ಲಾಕ್‌ಡೌನ್‌ ಹೊತ್ತಲ್ಲಿ ಪರಿಸರಕ್ಕಾಗಿ ಮನೆಯಲ್ಲೇ ಓಡಿ – ವರ್ಚುವಲ್‌ ರನ್‌ನಲ್ಲಿ ಪಾಲ್ಗೊಳ್ಳಿ – ಸರ್ಟಿಫಿಕೇಟ್‌ ಗೆಲ್ಲಿ..! – ವಿಶೇಷ ಓಟ

ಲಾಕ್ ಡೌನ್ ಶುರುವಾದ ಬಳಿಕ ಎಲ್ಲರೂ ಮನೆಯೊಳಗೇ ಇದ್ದಾರೆ. ಹೀಗೆ ಮನೆಯೊಳಗೆ ಇರುವವರು ತಮ್ಮ ಅಪಾರ್ಟಮೆಂಟ್, ಟೆರೇಸ್, ಮನೆಯ ಹಿಂಭಾಗದಲ್ಲೇ ಅತೀ ಹೆಚ್ಚು ಕಿಲೋ ಮೀಟರ್ ಓಡಿ ಸುದ್ದಿಯಾಗುತ್ತಿದ್ದಾರೆ. ಸದ್ಯ ಇದು ಟ್ರೆಂಡ್ ಕೂಡಾ ಆಗಿದೆ.

ಹೀಗೆ ಓಡುತ್ತಲೇ ಹಲವರು ತಮ್ಮ ಆರೋಗ್ಯವನ್ನೂ ಕಾಪಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಇಂತಹ ಚಟುವಟಿಕೆಗಳು ಜನರಿಗೆ ತಮ್ಮನ್ನು ತಾವು ಬ್ಯುಸಿ ಇಟ್ಟುಕೊಳ್ಳಲು ನೆರವಾಗುತ್ತವೆ.‌

ಬೆಂಗಳೂರಿನ ಟೀಂ ಪರಿಕ್ರಮ ಸಂಸ್ಥೆಯು‌ ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ “ವರ್ಚುವಲ್‌ ರನ್”‌ ಎಂಬ ವಿನೂತನ ಪ್ರಯೋಗಕ್ಕೆ ಮುಂದಾಗಿದೆ. ಪರಿಸರ ದಿನಾಚರಣೆಯ ಮರು ದಿನ ಅಂದರೆ ಜೂನ್‌ 6ರಂದು ವರ್ಚುವಲ್‌ ರನ್‌ ಆಯೋಜಿಸಿದೆ.

ಈಗಾಗಲೇ ಎರಡು ಬಾರಿ ಅಂಡಮಾನ್‌ಗೆ ಸೈಕ್ಲಿಂಗ್ ಮಾಡುವ ಮೂಲಕ ಪರಿಸರ ಅಭಿಯಾನವನ್ನು ಈ ತಂಡ ಯಶಸ್ವಿಯಾಗಿ ಮುಗಿಸಿತ್ತು. ಅಲ್ಲದೇ ಬೆಂಗಳೂರಿನ ಪ್ರತಿಷ್ಠಿತ ಹಲವಾರು ಕಾಲೇಜಿನ ವಿದ್ಯಾರ್ಥಿಗಳಿಗೆ ಚಾರಣದ‌ ಬಗ್ಗೆ ಭಯವಿರುವ ಯುವತಿಯರಿಗೆ ಭಯವನ್ನು ಹೋಗಲಾಡಿಸಿ ಅವರಲ್ಲೂ ಚಾರಣದ ಬಗ್ಗೆ ಆಸಕ್ತಿ ಬೆಳೆಸುವ ಪ್ರಯತ್ನವನ್ನು ಮಾಡುತ್ತಿದೆ.

View this post on Instagram

"Add life to your days not days to your life". Everytime we leave our comfort zone is when we truly start living. This group of trekkers found it difficult to complete but nonetheless they didn't give up which is the most important aspect to be learnt. Only when we push to the brink can we really know our strengths. The team building and group activities were fun accompanied by the fresh clean air filling out lungs, it was more than just a trek. It was a learning experience. As a team we did face few challenges in the morning, but as the day progressed we were in for a treat, as our participants thoroughly enjoyed the wholesome experience. It's never too late to change anything. START NOW. #teamparikrama #mlac #characterdesign #healthylifestyle #living #gratitude #tie #knowyourworth #elevate #yinyang #osm #era #cleaneating #air #weather #bag #hike #organization #face #challenges #overcome #& #victorious #fitness #love #thy #self #fortnite #questions #answer

A post shared by Team Parikrama (@teamparikrama) on

ಟೀಂ ಪರಿಕ್ರಮದ ಸಂಸ್ಥಾಪಕ ಧೀರಜ್‌ ಶರ್ಮಾ ಹೇಳುವ ಪ್ರಕಾರ  ಈ “ವರ್ಚುವಲ್ ರನ್” ಕಲ್ಪನೆಗೆ ಮಿತ್ರರೇ ಸ್ಫೂರ್ತಿ. ಲಾಕ್‌ಡೌನ್‌ ದಿನಗಳಲ್ಲಿ  ಸ್ನೇಹಿತರೆಲ್ಲೂ ಅನಿವಾರ್ಯವಾಗಿ ಮನೆಯೊಳಗಡೆ, ಟೆರೇಸ್‌ ಮೇಲೆ ಓಡುತ್ತಿದ್ದರು. ಅಂದಹಾಗೆ ಇವರೆಲ್ಲಾ ವೃತ್ತಿನಿರತ ಓಟಗಾರರಾಗಿದ್ದು ಈಗಾಗಲೇ ಹಲವಾರು ಮ್ಯಾರಥಾನ್‌ಗಳಲ್ಲಿ ಭಾಗವಹಿಸಿದ್ದಾರೆ.

