ನಿಮ್ಮ ಮಕ್ಕಳು ಮೊಬೈಲ್‍ನಲ್ಲಿ ಏನು ನೋಡ್ತಿವೆ ಗೊತ್ತಾ..? ಇದು ಬೆಚ್ಚಿಬೀಳಿಸುವ ವಿಚಾರ

ಈಗ ಎಲ್ಲರ ಕೈಗಳಲ್ಲಿಯೂ ಮೊಬೈಲ್‍ಗಳಿವೆ. ವಿಶೇಷವಾಗಿ, ಮಕ್ಕಳು ಮತ್ತು ಯುವಕರು ಯಾವಾಗ್ಲೂ ಮೊಬೈಲ್ ನೋಡುತ್ತಾ ಇಂಟರ್ನೆಟ್ ಲೋಕದಲ್ಲಿ ಮುಳುಗಿರುತ್ತಾರೆ. ಮತ್ತೆ.. ನೆಟ್‍ನಲ್ಲಿ ನಿಮ್ಮ ನೋಡ್ತಿದ್ದಾರೆ ಅನ್ನೋದನ್ನು ಗಮನಿಸಿದ್ದೀರಾ..? ಅವರ ಬ್ರೌಸಿಂಗ್ ಹಿಸ್ಟರಿಯನ್ನು ಚೆಕ್ ಮಾಡ್ತಿದ್ದೀರಾ..? ಈ ಪ್ರಶ್ನೆಗೆ ಪೋಷಕರಿಂದ ಸಿಗುತ್ತಿರುವ ಉತ್ತರ ಏನು ಗೊತ್ತಾ..?

ಇತ್ತೀಚಿಗೆ ಓಎಲ್‍ಎಕ್ಸ್ 2020 ಇಂಟರ್ನೆಟ್ ಬಿಹೇವಿಯರ್ ಸ್ಟಡಿ ಹೆಸರಲ್ಲಿ ಓಎಲ್‍ಎಕ್ಸ್ ಸಂಸ್ಥೆ ಒಂದು ಸಮೀಕ್ಷೆ ನಡೆಸಿತು. ಇಂಟರ್ನೆಟ್ ಬಳಕೆ, ಆನ್‍ಲೈನ್ ವ್ಯವಹಾರ, ಸೈಬರ್ ಅಪರಾಧಗಳ ಮೇಲೆ 18ರಿಂದ 55 ವರ್ಷದೊಳಗಿನ 7500 ನೆಟ್ಟಿಗರನ್ನು ಸಮೀಕ್ಷೆಗೆ ಒಳಪಡಿಸಿತು. ಇಂಟರ್ನೆಟ್ ಬಳಸುವ ಮಕ್ಕಳ ಕುರಿತಂತೆ ಪೋಷಕರನ್ನು ಪ್ರಶ್ನೆ ಕೇಳಿದಾಗ ಸಿಕ್ಕಿದ್ದು ಬೆಚ್ಚಿಬೀಳುವ ಉತ್ತರಗಳು.

ನಿಮ್ಮ ಮಕ್ಕಳು ಇಂಟರ್ನೆಟ್‍ನಲ್ಲಿ ಏನು ನೋಡ್ತಿವೆ..? ಎಂಬ ಪ್ರಶ್ನೆ ಸಿಕ್ಕ ಉತ್ತರ ಅಂತರ್ಜಾಲದಲ್ಲಿ ನಮ್ಮ ಮಕ್ಕಳ ಏನು ನೋಡಿವೆ ಎಂಬುದನ್ನು ನಾವು ಗಮನಿಸಿಲ್ಲ. ಅವರ ಲ್ಯಾಪ್‍ಟಾಪ್, ಸ್ಮಾರ್ಟ್‍ಫೋನ್, ಟ್ಯಾಬ್‍ಗಳಲ್ಲಿ ಬ್ರೌಸಿಂಗ್ ಹಿಸ್ಟರಿಯನ್ನು ನಾವು ಪರಿಶೀಲಿಸುತ್ತಿಲ್ಲ ಅಂತಾ ಶೇಕಡಾ 60ರಷ್ಟು ಪೋಷಕರು ಹೇಳಿದ್ದಾರೆ. ಆಗಾಗ ಬ್ರೌಸಿಂಗ್ ಹಿಸ್ಟರಿ ಚೆಕ್ ಮಾಡುತ್ತೇವೆ ಎಂದು ಶೇಕಡಾ 21ರಷ್ಟು ಮಂದಿ ಹೇಳಿದ್ದಾರೆ. ನಿತ್ಯ ಪರಿಶೀಲನೆ ಮಾಡುತ್ತೇವೆ ಎಂದು ಶೇಕಡಾ 18ರಷ್ಟು ಮಂದಿ ಹೇಳಿದ್ದಾರೆ.

ಆನ್‍ಲೈನ್‍ಗಿಂತ ಆಫ್‍ಲೈನ್‍ನಲ್ಲೇ ಹಣಕಾಸು ವ್ಯವಹಾರಗಳನ್ನು ಮಾಡುತ್ತಿದ್ದೀರಾ ಎಂಬ ಪ್ರಶ್ನೆಗೆ ಶೇಕಡಾ 51ರಷ್ಟು ಮಂದಿ ಹೌದು ಎಂದು, ಶೇಕಡಾ 18ರಷ್ಟು ಇಲ್ಲ ಎಂದು ಉತ್ತರ ನೀಡಿದ್ದಾರೆ. ಆನ್‍ಲೈನ್, ಆಫ್‍ಲೈನ್ ಎರಡರ ಮೂಲಕವೂ ಹಣಕಾಸು ವ್ಯವಹಾರಗಳನ್ನು ಮಾಡುತ್ತಿದ್ದೇವೆ ಎಂದು ಶೇಕಡಾ 31ರಷ್ಟು ಮಂದಿ ಹೇಳಿದ್ದಾರೆ.

