ನಿಮ್ಮ ಪಾದಗಳನ್ನು ಡಿಟಾಕ್ಸಿಕೇಟ್‌ ಮಾಡಿಕೊಳ್ಳುವುದರ ಮೂಲಕ ನಿಮ್ಮ ದೇಹವನ್ನು ಡಿಟಾಕ್ಸಿಕೇಟ್‌ ಮಾಡಿಕೊಳ್ಳಿ

ತನ್ನ ಕಾಳಜಿ ಮಾಡಿಕೊಳ್ಳುವುದನ್ನೇ ಮರೆಯುವುದು ಹಲವಾರು ದೈಹಿಕ-ಮಾನಸಿಕ ತೊಂದರೆಗಳಿಗೆ ಆಹ್ವಾನವಿತ್ತಂತೆ. ಬಹಳಷ್ಟು ಜನ ತಮ್ಮ ಒತ್ತಡದ ಕೆಲಸದಲ್ಲಿ ತಮ್ಮ ದೇಹಾರೋಗ್ಯವನ್ನೇ ಕಡೆಗಣಿಸಿರುತ್ತಾರೆ.

ಇತ್ತೀಚಿನ‌ ದಿನಗಳಲ್ಲಿ ದೈಹಿಕ ಚಟುವಟಿಕೆಯ ಕೊರತೆ ಮತ್ತು ಕೆಲಸದ ಒತ್ತಡವು ಅಪಾರ ಪ್ರಮಾಣದ ಒತ್ತಡ ಮತ್ತು ಆತಂಕಕ್ಕೆ ಕಾರಣವಾಗುತ್ತಿದೆ.

ಈ ಹೆಚ್ಚಿದ ಒತ್ತಡ ಮತ್ತು ಸೀಮಿತ ಚಲನೆಯು ದೇಹದಲ್ಲಿ ಹೆಚ್ಚಿನ ಪ್ರಮಾಣದ ಟಾಕ್ಸಿನ್‌ ಉತ್ಪತ್ತಿಯಾಗಲು ಕಾರಣವಾಗುತ್ತದೆ. ಒಂದು ಪೈಸೆ ಖರ್ಚು ಮಾಡದೆ ನೀವು ಈ ಟಾಕ್ಸಿನ್‌ ಅನ್ನು ಹೇಗೆ ತೊಡೆದುಹಾಕಬಹುದು ಎಂಬ ಮಾಹಿತಿ ಇಲ್ಲಿದೆ.

ನಮ್ಮಲ್ಲಿ ಹೆಚ್ಚಿನ ಮಂದಿ 9 ರಿಂದ 5 ಗಂಟೆ ಕೆಲಸ ಮಾಡುವವರು, ಬೆಳಿಗ್ಗೆಯಿಂದ ಸಂಜೆಯವರೆಗೆ ಲ್ಯಾಪ್‌ ಟಾಪ್‌ ಮುಂದೆ ಕುಳಿತು ಕೆಲಸದಲ್ಲಿ ಮಗ್ನರಾಗಿರುತ್ತೇವೆ.

ಯಾರು ಒಂದೇ ಜಾಗದಲ್ಲಿ ಹೆಚ್ಚು ಹೊತ್ತು ಕುಳಿತು ಕೆಲಸ ಮಾಡುತ್ತಾರೋ ಅಂಥವರಿಗೆ ಸಾಮಾನ್ಯವಾಗಿ ಬೆನ್ನು ನೋವು, ಕಾಲು ನೋವು ಆಲಸ್ಯತನ,ಚಡಪಡಿಕೆ,ಪಾದದಲ್ಲಿ ಸೆಳೆತ ಮುಂತಾದ ಸಮಸ್ಯೆಗಳು ಕಂಡುಬರುತ್ತವೆ.

ಕೆಲವೊಮ್ಮೆ ವಿಪರೀತ ಕಾಲು ನೋವು ನಿಮ್ಮ ರಾತ್ರಿಯ ನಿದ್ದೆಗೇ ತೊಡಕಾಗಬಹುದು! ಹಾಗೂ ನಿಮ್ಮ ಒತ್ತಡವೂ ಹೆಚ್ಚಾಗಲು ಕಾರಣವಾಗುತ್ತದೆ.

ಈ ಎಲ್ಲಾ ಸಮಸ್ಯೆಗಳನ್ನು ತೊಡೆದುಹಾಕಲು ಮತ್ತು ನಿಮ್ಮ ದೇಹವನ್ನು ಡಿಟಾಕ್ಸಿಕೇಟ್‌ ಮಾಡಲು ಎರಡು ಸುಲಭ ಮಾರ್ಗಗಳು ಇಲ್ಲಿವೆ.

