಶ ಕೊಡುವಂತೆ ಅಪರಾಧಿ ಪರ ವಕೀಲ ಎ ಪಿ ಸಿಂಗ್‌ ಮನವಿ ಮಾಡಿದರು. ಅದಕ್ಕೆ ದೆಹಲಿ ಪೊಲೀಸರ ವಕೀಲ ಸಾಲಿಸಿಟರ್‌ ಜನರಲ್‌ ಕ್ಷಮಾದಾನಕ್ಕೆ ಕಾನೂನಿನಲ್ಲಿ ಕೇವಲ ೭ ದಿನಗಳಷ್ಟೇ ಅವಕಾಶವಿದೆ ಎಂದು ಆಕ್ಷೇಪಿಸಿದರು.

ಇವತ್ತು ನ್ಯಾಯಮೂರ್ತಿ ಆರ್‌ ಭಾನುಮತಿ, ನ್ಯಾಯಮೂರ್ತಿ ಅಶೋಕ್‌ ಭೂಷಣ್‌ ಮತ್ತು ನ್ಯಾಯಮೂರ್ತಿ ಎ ಎಸ್‌ ಬೋಪಣ್ಣ ಅವರಿದ್ದ ಪೀಠ ಮರಣದಂಡನೆಯನ್ನು ಎತ್ತಿಹಿಡಿಯಿತು.

ಸುಪ್ರೀಂಕೋರ್ಟ್‌ ಹೇಳಿದ್ದೇನು..?

ನಿರ್ಭಯ ಹತ್ಯಾಕಾಂಡದ ತನಿಖೆ ವೇಳೆ ಲೋಪಗಳಾಗಿವೆ ಎನ್ನುವುದನ್ನು ಈ ಹಂತದಲ್ಲಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಕೆಳ ಹಂತದ ನ್ಯಾಯಾಲಯದಲ್ಲೂ ಇದೇ ವಾದ ಮಾಡಲಾಗಿತ್ತು. ದೆಹಲಿ ಹೈಕೋರ್ಟ್‌ನಲ್ಲೂ ಅಪರಾಧಿಗಳಿಗೆ ವಿಧಿಸಲಾಗಿದ್ದ ಮರಣದಂಡನೆ ಖಾಯಂ ಆಗಿದೆ. ಬಳಿಕ ಸುಪ್ರೀಂಕೋರ್ಟ್‌ನಲ್ಲೂ ದೃಢವಾಗಿದೆ. ಹೀಗಾಗಿ ಅಪರಾಧಿ ಅಕ್ಷಯ್‌ ಕುಮಾರ್‌ ಸಿಂಗ್‌ ಗುರುತು ಪತ್ತೆಯಲ್ಲಿ ಲೋಪವಾಗಿದೆ ಎಂಬುದನ್ನು ನಾವು ಒಪ್ಪಿಕೊಳ್ಳುವುದಿಲ್ಲ.

ರಾಮ್‌ ಸಿಂಗ್‌ ಆತ್ಮಹತ್ಯೆಯ ಬಗ್ಗೆ ತಿಹಾರ್‌ ಜೈಲಿನ ನಿವೃತ್ತ ಅಧಿಕಾರಿ ಪುಸ್ತಕದಲ್ಲಿ ಹೇಳಿದ್ದರೆ ಅವರು ಅದನ್ನು ಕೋರ್ಟ್‌ ಮುಂದೆ ಬಂದು ಹೇಳಬೇಕಿತ್ತು. ನಿವೃತ್ತರಾದ ಮೇಲೆ ಎಲ್ಲರೂ ಬರೆಯುತ್ತಾರೆ ಎಂದು ಕೋರ್ಟ್‌ ಪುಸ್ತಕದಲ್ಲಿ ಅಂಶವನ್ನು ಹೊಸ ಸಾಕ್ಷ್ಯವಾಗಿ ಸಲ್ಲಿಸಲು ಮುಂದಾದ ಅಕ್ಷಯ್‌ ಪರ ವಕೀಲರ ಮೇಲೆ ಗರಂ ಆಯಿತು.