ಮೊದಲೆಲ್ಲಾ 5 ಕಿ.ಮೀ ಓಡುತ್ತಿದ್ದ ಇವರೆಲ್ಲಾ ಬರುಬರುತ್ತಾ 10 ಕಿ.ಮೀ, 42 ಕಿ.ಮೀ (ಫುಲ್‌ ಮ್ಯಾರಥಾನ್) ಓಡಲಾರಂಭಿಸಿದರು. ಹೇಗೂ ಜನರಿಗೆ ಹೊರಗಡೆ ಬರಲು ಅವಕಾಶ ಇರುವುದಿಲ್ಲ. ಈ ಅವಕಾಶವನ್ನು ಕಲ್ಪಿಸುವುದರಿದ ಇಂತಹ ಹಲವಾರು ಉತ್ಸಾಹಿಗಳಿಗೆ ವೇದಿಕೆಯಾಗುತ್ತದೆ ಎಂದು ಈ “ವರ್ಚುವಲ್‌ ರನ್”‌ ಎನ್ನುವ ಯೋಚನೆ ಹುಟ್ಟಿಕೊಂಡಿತು ಎನ್ನುತ್ತಾರೆ ಧೀರಜ್‌ ಶರ್ಮಾ.

ಏನಿದು ವರ್ಚುವಲ್‌ ಮ್ಯಾರಾಥಾನ್‌..?

ವರ್ಚುವಲ್‌ ರನ್‌ನಲ್ಲಿ ಭಾಗವಹಿಸುವವರು ಮನೆಯೊಳಗಡೆ, ಮನೆಯ ಟೆರೇಸ್‌ ಮೇಲೆ, ಮನೆಯ ಅಂಗಳದಲ್ಲಿ ಓಡಬಹುದು. ತಮ್ಮ ಮೊಬೈಲ್‌ನಲ್ಲಿರುವ ಆಪ್‌ ಮೂಲಕ ಅವರು ಎಷ್ಟು ಓಡುತ್ತಾರೆ ಎಂಬುವುದನ್ನು ದಾಖಲಿಸಬಹುದು.

ಈ ವರ್ಚುವಲ್‌ ರನ್‌ನ್ನು ಇನ್‌ಸ್ಟಾಗ್ರಾಂನಲ್ಲಿ ಲೈವ್‌ ಮಾಡಲಾಗುವುದು. ಅಂದಹಾಗೆ ನೀವು ಎಲ್ಲೇ ಇದ್ದರೂ ಓಡುವುದನ್ನು ಆನ್‌ಲೈನ್‌ನಲ್ಲಿ ತೋರಿಸಲಾಗುತ್ತದೆ. ಎಷ್ಟು ಕಿಲೋ ಮೀಟರ್‌ ಓಡಿದಿದ್ದೀರಿ ಅಂತ ನೀವೇ ಅಪ್‌ಡೇಟ್‌ ಮಾಡಬಹುದು.

ನೋಂದಾಯಿಸಿಕೊಳ್ಳುವುದು ಹೇಗೆ..?

ಹಾಗೆಯೇ ವರ್ಚುವಲ್‌ ರನ್‌ ನಲ್ಲಿ ಭಾಗವಹಿಸುವವರು ಟೀಂ ಪರಿಕ್ರಮದ ವೆಬ್‌ ಸೈಟ್‌ ಗೆ ಹೋಗಿ ರಿಜಿಸ್ಟರ್‌ ಮಾಡಿದ ನಂತರ ಅವರಿಗೆ ಟೀ ಶರ್ಟ್‌ನ್ನು ಹೋಂ ಡೆಲಿವರಿ‌ ಮೂಲಕ ತಲುಪಿಸಲಾಗುವುದು. ನಂತರ ಈವೆಂಟ್‌ ಮುಗಿದ ನಂತರ ಭಾಗವಹಿಸಿದವರಿಗೆ ಇ-ಸರ್ಟಿಫಿಕೇಟ್‌ ನೀಡಲಾಗುತ್ತದೆ.

ಟೀಮ್‌ ಪರಿಕ್ರಮವು 2020ರ ವಿಶ್ವ ಪರಿಸರ ದಿನಾಚರಣೆಯಂದು ಸಮುದಾಯವನ್ನು ಒಟ್ಟುಗೂಡಿಸುವ ಮತ್ತು ಜೀವವೈವಿಧ್ಯತೆಯ ಬಗ್ಗೆ ಹೆಚ್ಚು ಅರಿವು ಮೂಡಿಸುವ ಪ್ರಯತ್ನಕ್ಕೆ ನೀವೂ ಬೆಂಬಲ ನೀಡುವಿರಾದರೆ ಈ ಕೆಳಗೆ ನಮೂದಿಸಿರುವ ವೆಬ್‌ಸೈಟ್‌ ವಿಳಾಸದ ಮೇಲೆ ಕ್ಲಿಕ್‌ ಮಾಡಿ ರಿಜಿಸ್ಟರ್‌ ಮಾಡಿಕೊಳ್ಳಬಹುದು.

https://www.teamparikrama.com/event-info/home-trail-a-virtual-run

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:  +91 8904890519

LEAVE A REPLY

Please enter your comment!
Please enter your name here