ವಿಧಾನ 1: ನಿಮ್ಮ ಪಾದವನ್ನು ಡಿಟಾಕ್ಸಿಕೇಟ್‌ ಮಾಡುವ ಸೇಬಿನ ಶಿರ್ಕಾ ಅಥವಾ ಆಪಲ್ ಸೈಡರ್ ವಿನೆಗರ್ :

1 ಚಮಚ ಆಪಲ್ ಸೈಡರ್ ವಿನೆಗರ್ , ಹಾಗೆಯೇ 2 ಟೇಬಲ್‌ ಚಮಚದಷ್ಟು ಕಲ್ಲುಪ್ಪು ಮತ್ತು 3-4 ಹನಿ ಎಸೆನ್ಶಿಯಲ್‌ ಆಯಿಲ್‌ ಮತ್ತು ಸಾಸಿವೆ ಎಣ್ಣೆ ತೆಗೆದುಕೊಳ್ಳಿ

ಡಿಟಾಕ್ಸ್‌ ಮಾಡುವ ವಿಧಾನ :

ಬೆಚ್ಚಗಿನ ನೀರನ್ನು ಬಕೆಟ್‌ನಲ್ಲಿ ತೆಗೆದುಕೊಳ್ಳಿ. ನಮ್ಮ ಮೊಣಕಾಲುಗಳ ಕೆಳಗಿನ ಪ್ರದೇಶವನ್ನು ನೀರು ಆವರಿಸಿಕೊಂಡಿರಬೇಕು ಮತ್ತು ಮಧ್ಯಮವಾಗಿ ಬೆಚ್ಚಗಿರಬೇಕು ಮತ್ತು ತುಂಬಾ ಬಿಸಿಯಾಗಿರಬಾರದು.

ಮಾಯಿಶ್ಚರೈಸರ್ ಹೊರತುಪಡಿಸಿ ಮೇಲೆ ಹೇಳಿರುವ ಎಲ್ಲಾ ವಸ್ತುಗಳನ್ನು ನೀರಿನಲ್ಲಿ ಬೆರೆಸಿ. ನಿಮ್ಮ ಪಾದಗಳನ್ನು 15 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿ ಮತ್ತು ಟವೆಲ್ನಿಂದ ನಿಮ್ಮ ಪಾದಗಳನ್ನು ಸ್ವಚ್ಛ ಗೊಳಿಸಿ. ಈಗ ನಿಮ್ಮ ಪಾದಗಳು ತೇವವಾಗಿರಲು ಯಾವುದೇ ಕ್ರೀಮ್‌  ಅಥವಾ ಸಾಸಿವೆ ಎಣ್ಣೆಯನ್ನು ನಿಧಾನಕ್ಕೆ ಹಚ್ಚಿ.

ಈ ರೀತಿ ಮಾಡಿದ ನಂತರ ಸಮಯವಿದ್ದರೆ, ಸ್ವಲ್ಪ ಹೊತ್ತು (30 ನಿಮಿಷಗಳ ಕಾಲ) ವಿಶ್ರಾಂತಿ ಪಡೆಯಿರಿ. ನಿಮ್ಮ ಕಾಲುಗಳನ್ನು ನೀರಿನಲ್ಲಿ ಅದ್ದಿದ ನಂತರ ನರಗಳು ಮೃದುವಾಗುತ್ತವೆ, ಆದ್ದರಿಂದ ವಾಕಿಂಗ್ ಮೂಲಕ ಅವುಗಳ ಮೇಲೆ ಒತ್ತಡ ಹೇರದಿರುವುದು ಉತ್ತಮ.

ಇದು ಹೇಗೆ ಕೆಲಸ ಮಾಡುತ್ತದೆ?

ಕಾಲು ನೋವು ಕಡಿಮೆ ಮಾಡಲು ಬೆಚ್ಚಗಿನ ನೀರು ನಿಜವಾಗಿಯೂ ಪರಿಣಾಮಕಾರಿ. ಬೆಚ್ಚಗಿನ ನೀರು ರಕ್ತ ಪರಿಚಲನೆ ಹೆಚ್ಚಿಸುತ್ತದೆ,
ಇದು ರಕ್ತದಲ್ಲಿನ ಆಮ್ಲಜನಕದ ಪ್ರಮಾಣವನ್ನು ಹೆಚ್ಚಿಸುತ್ತದೆ. ಇವೆಲ್ಲವೂ ನಮ್ಮ ಸ್ನಾಯುಗಳನ್ನು ಸಡಿಲಗೊಳಿಸಲು ಮತ್ತು ಉತ್ತಮ ನಿದ್ರೆ
ಪಡೆಯಲು ಸಹಾಯ ಮಾಡುತ್ತದೆ.

