ನಿಮ್ಮ ಮಗುವಿನ ಮೊದಲ ವರ್ಷದ ಹುಟ್ಟುಹಬ್ಬ ಆಚರಿಸುತ್ತಿದ್ದೀರಾ? ಹಾಗಾದರೆ ಇದನ್ನೊಮ್ಮೆ ಓದಿ

ಮಗುವಿನ ಜನನವು ಹೆತ್ತವರ ಪಾಲಿಗೆ ಅತ್ಯಂತ ಸಂಭ್ರಮ ಮತ್ತು ಸಂತಸದ ಘಳಿಗೆಯಾಗಿರುತ್ತದೆ. ಹೆತ್ತವರಾಗಿ ನಿಮ್ಮ ಮಗುವಿನ ಮೊದಲ ವರ್ಷದ ಹುಟ್ಟುಹಬ್ಬವನ್ನು ಆಚರಿಸಲು ನೀವು ತುದಿಗಾಲಿನಲ್ಲಿ ನಿಂತಿರುತ್ತೀರಿ.

ಮಕ್ಕಳ ಬೆಳವಣಿಗೆಯು ಬಹಳ ವೇಗವಾಗಿರುವುದರಿಂದ, ನಿಮ್ಮ ಮಗುವಿಗೆ ಒಂದು ವರ್ಷವಾಗಿರುವುದೇ ಅದು ದೊಡ್ಡ ಮೈಲುಗಲ್ಲು ಅದರ ಅರ್ಥ ನೀವು ಪೋಷಕರಾಗಿ ಮೊದಲ ವರ್ಷ ಯಶಸ್ವಿಯಾಗಿ ಮುಗಿಸಿದ್ದೀರಿ ಎಂದು!

ಡೈಪರ್‌ ಬದಲಾಯಿಸುವುದು,ಮಗುವಿನ ಲಾಲನೆ ಪಾಲನೆಯಲ್ಲಿ ನೀವು ನಿದ್ದೆಗೆಟ್ಟ ಆ ರಾತ್ರಿಗಳು, ಇವೆಲ್ಲಾ  ನಿಮ್ಮ ಮಗುವಿನ ಮುದ್ದಾದ ಮುಖವನ್ನು ನೋಡಿದಾಗ ಆಯಾಸ, ನೋವು ಒಮ್ಮೆಲೇ ಮರೆಯಾಗಿ ಮುಖದಲ್ಲಿ ನಗು ಮೂಡುತ್ತದೆ.ಅಂತಿಮವಾಗಿ ನಿಮ್ಮ ಪುಟ್ಟ ಮಗುವಿನ ಮೊದಲ ವರ್ಷದ ಹುಟ್ಟುಹಬ್ಬವನ್ನು ಆಚರಿಸುವುದು ನಿಮ್ಮ ಜೀವನದ ಅಮೂಲ್ಯ ಕ್ಷಣವೆಂದರೂ ತಪ್ಪಾಗಲಾರದು.

ಮಗುವಿಗೆ ಹೊಸ ಬಟ್ಟೆಯನ್ನು ಆಯ್ಕೆ ಮಾಡುವುದರಿಂದ ಹಿಡಿದು, ಆಕರ್ಷಕವಾದ ಕೇಕ್‌ನ ಆಯ್ಕೆಯನ್ನು ಅಂತಿಮಗೊಳಿಸುವವರೆಗೂ ಮಗುವನ್ನು ಆಟ ಆಡಿಸುವಷ್ಟು ಸಲೀಸಲಾಗಿರುವುದಿಲ್ಲ.

ನಿಮ್ಮ ಪುಟ್ಟ ಮಗುವಿನ ಬರ್ತ್ ಡೇ ಆಯೋಜಿಸಬೇಕಾದರೆ ನೆನಪಿಡಬೇಕಾದ 5 ಮುಖ್ಯ ಅಂಶಗಳು

  1. ಆದಷ್ಟು ಒತ್ತಡ ಮುಕ್ತರಾಗಿರಿ :

ಬಹಳಷ್ಟು ಮಂದಿ ಪೋಷಕರು ತಮ್ಮ ಮಗುವಿನ ಮೊದಲ ವರ್ಷದ ಹುಟ್ಟುಹಬ್ಬವನ್ನು ಬೇರೆಯವರಿಗಿಂತ ವಿಭಿನ್ನವಾಗಿರಬೇಕೆಂದು ಬಯಸುತ್ತಾರೆ,ವಿಶೇಷವಾಗಿ ಮಗುವಿನ ಪೋಷಕರು ಇಬ್ಬರೂ ಉದ್ಯೋಗಸ್ಥರಾಗಿದ್ದಲ್ಲಿ ಇದು ಕೆಲವೊಮ್ಮೆ ಅವರನ್ನು ವಿಪರೀತ ಒತ್ತಡವನ್ನುಂಟುಮಾಡುತ್ತದೆ. ಹಾಗಾಗಿ ಹುಟ್ಟುಹಬ್ಬವನ್ನು ಆದಷ್ಟು ಸರಳವಾಗಿ ಆಚರಿಸುವಂತೆ ನಿಮ್ಮ ಪ್ಲ್ಯಾನ್‌ ಇರಲಿ.