ಎಂದು ಪೀಠ ಹೇಳಿತು.

ಅಕ್ಷಯ್‌ ಕುಮಾರ್‌ ಸಿಂಗ್‌ ಪರ ವಾದ ಏನು..?

ನಿರ್ಭಯ ಪ್ರಕರಣದ ತನಿಖೆ ನಡೆದ ರೀತಿಯ ಪ್ರಶ್ನಾರ್ಹ. ನನ್ನ ಬಳಿ ಹೊಸ ದಾಖಲೆಗಳಿವೆ. ಮಾಧ್ಯಮಗಳು ಮತ್ತು ಸಾರ್ವಜನಿಕ ಒತ್ತಡ ಇದೆ. ಇದು ನನ್ನ ಕಕ್ಷಿದಾರರನ್ನು ಸಿಲುಕಿಸುವ ಯತ್ನ. ನಿಜವಾದ ಸಂಚುಕೋರರನ್ನು ಹಿಡಿಯುವಲ್ಲಿ ದೆಹಲಿ ಪೊಲೀಸರು ವಿಫಲರಾಗಿದ್ದಾರೆ. ತನಿಖಾ ತಂಡದ ಅದಕ್ಷತೆ ಮತ್ತು ವೃತಿಪರತೆಯ ಕೊರತೆಯೇ ಇದಕ್ಕೆ ಕಾರಣ. ರಾಯನ್‌ ಇಂಟರ್‌ನ್ಯಾಷನಲ್‌ ಪ್ರಕರಣದಲ್ಲಿ ಸಾರ್ವಜನಿಕರ ಒತ್ತಡಕ್ಕೆ ಸಿಲುಕಿ ಶಾಲಾ ಬಸ್‌ನ ಕಂಡಕ್ಟರ್‌ನ್ನು ತಪ್ಪಾಗಿ ಸಿಲುಕಿಸಲಾಯಿತು. ನಿರ್ಭಯಾಳ ಗೆಳಯನ ವಿರುದ್ಧ ದೆಹಲಿಯ ಪಟಿಯಾಲಾ ಹೌಸ್‌ಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿದೆ. ಆತನ ವಿರುದ್ಧ ಲಂಚ ಪಡೆದ ಪ್ರಕರಣ ದಾಖಲಾಗಿದೆ. ಇದು ಅತ್ಯಂತ ಮಹತ್ವದ ವಿಷಯ. ಇದು ಹೊಸ ಸಾಕ್ಷ್ಯ.

ತಿಹಾರ್‌ ಜೈಲಿನಲ್ಲಿ ರಾಮ್‌ ಸಿಂಗ್‌ ಮಾಡಿಕೊಂಡಿದ್ದ ಆತ್ಮಹತ್ಯೆಯ ಬಗ್ಗೆ ಅನುಮಾನವಿದೆ. ತಿಹಾರ್‌ ಜೈಲಿನ ಅಧಿಕಾರಿಯಾಗಿದ್ದ ಸುನಿಲ್‌ ಗುಪ್ತಾ ಪುಸಕ್ತವೊಂದರಲ್ಲಿ ಹೇಳಿಕೊಂಡಿದ್ದಾರೆ. ದೆಹಲಿ ಸರ್ಕಾರ ಇದೊಂದೇ ಪ್ರಕರಣದಲ್ಲಿ ಗಲ್ಲು ಶಿಕ್ಷೆ ಜಾರಿಗೆ ಯಾಕೆ ಅವಸರ ಮಾಡುತ್ತಿದೆ ಎಂದು ನನಗೆ ಅರ್ಥ ಆಗುತ್ತಿಲ್ಲ. ಇದಕ್ಕಿಂತ ಘನಘೋರ ಕೃತ್ಯವನ್ನು ಮಾಡಿದವರು ಇನ್ನೂ ತಿಹಾರ್‌ ಜೈಲಿನಲ್ಲಿದ್ದಾರೆ. ಇದೊಂದು ರಾಜಕೀಯ ಅಜೆಂಡಾ ಅಷ್ಟೇ.