ಬಿಸಿ ನೀರು ನಮ್ಮ ಚರ್ಮದ ರಂಧ್ರಗಳನ್ನು ತೆರೆಯುವಂತೆ ಮಾಡಿ ಉಪ್ಪಿನಲ್ಲಿನ ಖನಿಜಾಂಶಗಳು ಈ ರಂಧ್ರಗಳ ಮುಖಾಂತರ ಒಳಹೋಗಿ ಅಲ್ಲಿರುವ ವಿಷಕಾರಿ ಅಂಶಗಳನ್ನು ಹೊರ ಹಾಕುತ್ತವೆ.

ವಿಧಾನ 2: ನಿಮ್ಮ ಪಾದವನ್ನು ಡಿಟಾಕ್ಸಿಕೇಟ್‌ ಮಾಡುವುದು

ನಿಮ್ಮ ಪಾದವನ್ನು ಡಿಟಾಕ್ಸಿಕೇಟ್‌ ಮಾಡುವ ಇನ್ನೊಂದು ಉತ್ತಮ ವಿಧಾನವೆಂದರೆ ‌ಸಾಸಿವೆ ಎಣ್ಣೆ, ಹಿಮಾಲಯನ್ ಸಾಲ್ಟ್, ನಿಂಬೆ ಮತ್ತು ಸ್ವಲ್ಪ ಬೆಚ್ಚಗಿನ ನೀರು ಇವುಗಳ ಮಿಶ್ರಣ.

ಮಾಡುವ ವಿಧಾನ :

ನಿಮ್ಮ ಪಾದವನ್ನು ಮೃದುವಾಗಿ ಎಣ್ಣೆ, ಹಿಮಾಲಯನ್‌ ಸಾಲ್ಟ್‌, ನಿಂಬೆಯಿಂದ ಮಸಾಜ್‌ ಮಾಡಿಕೊಳ್ಳಿ, ಈಗ ಒಂದು ಬಕೆಟ್ ನಲ್ಲಿ ಸ್ವಲ್ಪ ಬೆಚ್ಚಗಿನ ನೀರು ತೆಗೆದುಕೊಂಡು ಅದಕ್ಕೆ ನಿಂಬೆಯ ರಸವನ್ನು ಹಿಂಡಿ. ನಂತರ ಅದಕ್ಕೆ ಹಿಮಾಲಯನ್‌ ಸಾಲ್ಟ್‌ ಹಾಕಿ. 20 ನಿಮಿಷಗಳ ಕಾಲ ನಿಮ್ಮ ಪಾದವನ್ನು ಬಕೆಟ್ ನಲ್ಲಿ ಇಟ್ಟುಕೊಳ್ಳಿ.

ಇದು ನಿಮ್ಮ ಪಾದವನ್ನಷ್ಟೇ ಅಲ್ಲ, ನಿಮ್ಮ ದೇಹವನ್ನೂ ಡಿಟಾಕ್ಸಿಕೇಟ್‌ ಮಾಡುತ್ತದೆ.

ಇಡೀ ದಿನ ನಮ್ಮ ದೇಹದ ಚರ್ಮ ಕೆಲವು ಕೆಟ್ಟ ಬ್ಯಾಕ್ಟೀರಿಯಾಗಳನ್ನು ಸಹ ಹೀರಿಕೊಂಡಿರುತ್ತದೆ. ಉಪ್ಪು ಸೇರಿಸಿದ ಬಿಸಿ ನೀರು ನಮ್ಮ ಚರ್ಮವನ್ನು ಶುಚಿ ಮಾಡಿ ಆರೋಗ್ಯ ವಾಗಿರುವಂತೆ ಕಾಪಾಡುತ್ತವೆ. ಅದೇ ರೀತಿ ನಮ್ಮ ದೇಹವು ತುಂಬಾ ಹಗುರವಾಗಿರುತ್ತದೆ ಮತ್ತು ಆರಾಮವಾಗಿರುತ್ತದೆ.

LEAVE A REPLY

Please enter your comment!
Please enter your name here