2. ಸಿಂಪಲ್ ಥೀಮ್ ಆಯ್ಕೆ ಮಾಡಿ :

ನಿಮ್ಮ ಮಗು ಇಷ್ಟಪಡುವ ವಸ್ತುವಿಗೆ ಅನುಗುಣವಾಗಿ ಥೀಮನ್ನು ಆಯ್ಕೆ ಮಾಡಿಕೊಳ್ಳಿ,ಸಿಂಪಲ್‌ ಥೀಮನ್ನು ಆಯ್ಕೆ ಮಾಡುವುದರಿಂದ ಅದಕ್ಕೆ ತಕ್ಕಂತೆ ಬೇಕಾಗುವ ಉಳಿದ ಅಲಂಕಾರಿಕ ವಸ್ತುಗಳ ಆಯ್ಕೆಗೆ ಸುಲಭವಾಗುತ್ತದೆ. ಉದಾ: ಬಲೂನ್‌,ಬರ್ತ್ ಡೇ ಕೇಕ್‌, ಮಗುವಿನ ಬಟ್ಟೆ ಇತ್ಯಾದಿ.

3. ನಿಮ್ಮ ಮಗುವಿನ ನಿದ್ದೆಯ ಬಗ್ಗೆ ಗಮನವಿರಲಿ:

ನೆನಪಿಡಿ ಇದು ನಿಮ್ಮ ಮಗುವಿನ ಹುಟ್ಟುಹಬ್ಬದ ಆಚರಣೆ, ಹಾಗಾಗಿ ನಿಮ್ಮ ಮಗು ನಿದ್ದೆ ಮಾಡುವ ಸಮಯವನ್ನು ಗಮನದಲ್ಲಿಟ್ಟುಕೊಂಡು, ಯಾವ ಹೊತ್ತಿನಲ್ಲಿ ನಿಮ್ಮ ಮಗು ಆಟವಾಡಿಕೊಂಡು, ಚುರುಕಾಗಿ ಓಡಾಡಿಕೊಂಡಿರುತ್ತೋ ಅಂತಹ ಸಮಯದಲ್ಲಿ ಪ್ಲ್ಯಾನ್‌ ಮಾಡಿ.

ಆದಷ್ಟು ಗಡಿಬಿಡಿಯಿಲ್ಲದೆ ಅಥವಾ ಆರಾಮಾಗಿ ಓಡಾಡಿಕೊಂಡಿರುವ ಸಮಯದಲ್ಲಿ ಇಟ್ಟುಕೊಳ್ಳುವುದು ಉತ್ತಮ. ನೆನಪಿಡಿ, ನಿಮ್ಮ ಮಗುವಿಗೆ ಪುಟ್ಟದೊಂದು ನಿದ್ದೆ ಸಮಯವನ್ನು ನೀಡದಿದ್ದಲ್ಲಿ, ಹುಟ್ಟುಹಬ್ಬದ ಆಚರಣೆಯ ಸಂದರ್ಭದಲ್ಲಿ ಮಗುವನ್ನು ಸಂಭಾಳಿಸಲೆಂದೇ ಹೆಚ್ಚಿನ ಸಮಯವನ್ನು ಕಳೆಯಬೇಕಾಗಬಹುದು.

4. ಫೋಟೋ ಕ್ಲಿಕ್ಕಿಸಲು ಮರೆಯದಿರಿ:

ಆಚರಣೆಯ ಸಂಭ್ರಮದಲ್ಲಿ ನಿಮ್ಮ ಮಗುವಿನ ಮುದ್ದಾದ ಫೋಟೋ ಕ್ಲಿಕ್ಕಿಸಲು ನೀವು ವೃತ್ತಿನಿರತ ಫೋಟೋಗ್ರಾಫರ್‌ ಅಥವಾ ನಿಮ್ಮ ಸ್ನೇಹಿತರ ಬಳಗದಲ್ಲಿ ಯಾರಾದರೂ ಫೋಟೋ ತೆಗೆಯುವವರಿದ್ದಲ್ಲಿ ಅವರಿಗೆ ಕಾರ್ಯಕ್ರಮದ ಸುಂದರ ಕ್ಷಣಗಳನ್ನು ಸೆರೆಹಿಡಿಯಲು ಹೇಳಿ.

5. ಅತಿಥಿಗಳ ಪಟ್ಟಿ :

ಅತಿಥಿಗಳ ಪಟ್ಟಿ ಮಗುವಿನ ಹುಟ್ಟುಹಬ್ಬಕ್ಕೆ ಮಿತಿಮೀರಿದ ಸಂಖ್ಯೆಯಲ್ಲಿ ಅತಿಥಿಗಳು ಬಂದರೆ ಆಗ ಮಗುವಿಗೆ ಕಿರಿಕಿರಿಯಾಗಬಹುದು. ಇದರಂತೆ ಯೋಜನೆ ಹಾಕಿಕೊಂಡು ನಿಮ್ಮ ಕುಟುಂಬಕ್ಕೆ ತೀರಾ ಹತ್ತಿರದವರನ್ನು ಆಹ್ವಾನಿಸಿ. ಅತಿಥಿಗಳ ಪಟ್ಟಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಇರಲಿ.

ಹುಟ್ಟುಹಬ್ಬದ ಈ ಎಲ್ಲಾ ಐಡಿಯಾಗಳೊಂದಿಗೆ ನೀವು ಮಗುವಿನ ಮೊದಲ ಹುಟ್ಟುಹಬ್ಬವನ್ನು ತುಂಬಾ ಸ್ಮರಣೀಯವಾಗಿಸಬಹುದು. ಅತಿಥಿಗಳಿಗೆ ಗೌರವಿಲ್ಲದೆ ಯಾವುದೇ ಪಾರ್ಟಿ ಕೂಡ ಪೂರ್ಣಗೊಳ್ಳದು. ಇದರಿಂದಾಗಿ ಅತಿಥಿಗಳು ಯಾವಾಗಲೂ ನೆನಪಿನಲ್ಲಿ ಇಟ್ಟುಕೊಳ್ಳುವಂತಹ ಪಾರ್ಟಿ ನೀಡಿ.

LEAVE A REPLY

Please enter your comment!
Please enter your name here