ಜೀವಿತಾವಧಿಯೇ ಕಡಿಮೆ ಆಗುತ್ತಿದೆ ಎಂದ ಮೇಲೆ ಮರಣದಂಡನೆ ಯಾಕೆ..? ದೆಹಲಿಯ ವಾಯಮಾಲಿನ್ಯ ಮತ್ತು ಜಲಮಾಲಿನ್ಯದಿಂದ ಜೀವಿತಾವಧಿ ಕಡಿಮೆ ಆಗುತ್ತಿದೆ.

ಎರಡೂ ರೀತಿಯ ವಾದವಿದೆ. ಒಂದು ನೈತಿಕ ಮತ್ತೊಂದು ಕಾನೂನಾತ್ಮಕ. ಬಡವರು ಮರಣದಂಡನೆಗೆ ಗುರಿ ಆಗುತ್ತಿದ್ದಾರೆ. ಶ್ರೀಮಂತರಿಗೆ ಮರಣದಂಡನೆ ವಿಧಿಸಲ್ಲ.

ನಿರ್ಭಯ ಮರಣ ಹೇಳಿಕೆಯಲ್ಲೂ ದೋಷವಿದೆ. ವಿಪಿನ್‌ ಹೆಸರು ಹೇಳಿದ ಬಳಿಕ ಆಕೆ ಅಕ್ಷಯ್‌ ಹೆಸರು ಹೇಳಿದ್ದಾಳೆ. ಆದರೆ ವಿಪಿನ್‌ ಮೇಲಿನ ಆರೋಪ ಸಾಬೀತಾಗಿಲ್ಲ.

ದೆಹಲಿ ಪೊಲೀಸರ ವಾದ ಏನು..?

ಈ ಹಂತದಲ್ಲಿ ತನಿಖೆಯ ಕಾನೂನಾತ್ಮಕ ಅಂಶಗಳ ಬಗ್ಗೆ ವಾದ-ಪ್ರತಿವಾದ ಸರಿಯಲ್ಲ. ಈ ಹಿಂದೆಯೂ ಮೇಲ್ಮನವಿ ಅರ್ಜಿ ಸಲ್ಲಿಕೆ ಆಗಿತ್ತು, ಈಗ ಇದೊಂದು ಅಷ್ಟೇ. ಹೊಸದಾಗಿ ಯಾವ ಸಾಕ್ಷ್ಯವೂ ಸಿಕ್ಕಿಲ್ಲ. ಅಕ್ಷಯ್‌ ಮಾಡಿದ್ದ ವಾದವನ್ನೇ ಉಳಿದ ಅಪರಾಧಿಗಳೂ ಮಾಡಿದ್ದರು. ಇದು ಅಪರೂಪದಲ್ಲಿ ಅಪರೂಪದ ಪ್ರಕರಣ ಎಂದು ಕೋರ್ಟೇ ಹೇಳಿದೆ. ಬ್ರಿಟನ್‌ನಲ್ಲಿ ಮರಣ ದಂಡನೆ ಇಲ್ಲ ಎನ್ನುವ ವಾದ ಸರಿಯಲ್ಲ. ನಮ್ಮ ಕಾನೂನಿನ ಭಾಗವಾಗಿದ್ದರೆ ಅದು ಕಾನೂನು ಅಷ್ಟೇ.

ಇಂಥ ಕೃತ್ಯಗಳಿಂದ ಮಾನವಕುಲಕ್ಕೆ ತಲೆನೋವಾಗಿಸುವಂತಾಗಿದೆ. ಈ ಯುವತಿಯನ್ನು ರಕ್ಷಣೆ ಮಾಡಲು ಸಾಧ್ಯವೇ ಇಲ್ಲವೆಂದು ಸ್ವತಃ ದೇವರೇ ಕಣ್ಣೀರಿಡುವಂತಹ ಪ್ರಕರಣಗಳಿವೆ. ಇಂಥ ಕೇಸಲ್ಲಿ ಕರುಣೆ ತೋರಿಸುವ ಅಗತ್ಯವೇ ಇಲ್ಲ

ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ವಾದ ಮಂಡಿಸಿದರು.

LEAVE A REPLY

Please enter your comment!
Please enter your name here