ನಿರ್ಭಯಾ ಪ್ರಕರಣದ ಆರೋಪಿ ಮುಕೇಶ್‌ ಕ್ಷಮಾದಾನ ಅರ್ಜಿ ತಿರಸ್ಕರಿಸಿದ ದೆಹಲಿ ಸರ್ಕಾರ

ದೆಹಲಿಯಲ್ಲಿ ಘಟಿಸಿದ್ದ ನಿರ್ಭಯಾ ಅತ್ಯಾಚಾರ ಮತ್ತು ಕಗ್ಗೊಲೆ ಪ್ರಕರಣದಲ್ಲಿ ಮರಣದಂಡನೆ ಒಳಗಾಗಿರುವ ನಾಲ್ವರು ಅಪರಾಧಿಗಳಲ್ಲಿ  ಒಬ್ಬನಾಗಿರುವ ಮುಕೇಶ್ ಸಲ್ಲಿಸಿರುವ ಕ್ಷಮಾದಾನ ಅರ್ಜಿಯನ್ನು ದೆಹಲಿ ಸರ್ಕಾರ ತಿರಸ್ಕರಿಸಿದೆ.

ತಿರಸ್ಕೃತ ಅರ್ಜಿಯನ್ನು ದೆಹಲಿಯ ಲೆಫ್ಟಿನೆಂಟ್‌ ಗವರ್ನರ್‌ ಕಚೇರಿಗೆ ಸರ್ಕಾರ ಕಳುಹಿಸಿಕೊಟ್ಟಿದೆ. ಅಲ್ಲಿಂದ ಕೇಂದ್ರ ಗೃಹ ಸಚಿವಾಲಯಕ್ಕೆ ರವಾನಿಸಲಾಗಿದೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಅಪರಾಧಿಯೊಬ್ಬ ರಾಷ್ಟ್ರಪತಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿರುವ ಹಿನ್ನಲೆಯಲ್ಲಿ 2012 ರ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕಗ್ಗೊಲೆ ಪ್ರಕರಣದ ಅಪರಾಧಿಗಳಿಗೆ ಈ ಹಿಂದೆ ಘೋಷಿಸಿದ್ದಂತೆ ಜ.22 ರಂದು ಮರಣದಂಡನೆ ಜಾರಿ ಮಾಡಲು ಸಾಧ್ಯವಿಲ್ಲವೆಂದು ದೆಹಲಿ ಸರ್ಕಾರ ನಿನ್ನೆಯಷ್ಟೇ (ಜ.15) ಸ್ಪಷ್ಟಪಡಿಸಿತ್ತು

ನಿರ್ಭಯಾ ಅತ್ಯಾಕಾಂಡದ ಆರು ಮಂದಿ ಅಪರಾಧಿಗಳಲ್ಲಿ ಒಬ್ಬಾತ ತಿಹಾರ್‌ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಇನ್ನೊಬ್ಬ ಅಪ್ರಾಪ್ತ ವಯಸ್ಸಿನ ಅಪರಾಧಿಗೆ ರಿಮ್ಯಾಂಡ್‌ ಹೋಂನಲ್ಲಿದ್ದಾರೆ. ಉಳಿದ ನಾಲ್ವರು ತಿಹಾರ್‌ ಜೈಲಿನಲ್ಲಿದ್ದಾರೆ.

ಈ ನಾಲ್ವರಿಗೆ ಕೆಳಹಂತದ ನ್ಯಾಯಾಲಯ ನೀಡಿದ್ದ ಮರಣದಂಡನೆ ಶಿಕ್ಷೆಯನ್ನು ದೆಹಲಿ ಹೈಕೋರ್ಟ್, ಬಳಿಕ ಸುಪ್ರೀಂಕೋರ್ಟ್ ಎತ್ತಿ ಹಿಡಿದಿತ್ತು. ಈ ಪೈಕಿ ಅಕ್ಷಯ್‌ ಕುಮಾರ್ ಎಂಬ ಅಪರಾಧಿಯನ್ನು ಹೊರತುಪಡಿಸಿ ಇತರ ಮೂವರು ಅಪರಾಧಿಗಳಾದ ಮುಕೇಶ್‌ ಸಿಂಗ್‌, ಪವನ್‌ ಗುಪ್ತಾ ಮತ್ತು ವಿನಯ್‌ ಶರ್ಮಾ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಗಳನ್ನು ಸುಪ್ರೀಂಕೋರ್ಟ್ ವಜಾ ಮಾಡಿತ್ತು.

ಅಕ್ಷಯ್‌ ಸಿಂಗ್‌ನ ಮರುಪರಿಶೀಲನಾ ಅರ್ಜಿಯನ್ನು 2019 ರ ಡಿಸೆಂಬರ್‌ 18 ರಂದು ತಿರಸ್ಕರಿಸಿತ್ತು.

LEAVE A REPLY

Please enter your comment!
Please enter your name here