ನಿರ್ಭಯಾ ಪ್ರಕರಣದ ಅಪರಾಧಿ ಗಲ್ಲು ಶಿಕ್ಷೆಯಿಂದ ಪಾರಾಗಲು ಕೊನೆಯ ಯತ್ನ, ಪರಿಹಾರಾತ್ಮಕ ಅರ್ಜಿ ಸಲ್ಲಿಕೆ

ದೆಹಲಿಯಲ್ಲಿ ಘಟಿಸಿದ್ದ ನಿರ್ಭಯಾ ಅತ್ಯಾಚಾರ ಮತ್ತು ಕಗ್ಗೊಲೆ ಪ್ರಕರಣದಲ್ಲಿ ಮರಣದಂಡನೆ ಒಳಗಾಗಿರುವ ನಾಲ್ವರು ಅಪರಾಧಿಗಳಲ್ಲಿ ಒಬ್ಬನಾಗಿರುವ ವಿನಯ್‌ ಗಲ್ಲು ಶಿಕ್ಷೆಯಿಂದ ಪಾರಾಗುವ ಕೊನೆಯ ಯತ್ನವಾಗಿ ಸುಪ್ರೀಂ ಕೋರ್ಟ್‌ಗೆ ಪರಿಹಾರಾತ್ಮಕ ಅರ್ಜಿ ಸಲ್ಲಿಸುವ ಮೂಲಕ ಮೊರೆಹೋಗಿದ್ದಾನೆ 

ನಿರ್ಭಯಾ ಅತ್ಯಾಕಾಂಡದ ಆರು ಮಂದಿ ಅಪರಾಧಿಗಳಲ್ಲಿ ಒಬ್ಬಾತ ತಿಹಾರ್‌ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಇನ್ನೊಬ್ಬ ಅಪ್ರಾಪ್ತ ವಯಸ್ಸಿನ ಅಪರಾಧಿಗೆ ರಿಮ್ಯಾಂಡ್‌ ಹೋಂನಲ್ಲಿದ್ದಾರೆ. ಉಳಿದ ನಾಲ್ವರು ತಿಹಾರ್‌ ಜೈಲಿನಲ್ಲಿದ್ದಾರೆ.

ಈ ನಾಲ್ವರಿಗೆ ಕೆಳಹಂತದ ನ್ಯಾಯಾಲಯ ನೀಡಿದ್ದ ಮರಣದಂಡನೆ ಶಿಕ್ಷೆಯನ್ನು ದೆಹಲಿ ಹೈಕೋರ್ಟ್, ಬಳಿಕ ಸುಪ್ರೀಂಕೋರ್ಟ್ ಎತ್ತಿ ಹಿಡಿದಿತ್ತು. ಈ ಪೈಕಿ ಅಕ್ಷಯ್‌ ಕುಮಾರ್ ಎಂಬ ಅಪರಾಧಿಯನ್ನು ಹೊರತುಪಡಿಸಿ ಇತರ ಮೂವರು ಅಪರಾಧಿಗಳಾದ ಮುಕೇಶ್‌ ಸಿಂಗ್‌, ಪವನ್‌ ಗುಪ್ತಾ ಮತ್ತು ವಿನಯ್‌ ಶರ್ಮಾ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಗಳನ್ನು ಸುಪ್ರೀಂಕೋರ್ಟ್ ವಜಾ ಮಾಡಿತ್ತು.

ಅಕ್ಷಯ್‌ ಸಿಂಗ್‌ನ ಮರುಪರಿಶೀಲನಾ ಅರ್ಜಿಯನ್ನು 2019 ರ ಡಿಸೆಂಬರ್‌ 18 ರಂದು ತಿರಸ್ಕರಿಸಿತ್ತು.

ದೆಹಲಿ ನ್ಯಾಯಾಲಯ

LEAVE A REPLY

Please enter your comment!
Please enter your name here