ನಿರ್ಭಯಾ ಅತ್ಯಾಚಾರಿಗಳಿಗೆ ಬೆಳಿಗ್ಗೆ 7 ಗಂಟೆಗೇ ಗಲ್ಲು ಶಿಕ್ಷೆ ಯಾಕೆ? ಕಾರಣ ಇಲ್ಲಿದೆ.

ದೆಹಲಿಯ ನಿರ್ಭಯಾ ಪ್ರಕರಣದ ಅಪರಾಧಿಗಳಿಗೆ ಗಲ್ಲು ಶಿಕ್ಷೆಗೆ ಮುಹೂರ್ತ ನಿಗದಿಯಾಗಿದೆ. ಜನವರಿ 22 ರಂದು ಬೆಳಿಗ್ಗೆ 7 ಗಂಟೆಗೆ ಅಪರಾಧಿಗಳನ್ನು ನೇಣುಗಂಬಕ್ಕೇರಿಸುವಂತೆ ದೆಹಲಿಯ ಪಟಿಯಾಲ ಕೋರ್ಟ್‌ ಡೆತ್‌ ವಾರೆಂಟ್‌ ಹೊರಡಿಸಿದೆ.

ಡೆತ್‌ ವಾರೆಂಟ್‌ ಎಂದರೆ ಮರಣದಂಡನೆ ವಿಧಿಸುವುದಕ್ಕೆ ಅಪರಾಧಿಗಳು ಇರುವ  ಜೈಲಿನ ಅಧಿಕಾರಿಗಳಿಗೆ ಕೋರ್ಟ್‌ ಅನುಮತಿಯನ್ನು ನೀಡುವುದು.

ಡೆತ್‌ ವಾರೆಂಟ್‌ ಪಡೆದ ಬಳಿಕ ಆ ಜೈಲಿನ ಅಧಿಕಾರಿಗಳು ಮರಣದಂಡನೆಗೆ ಒಳಗಾಗುವ ಅಪರಾಧಿಯ ಕುಟುಂಬಕ್ಕೆ ಮಾಹಿತಿಯನ್ನು ಕೊಡಬೇಕಾಗುತ್ತದೆ.

ಮರಣದಂಡನೆ ವಿಧಿಸುವ ದಿನಾಂಕ ಮತ್ತು ಸಮಯವನ್ನು ಕುಟುಂಬಸ್ಥರಿಗೆ ತಿಳಿಸಬೇಕಾಗುತ್ತದೆ. ಭಾರತದ ಜೈಲು ನಿಯಮಗಳ ಪ್ರಕಾರ ವರ್ಷದ 12 ತಿಂಗಳುಗಳನ್ನು 3 ಭಾಗಗಳನ್ನಾಗಿ ವಿಂಗಡಿಸಿ ಪ್ರತ್ಯೇಕವಾಗಿ ಸಮಯ ನಿಗದಿ ಮಾಡಲಾಗಿದೆ.

ಮರಣದಂಡನೆಗೂ ಟೈಮ್‌ ಫಿಕ್ಸ್‌:

ಕಾನೂನಿನ ಪ್ರಕಾರ ಮುಂಜಾನೆಯೇ ಮರಣದಂಡನೆ ವಿಧಿಸಬೇಕು. ಆದರೆ ಸಮಯ ಮಾತ್ರ ಬೇರೆ ಬೇರೆ ಇರುತ್ತದೆ.

ನವೆಂಬರ್ ನಿಂದ ಫೆಬ್ರವರಿ ನಡುವೆ ಮರಣದಂಡನೆ- ಬೆಳಿಗ್ಗೆ 8 ಗಂಟೆಯ ಒಳಗೆ

ಮಾರ್ಚ್‌, ಏಪ್ರಿಲ್‌, ಸೆಪ್ಟಂಬರ್‌, ಅಕ್ಟೋಬರ್‌ ನಲ್ಲಾದರೆ – ಬೆಳಿಗ್ಗೆ 7 ಗಂಟೆಯ ಒಳಗೆ

ಮೇ ನಿಂದ ಆಗಸ್ಟ್‌ನಲ್ಲಾದರೆ ಬೆಳಿಗ್ಗೆ 6 ಗಂಟೆಯ ಒಳಗೆ

LEAVE A REPLY

Please enter your comment!
Please enter your name here