ನಿಮ್ಮ ವೈಯಕ್ತಿಕ ವಿವರಗಳನ್ನು ಇತರರಿಗೆ ಶೇರ್ ಮಾಡುತ್ತೇವೆ ಎಂದು ನೆಟ್ಟಿಗರು ಹೇಳಿಕೊಂಡಿದ್ದಾರೆ. ಶೇಕಡಾ 21 ಮಂದಿ ಫೋನ್ ನಂಬರ್, ಅಡ್ರೆಸ್ ಅನ್ನು, ಶೇಕಡಾ 22ರಷ್ಟು ಮಂದಿ ಓಟಿಪಿ ನಂಬರ್ ಅನ್ನು, ಶೇ.1ರಷ್ಟು ಮಂದಿ ಬ್ಯಾಂಕ್ ಖಾತೆ ನಂಬರ್, ಪಾಸ್‍ವರ್ಡ್, ಯುಪಿಐ ಪಿನ್ ನಂಬರ್ ಅನ್ನು, ಶೇಕಡಾ 13ರಷ್ಟು ಮಂದಿ ಕ್ರೆಡಿಟ್/ಡೆಬಿಟ್ ಕಾರ್ಡ್ ವಿವರಗಳನ್ನು ಶೇರ್ ಮಾಡುತ್ತೇವೆ ಎಂದು ಹೇಳಿಕೊಂಡಿದ್ದಾರೆ.

ಅಂದ ಹಾಗೇ, ಶೇ.50ರಷ್ಟು ಮಂದಿಗೆ ಸೈಬರ್ ಅಪರಾಧಗಳ ಬಗ್ಗೆ ಕನಿಷ್ಠ ತಿಳುವಳಿಕೆಯೂ ಇಲ್ಲ ಎನ್ನುವುದನ್ನು ಈ ಸಮೀಕ್ಷೆ ಬಹಿರಂಗ ಮಾಡಿದೆ.

ಸಮೀಕ್ಷೆಯಲ್ಲಿನ ಇತರ ಪ್ರಮುಖ ಅಂಶಗಳು
> ಶೇ. 65 ಮಂದಿ ಫೈನಾನ್ಶಿಯಲ್ ಫ್ರಾಡ್‍ಗೆ ಗುರಿ ಆಗುತ್ತಿದ್ದಾರೆ
> ಶೇ.28ರಷ್ಟು ಮಂದಿ ಐಡೆಂಟಿಟಿ ಥೆಫ್ಟ್, ಶೇ.26 ಮಂದಿ ಸ್ಪಾಮ್ ಸಂದೇಶ, ಶೇ.24 ಮಂದಿ ಫಿಷಿಂಗ್ ಸಂದೇಶಗಳಿಗೆ ಸ್ಪಂದಿಸಿ ಮೋಸ ಹೋಗುತ್ತಿದ್ದಾರೆ.
> ವೆಬ್‍ಸೈಟ್/ಅಪ್ಲಿಕೇಶನ್‍ಗಳಲ್ಲಿ ಸೇಫ್ಟಿ ಮತ್ತು ಪ್ರವೆಸಿ ನಿಯಮಗಳನ್ನು ಶೇ.45 ಮಂದಿ ಓದುತ್ತಲೇ ಇಲ್ಲ. ಶೇ.27 ಮಂದಿ ಮಾತ್ರ ರೂಲ್ಸ್ ಅಂಡ್ ರೆಗ್ಯುಲೇಷನ್‍ಗಳನ್ನು ಓದುತ್ತಿದ್ದಾರೆ.
> ಶೇ.34 ಮಂದಿ ಮಾತ್ರ ತಿಂಗಳಿಗೊಮ್ಮೆ ತಮ್ಮ ಡೆಬಿಟ್/ಕ್ರೆಡಿಟ್ ಕಾರ್ಡ್ ಪಾಸ್‍ವರ್ಡ್‍ಗಳನ್ನು ಬದಲಿಸುತ್ತಿದ್ದಾರೆ. ಪಾಸ್‍ವರ್ಡ್ ನೆನಪಿನಲ್ಲಿ ಇಟ್ಟುಕೊಳ್ಳಲು ಆಗುತ್ತಿಲ್ಲ ಎಂದು ಶೇ.26 ಮಂದಿ ಹೇಳಿದ್ದಾರೆ.
> ಸೈಬರ್ ಮೋಸಕ್ಕೆ ಒಳಗಾಗುತ್ತಿರುವವರಲ್ಲಿ ಯುವಕರೇ ಸಂಖ್ಯೆಯೇ ಹೆಚ್ಚು. ಶೇ. 72 ಮಂದಿ 18ರಿಂದ 35 ವರ್ಷದೊಳಗಿನ ವಯಸ್ಕರೇ ಆಗಿದ್ದಾರೆ.
> ಸೈಬರ್ ಅಪರಾಧಗಳ ಬಗ್ಗೆ ಶೇಕಡಾ 45ರಷ್ಟು ಮಂದಿ ಮಾತ್ರ ದೂರು ನೀಡಲು ಪೊಲೀಸ್ ಠಾಣೆ ಮೆಟ್ಟಿಲು ಹತ್ತುತ್ತಿದ್ದಾರೆ.

LEAVE A REPLY

Please enter your comment!
Please enter your name here